More

    ತಾಳಿಯನ್ನೇ ಅಡವಿಟ್ಟು ತಿಥಿ ಮುಗಿಸಿದ ಕರೊನಾ ಸೇನಾನಿಯ ಪತ್ನಿ!

    ನರಗುಂದ: ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದ ಕರೊನಾ ಸೇನಾನಿಯ ತಿಥಿ ಕಾರ್ಯ ನೆರವೇರಿಸಲು ಅವರ ಪತ್ನಿ ತನ್ನ ತಾಳಿಯನ್ನೇ ಅಡವಿಟ್ಟ ಮನಕಲುಕುವ ಘಟನೆ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಭಾನುವಾರ ನಡೆದಿದೆ.

    ಈ ಸುದ್ದಿ ತಿಳಿದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ದೂರವಾಣಿ ಕರೆ ಮಾಡಿ ಆಕೆಗೆ ಸಾಂತ್ವನ ಹೇಳಿರುವುದರಿಂದ ಕುಟುಂಬದ ಸದಸ್ಯರಲ್ಲಿ ನೆರವು ಸಿಗುವ ಆಶಾಕಿರಣ ಮೂಡಿದೆ.

    ಇದನ್ನೂ ಓದಿ ಲವ್, ಡೇಟಿಂಗ್, ಧೋಖಾ: ಯುವತಿಯ ನಿಜಬಣ್ಣ ಬಯಲು

    ಹಗಲು ರಾತ್ರಿಯೆನ್ನದೆ ಹಲವಾರು ಕರೊನಾ ಶಂಕಿತರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ 108 ಆಂಬುಲೆನ್ಸ್ ಚಾಲಕ ಉಮೇಶ ಫಕ್ಕೀರಪ್ಪ ಹಡಗಲಿ ಅವರಿಗೆ ಮೇ 27 ರಂದು ಬೆಳಗ್ಗೆ ವಿಪರೀತ ಎದೆನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಅವರನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದರು. ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಅವರ ಕುಟುಂಬವು, ಆಂಬುಲೆನ್ಸ್ ಚಾಲಕರ ಸಂಘದ ಸದಸ್ಯರು ನೀಡಿದ 10 ಸಾವಿರ ರೂ. ಬಳಸಿ ಶವ ಸಂಸ್ಕಾರ ನೆರವೇರಿಸಿತ್ತು.

    ಕರೊನಾ ವಾರಿಯರ್ ಆಗಿದ್ದ ಉಮೇಶ ಅವರ ಕುಟುಂಬಕ್ಕೆ ಸರ್ಕಾರದ ನಿಯಮದಡಿ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಸತೀಶ ಬಸರಿಗೀಡದ ಅವರಿಗೆ ಮನವಿ ಮಾಡಲಾಗಿತ್ತು. ಆದರೆ, ಚಾಲಕ ಮೃತಪಟ್ಟು 5 ದಿನ ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಆತನ ಮನೆಗೆ ಸೌಜನ್ಯಕ್ಕಾದರೂ ಭೇಟಿ ನೀಡಲಿಲ್ಲ.

    ಇದನ್ನೂ ಓದಿ ಯತ್ನಾಳ್ ಹೇಳಿಕೆಗೆ ಯಡಿಯೂರಪ್ಪ ಡೋಂಟ್ ಕೇರ್

    ಅಲ್ಲದೆ, ಡಿಎಚ್‌ಓ ಸತೀಶ ಬಸರಿಗೀಡದ ಅವರು, ‘‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಜಿವಿಕೆ ಸಂಸ್ಥೆಯೊಂದಿಗೆ ಮಾತನಾಡುತ್ತೇನೆ’’ ಎಂದು ಹೇಳಿದ್ದರು. ಇದ್ದರಿಂದ ದಿಕ್ಕು ತೋಚದಂತಾದ ಉಮೇಶ ಅವರ ಪತ್ನಿ ಜ್ಯೋತಿ, ತಿಥಿ ಕಾರ್ಯಕ್ಕಾಗಿ ತಮ್ಮ ತಾಳಿಯನ್ನೇ ಅಡವಿಟ್ಟರು. ಅದರಿಂದ ಬಂದ ಹಣದಲ್ಲಿ ಮಕ್ಕಳಾದ 13 ವರ್ಷದ ವಿನಾಯಕ, 8 ವರ್ಷದ ವಿಶ್ವ ಅವರ ಸಮ್ಮುಖದಲ್ಲಿ ಪತಿಯ ತಿಥಿ ಕಾರ್ಯ ಮಾಡಿ ಮುಗಿಸಿದರು.

    ಸುದ್ದಿಗಾರರ ಬಳಿ ತಮ್ಮ ಕಷ್ಟ ತೋಡಿಕೊಂಡ ಜ್ಯೋತಿ, ‘‘ಸರ್ಕಾರ ಕರೊನಾ ಸೇನಾನಿಗಳು ಮೃತಪಟ್ಟರೆ ಲಕ್ಷಾಂತರ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ. ಆದರೆ, ನಮ್ಮ ಇಡೀ ಕುಟುಂಬಕ್ಕೆ ಆಧಾರವಾಗಿದ್ದ ನನ್ನ ಗಂಡ ಸತ್ತು ಇದೀಗ ಐದು ದಿನಗಳು ಕಳೆದಿವೆ. ನಮಗೆ ಪರಿಹಾರ ಕೊಡುವುದಿರಲಿ, ಯಾರೊಬ್ಬರೂ ಸಾಂತ್ವನ ಹೇಳಲಿಲ್ಲ. ಇದರಿಂದ ನನಗೆ ಸಂಕಟ ಆಗಿದೆ. ಮಕ್ಕಳ ಶಿಕ್ಷಣಕ್ಕೂ ಹಣವಿಲ್ಲ. ದಿನನಿತ್ಯದ ಜೀವನ ಹೇಗೆ ಎಂಬುದು ತಿಳಿಯದಾಗಿದೆ’’ ಎಂದರು.

    ‘‘ಆರ್ಥಿಕ ಸಂಕಷ್ಟದಿಂದಾಗಿ ನನ್ನ ಗಂಡ ಕಟ್ಟಿದ ತಾಳಿಯನ್ನು ನನ್ನ ಕೈಯ್ಯರೆ ಅಡವಿಟ್ಟು, ಅದರಿಂದ ಬಂದ ಹಣದಲ್ಲಿ ಅವರ ತಿಥಿ ಕಾರ್ಯ ನೆರವೇರಿಸಿದ್ದೇನೆ. ಇದೀಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ನಮಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. 108 ತುರ್ತು ವಾಹನದ ವಿಮೆ ಹಾಗೂ ಸರ್ಕಾರದಿಂದ ದೊರೆಯಬೇಕಾದ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಏನಾಗುತ್ತದೋ ನೋಡೋಣ’’ ಎಂದು ಹೇಳಿದ್ದಾರೆ.

    ಪ್ರಿಯಕರನ ವಂಚನೆಯನ್ನು ಫೇಸ್‌ಬುಕ್‌ನಲ್ಲೂ ತೋಡಿಕೊಂಡಿದ್ದ ನಟಿ ಚಂದನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts