More

    ಪರಿಶುದ್ಧ ಬದುಕಿನ ಅಪೂರ್ವ ವ್ಯಕ್ತಿತ್ವ

    ಕಾರ್ಕಳ: ವೃತ್ತಿ ಮತ್ತು ಸಾರ್ವಜನಿಕ ಬದುಕಿನಲ್ಲಿ ಪರಿಶುದ್ಧ ಬದುಕನ್ನು ಬದುಕುತ್ತಿರುವ ಅಪೂರ್ವ ವ್ಯಕ್ತಿತ್ವ ಎಂ.ಕೆ.ವಿಜಯ ಕುಮಾರ್ ಅವರದ್ದಾಗಿದೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿರುವುದು ಹೆಮ್ಮೆಯ ಸಂಗತಿ ಎಂದು ಹಿರಿಯ ಸಾಮಾಜಿಕ ನೇತಾರ, ಜಿಪಂ ಮಾಜಿ ಉಪಾಧ್ಯಕ್ಷ ಡಾ.ಸಂತೋಷ ಕುಮಾರ್ ಶೆಟ್ಟಿ ಹೇಳಿದರು.

    ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಕನ್ನಡ ಸಾಹಿತ್ಯ ಪರಿಷತ್ತು ಅಜೆಕಾರು ಹೋಬಳಿ ಮತ್ತು ಆದಿಗ್ರಾಮೋತ್ಸವ ಸಮಿತಿ ಆಯೋಜಿಸಿದ್ದ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪುರಸ್ಕೃತ ಹಿರಿಯ ವಕೀಲ ಎಂ.ಕೆ.ವಿಜಯಕುಮಾರ್ ಅವರನ್ನು ಸ್ವಗೃಹದಲ್ಲಿ ಸನ್ಮಾನಿಸಿ ಮಾತನಾಡಿದರು.

    ಸಾಧನೆ ನಮ್ಮ ಹಿರಿಯರ ಬಳುವಳಿ. ಗೌರವವನ್ನು ಸಮಾಜಕ್ಕೆ ಸಮರ್ಪಿಸುತ್ತೇನೆ. ಹಿರಿಯ ವಕೀಲರಾದ ಎನ್.ಬಿ.ಶೆಟ್ಟಿ ಅಂದು ನೀಡಿದ ಪ್ರೋತ್ಸಾಹ ಈ ವೃತ್ತಿಯಲ್ಲಿ ಸಾಧನೆ ಮಾಡಲು ಗಟ್ಟಿ ತಳಪಾಯ ಎಂದು ಎಂ.ಕೆ. ವಿಜಯ ಕುಮಾರ್ ಹೇಳಿದರು.

    ಸಮಿತಿ ಅಧ್ಯಕ್ಷ ಡಾ.ಶೇಖರ ಅಜೆಕಾರು, ಹಿರಿಯ ಶಿಕ್ಷಕ ಮೌರೀಸ್ ತಾವ್ರೋ ಅಜೆಕಾರು, ರೋಟರಿ ಕ್ಲಬ್ ಕಾರ್ಕಳದ ನಿಕಟಪೂರ್ವ ಅಧ್ಯಕ್ಷ ಶೈಲೇಂದ್ರ ರಾವ್, ಕಾರ್ಕಳ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಬಿ.ಜಗದೀಶ, ಸ್ವರ್ಣೋದ್ಯಮಿ ಕೆ.ಗೋಪಾಲ, ವಕೀಲ ಸುವೃತ ಕುಮಾರ್, ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ಅತಿಥಿಗಳಾಗಿದ್ದರು. ಸಮಿತಿ ಸದಸ್ಯ ಸಂತೋಷ್ ಜೈನ್ ಎಣ್ಣೆಹೊಳೆ, ಸುನಿಧಿ ಎಸ್. ಅಜೆಕಾರು, ಸುನಿಜ ಅಜೆಕಾರು, ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಅಜೆಕಾರು ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts