More

    ಮೆಲಾನಿಯ ಟ್ರಂಪ್ ಉಡುಗೆಗೆ ದೇಶಿ ಸ್ಪರ್ಶ: ಸೊಂಟಕ್ಕೆ ಕಟ್ಟಿದ್ದ ಶಲ್ಯದ ಹಿಂದಿದೆ ತುಂಬ ವಿಶೇಷತೆ!

    ಅಹಮದಾಬಾದ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್​ ಅವರು ತಮ್ಮ ಮಗಳು ಇವಾಂಕಾ ಟ್ರಂಪ್​ ಮತ್ತು ಅಳಿಯ ಜರೇದ್​ ಕುಶ್ನರ್​ ಜತೆ ಇಂದು ಬೆಳಗ್ಗೆ ಅಹಮದಾಬಾದ್​ಗೆ ಆಗಮಿಸಿ ಅದ್ಧೂರಿ “ನಮಸ್ತೆ ಟ್ರಂಪ್​” ಕಾರ್ಯಕ್ರಮದಲ್ಲಿ ಭಾಗಿಯಾದರು. ದಿಗ್ಗಜ ನಾಯಕರನ್ನು ಪ್ರಧಾನಿ ಮೋದಿ ಆತ್ಮೀಯವಾಗೇ ಬರಮಾಡಿಕೊಂಡರು.

    ಮೊದಲನೇ ಬಾರಿಗೆ ಭಾರತ ಪ್ರವಾಸದಲ್ಲಿರುವ ಮೆಲಾನಿಯಾ ಟ್ರಂಪ್ ವಿಮಾನದಿಂದ ಇಳಿಯುತ್ತಲೇ​ ಭಾರತೀಯರಿಗೆ ಸರ್ಪ್ರೈಸ್​ ನೀಡಿದರು. ಶ್ವೇತ ವರ್ಣದ ಉಡುಪಿನೊಂದಿಗೆ ಪ್ರಕಾಶಮಾನವಾದ ಹಸಿರು ಬಣ್ಣದ ಶಲ್ಯವನ್ನು ತಮ್ಮ ಸೊಂಟಕ್ಕೆ ಕಟ್ಟಿಕೊಂಡು ತಮ್ಮ ಉಡುಗೆಗೆ ದೇಶಿ ಸ್ಪರ್ಶವನ್ನು ನೀಡಿದ್ದು ಎಲ್ಲರ ಗಮನ ಸೆಳೆಯಿತು.

    ಭಾರತೀಯ ಡಿಸೈನರ್ಸ್ ಸಿದ್ಧಪಡಿಸಿದ ಉಡುಪನ್ನು ತೊಟ್ಟು ಭಾರತಕ್ಕೆ ಪ್ರವಾಸ ಮಾಡುತ್ತಾರೆ ಎಂಬ ಊಹಾಪೋಹಗಳಿಗೆ ಮಾಜಿ ಮಾಡೆಲ್​ ಮೆಲಾನಿಯಾ ಟ್ರಂಪ್​ ಪೂರ್ಣ ವಿರಾಮ ನೀಡಿದರು. ಬದಲಾಗಿ ಅಮೆರಿಕದ ಫ್ಯಾಶನ್​ ಡಿಸೈನರ್​ ಹರ್ವ್​ ಪಿಯರ್​ ಸಿದ್ಧಪಡಿಸಿದ್ದ ಶ್ವೇತವರ್ಣದ ಉಡುಗೆ ತೊಟ್ಟಿದ್ದರು.

    ಆದಾಗ್ಯೂ ಮೆಲಾನಿಯಾ ಟ್ರಂಪ್​ ಉಡುಗೆಗೆ ಹಸಿರು ಬಣ್ಣದ ಶಲ್ಯದ ಮೂಲಕ ನಮ್ಮ ದೇಶಿ ಸ್ಪರ್ಶವನ್ನು ನೀಡಲಾಗಿತ್ತು. ಸದಾ ಮೆಲೆನಿಯಾ ಟ್ರಂಪ್​ ಸ್ಟೈಲಿಶ್​ ಲುಕ್​ ನಿರ್ವಹಣೆ ಮಾಡುವ ಫ್ರೆಂಚ್​ ಅಮೆರಿಕನ್​ ಡಿಸೈನರ್ ಹರ್ವ್​ ಪಿಯರ್​ ತಮ್ಮ ಇನ್​​ಸ್ಟಾಗ್ರಾಂನಲ್ಲಿ ವಿಶೇಷ ಉಡುಗೆ ಬಗ್ಗೆ ವಿವರಣೆ ನೀಡಿದ್ದು, ಹಸಿರು ಮತ್ತು ಚಿನ್ನ​ದ ಚಿತ್ತಾರ ಇರುವ ಶಲ್ಯವನ್ನು ಭಾರತೀಯ 20ನೇ ಶತಮಾನದ ಜವಳಿ ದಾಖಲೆಯಿಂದ ಎರವಲು ಪಡೆಯಲಾಗಿದೆ. ಅದನ್ನು ಪ್ಯಾರಿಸ್​ನಲ್ಲಿ ಪತ್ತೆ ಹಚ್ಚಲಾಗಿತ್ತು ಎಂದು ಬರೆದುಕೊಂಡಿದ್ದಾರೆ.

    ಶಲ್ಯವನ್ನು ಹಸಿರು ರೇಷ್ಮೆ ಮತ್ತು ಚಿನ್ನದ ಲೋಹದ ಎಳೆಯಿಂದ ತಯಾರಿಸಲಾಗಿದೆ ಎಂದು ಹರ್ವ್​ ಪಿಯರ್​ ಇದೇ ವೇಳೆ ಮಾಹಿತಿ ನೀಡಿದರು. ಏನೇ ಆದರೂ ಅಮೆರಿಕ ಫ್ಯಾಶನ್​ನೊಂದಿಗೆ ದೇಶಿ ಸ್ಪರ್ಶವನ್ನು ನೀಡಿದ್ದು ಭಾರತ ಮತ್ತು ಅಮೆರಿಕ ಸಂಬಂಧದ ಸಂಕೇತವಾಗಿತ್ತು ಎಂದು ಅನೇಕರ ಅಭಿಪ್ರಾಯವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts