More

    ರಂಗಭೂಮಿಯ ಹಿರಿಯ ಕಲಾವಿದೆ ಸುಭದ್ರಮ್ಮ ನಿಧನಕ್ಕೆ ಸಂತಾಪ

    ಹನುಮಂತರಾಯರ ರಕ್ತರಾತ್ರಿ ನಾಟಕದ ದ್ರೌಪದಿ ಪಾತ್ರದ ಮೂಲಕ ಮನೆಮಾತಾಗಿದ್ದ ಕಲಾವಿದೆ

    ತಾವರಗೇರಾ: ಕಂದಗಲ್ಲ ಹನುಮಂತರಾಯರ ರಕ್ತರಾತ್ರಿ ನಾಟಕದ ದ್ರೌಪದಿ ಪಾತ್ರದಿಂದಲೇ ಕಲಾವಿದೆ ಸುಭದ್ರಮ್ಮ ಮನ್ಸೂರು ಮನೆ ಮಾತಾಗಿದ್ದರು ಎಂದು ಕಸಾಪ ಹೋಬಳಿ ಘಟಕದ ಅಧ್ಯಕ್ಷ ಅಮರೇಶ ಗಲಗಲಿ ಹೇಳಿದರು.

    ಸ್ಥಳೀಯ ಕಸಾಪ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ದಿ.ಸುಭದ್ರಮ್ಮ ಮನ್ಸೂರು ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. 12ನೇ ವಯಸ್ಸಿಗೆ ರಂಗಭೂಮಿಗೆ ಕಾಲಿಟ್ಟಿದ್ದರು. ಇದರಿಂದ ಅವರು ಹಾಡುವುದನ್ನೂ ಸಹ ಕರಗತ ಮಾಡಿಕೊಂಡಿದ್ದರು. ಹನುಮಂತರಾಯರ ಕೃತಿಗಳಾದ ಚಿತ್ರಾಂಗದ, ಹೇಮರಡ್ಡಿ ಮಲ್ಲಮ್ಮ, ಪಾಂಚಾಲಿ, ನರವೀರ ಪಾರ್ಥ ಮುಂತಾದವುಗಳಲ್ಲಿ ದ್ರೌಪದಿ ಪಾತ್ರ ವಹಿಸಿದ್ದರೂ ಸಹ, ರಕ್ತರಾತ್ರಿ ನಾಟಕದಲ್ಲಿಯ ದ್ರೌಪದಿಯ ಪಾತ್ರ ಹೆಚ್ಚು ಕೀರ್ತಿ ತಂದು ಕೊಟ್ಟಿತು ಎಂದು ತಿಳಿಸಿದರು. ಪಿ.ವೈ.ದಾಸರ, ಶಾಂತಪ್ಪ, ಕಸಾಪ ಕಾರ್ಯದರ್ಶಿ ಬಸವರಾಜ ಅಂಗಡಿ, ಸದಸ್ಯರಾದ ರವಿ ಬಳಿಗಾರ, ವಿಜಯಕುಮಾರ್ ಸಾಸ್ವಿಹಾಳ, ಬಸವರಾಜ ದೇವರಮನಿ, ಪ್ರಮೋದಸಿಂಗ್, ಶ್ಯಾಮೂರ್ತಿ ಇದ್ದರು.

    ರಂಗಭೂಮಿಯ ಹಿರಿಯ ಕಲಾವಿದೆ ಸುಭದ್ರಮ್ಮ ನಿಧನಕ್ಕೆ ಸಂತಾಪ
    ಖ್ಯಾತ ರಂಗಭೂಮಿಯ ಕಲಾವಿದೆ ಕಲಾವಿದೆ ಸುಭದ್ರಮ್ಮ ಮನ್ಸೂರ್ ನಿಧನ ಹಿನ್ನಲೆ ಯಲಬುರ್ಗಾ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ರಂಗಭೂಮಿ ಕಲಾವಿದರು, ಸಾಹಿತಿಗಳು ಹಾಗೂ ಅಭಿಮಾನಿಗಳಿಂದ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts