More

    ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹ

    ಕಲಘಟಗಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಎಲ್ಲ ಬಿಸಿಯೂಟ ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಅಶೋಕ ಶಿಗ್ಗಾವಿ ಹಾಗೂ ಜಿಪಂ ಸಿಇಒ ಬಿ. ಸುಶೀಲಾ ಅವರಿಗೆ ಮನವಿ ಅರ್ಪಿಸಿದರು.

    ಕರೊನಾ ಸಂದರ್ಭದ ವೇತನ ಪಾವತಿಸಬೇಕು. ಶಾಲೆಗಳಲ್ಲಿ ಗ್ರುಪ್ ಡಿ ನೌಕರರಿಲ್ಲದೆ ಇರುವುದರಿಂದ ಅವರ ಕೆಲಸವನ್ನು ನಾವೇ ಮಾಡುತ್ತಿರುವುದರಿಂದ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ನೂತನ ಶಿಕ್ಷಣ ನೀತಿ 2020 ಜಾರಿ ಮಾಡುವಾಗ ಬಿಸಿಯೂಟ ಯೋಜನೆ ಬಲಿಷ್ಠಗೊಳಿಸಿ, ನಿವೃತ್ತಿ ವೇತನ ಮತ್ತು ಆರೋಗ್ಯ ಸೌಲಭ್ಯ ಒದಗಿಸಬೇಕು. ಲಾಕ್​ಡೌನ್​ನಿಂದ ಆರ್ಥಿಕ ಸಂಕಷ್ಟಕ್ಕೀಡಾಗಿರುವ ನಮಗೆ 7500 ರೂ. ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

    ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದ ಬಿಸಿಯೂಟ ನೌಕರರು, ತಾಪಂ ಕಾರ್ಯಾಲಯಕ್ಕೆ ಭೇಟಿ ನೀಡಿದ ಜಿಪಂ ಸಿಇಒ ಬಿ. ಸುಶೀಲಾ ಅವರಿಗೆ ಮನವಿ ಅರ್ಪಿಸಿ, ತಮ್ಮ ಕಷ್ಟ ತೋಡಿಕೊಂಡರು. ಅಲ್ಲಿಂದ ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಅಶೋಕ ಶಿಗ್ಗಾವಿಗೆ ಮನವಿ ಸಲ್ಲಿಸಿದರು.

    ಸಂಘದ ತಾಲೂಕು ಅಧ್ಯಕ್ಷೆ ಚನ್ನಮ್ಮ ಡೊಳ್ಳಿನ, ಖಜಾಂಚಿ ಬಸಿರಾಬೇಗಂ ಬುಡ್ಡಾಖಾನ್, ಕಾರ್ಯದರ್ಶಿ ಸುಮಂಗಲಾ ಜಂಗಳೆಪ್ಪಗೌಡ್ರ, ಗೀತಾ ಕೊರವರ, ಯಲ್ಲವ್ವ ಶೆರೇವಾಡ, ಯಲ್ಲಮ್ಮ ರಾಮನಾಳ, ಶೋಭಾ ನಾಗನೂರ, ಮರಿಯಾ, ಮಾಲಾ ಬಸ್ತಿ, ಲಕ್ಷ್ಮೀ, ಕಲಾವತಿ ಲಕಮಾಪುರ, ಗೀತಾ ಕೊಟಗುಣಶಿ, ಶಿವಲೀಲಾ ಯಳವತ್ತಿ, ಯಲ್ಲವ್ವ, ಕಲಾವತಿ, ಮಂಜುಳಾ ವಾಲಿಕಾರ, ಪದ್ಮಾವತಿ ನಿಕ್ಕಂ ಮೊದಲಾದವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts