More

    ಜಗತ್ತಿನ ಜನಸಂಖ್ಯೆ ಕೆಲವೇ ಗಂಟೆಗಳಲ್ಲಿ 800 ಕೋಟಿ; ಭಾರತ ಎಷ್ಟನೇ ಸ್ಥಾನದಲ್ಲಿ?

    ನವದೆಹಲಿ: ಜಗತ್ತಿನ ಜನಸಂಖ್ಯೆ ಇನ್ನು ಕೆಲವೇ ಗಂಟೆಗಳಲ್ಲಿ 800 ಕೋಟಿಯನ್ನು ತಲುಪಲಿದೆ. ಯುನೈಟೆಡ್​ ನೇಷನ್ಸ್​ ಅಂದಾಜಿಸಿರುವ ಪ್ರಕಾರ 2022ರ ನ. 15ಕ್ಕೆ ಜಗತ್ತಿನ ಜನಸಂಖ್ಯೆ 8 ಬಿಲಿಯನ್ ಅಂದರೆ 800 ಕೋಟಿಯನ್ನು ತಲುಪಲಿದೆ. ಮಾತ್ರವಲ್ಲ, ಮುಂದಿನ ಎಷ್ಟು ವರ್ಷಗಳಲ್ಲಿ ಜನಸಂಖ್ಯೆ ಎಷ್ಟನ್ನು ತಲುಪಲಿದೆ ಎಂಬುದನ್ನೂ ಅದು ಅಂದಾಜಿಸಿದೆ.

    2030ರ ವೇಳೆಗೆ ಜಗತ್ತಿನ ಜನಸಂಖ್ಯೆ 850 ಕೋಟಿಯನ್ನು ತಲುಪಲಿದೆ. ಅಲ್ಲದೆ 2050ಕ್ಕೆ ಇದು 970 ಕೋಟಿಗೆ ತಲುಪಿ, 2080ರ ಸುಮಾರಿಗೆ 1040 ಕೋಟಿಯನ್ನು ದಾಟಲಿದೆ ಎಂಬ ಅಂದಾಜನ್ನು ಮಾಡಲಾಗಿದೆ. ಆದರೆ 2080ರಿಂದ 2100ರ ವರೆಗೆ ಜನಸಂಖ್ಯೆ ಒಂದು ಸಮತೋಲನದಲ್ಲಿ ಇರಲಿದೆ ಎಂದೂ ಹೇಳಲಾಗಿದೆ.

    ಅಂದರೆ 1974ರಲ್ಲಿ ಇದ್ದಿದ್ದಕ್ಕಿಂದ ಜಗತ್ತಿನ ಸಂಖ್ಯೆ ಇದೀಗ ದುಪ್ಪಟ್ಟಾಗಿದೆ. ಅದಾಗ್ಯೂ ಜನಸಂಖ್ಯೆ ಏರಿಕೆಯಲ್ಲಿ ನಿಧಾನಗತಿ ಕಂಡುಬಂದಿದೆ. 700 ಕೋಟಿ ಇದ್ದ ಜನಸಂಖ್ಯೆ 800 ಕೋಟಿ ತಲುಪಲು 12 ವರ್ಷಗಳನ್ನು ತೆಗೆದುಕೊಂಡಿದೆ. ಹಾಗೆ 900 ಕೋಟಿ ಜನಸಂಖ್ಯೆಯನ್ನು ತಲಪಲು ಇನ್ನು ಮುಂದಿನ 15 ವರ್ಷಗಳಿಗಿಂತಲೂ ಹೆಚ್ಚಿನ ಸಮಯ ಬೇಕಾಗಲಿದೆ ಎಂದೂ ಹೇಳಲಾಗಿದೆ.

    ಇದನ್ನೂ ಓದಿ: ರಾಜ್ಯದಲ್ಲಿ ವಾಡಿಕೆಗೆ ಮೊದಲೇ ಚಳಿ ಶುರು; ಗರಿಷ್ಠ ತಾಪಮಾನದಲ್ಲಿ ಕುಸಿತ..

    ಅಚ್ಚರಿ ಎಂದರೆ ಜಗತ್ತಿನ ಅರ್ಧದಷ್ಟು ಜನಸಂಖ್ಯೆ 7 ದೇಶಗಳಲ್ಲಿ ಹಂಚಿಹೋಗಿದೆ. ಜನಸಂಖ್ಯೆಯಲ್ಲಿ ಚೀನಾ (143 ಕೋಟಿ) ಮೊದಲ ಸ್ಥಾನದಲ್ಲಿದ್ದರೆ, ಭಾರತ (142 ಕೋಟಿ) ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಯುಎಸ್, ಇಂಡೋನೇಷ್ಯಾ, ಪಾಕಿಸ್ತಾನ, ನೈಜೀರಿಯಾ, ಬ್ರೆಜಿಲ್​ಗಳು ನಂತರದ ಸ್ಥಾನಗಳಲ್ಲಿದ್ದು, ಈ ಏಳು ದೇಶಗಳಲ್ಲಿ ಜಗತ್ತಿನ ಅರ್ಧದಷ್ಟು ಜನರಿದ್ದಾರೆ.

    ಪುರುಷರೇ ‘ಸೋ ಸ್ವೀಟ್​’, ಮಹಿಳೆಯರಲ್ಲ..!; ಇಲ್ಲಿದೆ ಅಂಕಿ-ಅಂಶ..

    ಮೂರು ವರ್ಷದ ಮಗುವನ್ನೂ ಬಿಡದ ಕಾಮುಕ ಮುದುಕ; ಅತ್ಯಾಚಾರ ಆರೋಪಿಯ ಬಂಧನ..

    ಜಗತ್ತಿನ ಜನಸಂಖ್ಯೆ ಕೆಲವೇ ಗಂಟೆಗಳಲ್ಲಿ 800 ಕೋಟಿ; ಭಾರತ ಎಷ್ಟನೇ ಸ್ಥಾನದಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts