More

    ಗಂಭೀರ ನಾಟಕಗಳ ಸಮಯವಿದು, ಕೃತಿ ಅನಾವರಣಗೊಳಿಸಿ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅಭಿಪ್ರಾಯ

    ಮಂಗಳೂರು: ಅಕ್ಷತಾ ರಾಜ್ ಪೆರ್ಲ ಅವರ ‘ಮಂದಾರ ಮಲಕ’ ಹಾಗೂ ಬಾಲಕೃಷ್ಣ ಕೊಡವೂರು ಅವರ ‘ಮಾಯದಪ್ಪೆ ಮಾಯಕಂದಾಲ್’ ತುಳು ನಾಟಕ ಕೃತಿಗಳ ಬಿಡುಗಡೆ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆಯಿತು.

    ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಇದು ಗಂಭೀರ ನಾಟಕಗಳತ್ತ ಪ್ರೇಕ್ಷಕರು ಮುಖ ಮಾಡಿದ ಸಮಯ. ಇಂಥ ಸಂದರ್ಭದಲ್ಲಿ ಈ ಕೃತಿಗಳು ಬಿಡುಗಡೆ ಕಂಡಿರುವುದು ಪ್ರಸ್ತುತ. ಇದು ನಾಟಕಗಳಾಗಿ ತೆರೆಯ ಮೇಲೆ ಮೂಡಿಬರಲಿ ಎಂದು ಶುಭ ಹಾರೈಸಿದರು. ಕೆಲವೊಮ್ಮೆ ನಾಟಕ ಕೃತಿಗಳು ರಂಗಭೂಮಿಗೆ ಅಳವಡಿಸುವ ಸಮಯದಲ್ಲಿ ಮೂಲ ಸ್ವರೂಪವನ್ನೇ ಬದಲು ಮಾಡುವ ಕಾರ್ಯ ನಡೆಯುತ್ತಿದೆ. ಈ ಕೃತಿಗಳು ಇಂಥ ಅಪಾಯಕ್ಕೆ ತುತ್ತಾಗದಂತೆ ಎಚ್ಚರ ವಹಿಸುವಂತೆ ಲೇಖಕರಿಗೆ ಸೂಚಿಸಿದರು.

    ‘ಮಂದಾರ ಮಲಕ’ ತುಳು ನಾಟಕ ಕೃತಿಯ ಬಗ್ಗೆ ಡಾ.ಮೀನಾಕ್ಷಿ ರಾಮಚಂದ್ರ, ‘ಮಾಯದಪ್ಪೆ ಮಾಯಕಂದಾಲ್’ ಕೃತಿ ಬಗ್ಗೆ ಶಶಿರಾಜ್ ಕಾವೂರು ಪರಿಚಯ ನೀಡಿದರು. ಅಕ್ಷತಾ ರಾಜ್ ಪೆರ್ಲ ಸ್ವಾಗತಿಸಿದರು. ಬಾಲಕೃಷ್ಣ ಕೊಡವೂರು ವಂದಿಸಿದರು. ವಿ.ಕೆ.ಕಡಬ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts