More

    ಮೂರೀರ ಕುಟುಂಬದ ವಾರ್ಷಿಕ ತೆರೆ ಸಂಪನ್ನ

    ವಿರಾಜಪೇಟೆ: ವನದೇವರ ಆರಾಧನೆ ಮತ್ತು ಕುಲ ಕುಟುಂಬಗಳ ಆರಾಧನಾ ಪದ್ಧತಿಗಳು ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಮೂರೀರ ಕುಟುಂಬದ ವಾರ್ಷಿಕ ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ಇತ್ತೀಚೆಗೆ ನಡೆಯಿತು.

    ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಗ್ರಾಮದಲ್ಲಿ ನೆಲೆಸಿರುವ ಮೂರೀರ ಕುಟುಂಬದ ಅಧೀನದಲ್ಲಿರುವ ಮಂದ್ರಮೂರ್ತಿ, ವಿಷ್ಣು ಮೂರ್ತಿ ಮತ್ತು ಕಾಳೇಘಾಟು ದೇವಿಯ ದೇಗುಲದಲ್ಲಿ ವಾರ್ಷಿಕ ತೆರೆ ಮಹೋತ್ಸವ ನೆರವೇರಿತು. ಎರಡು ದಿನಗಳ ಕಾಲ ನಡೆದ ಕಾರ್ಯದಲ್ಲಿ ಕುಟುಂಬ ವರ್ಗದವರು, ನೆರೆಯ ಗ್ರಾಮದ ಜನರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವಗಳ ದರ್ಶನ ಪಡೆದರು.

    ದೇಗುಲ ಆವರಣದಲ್ಲಿ ನಡೆಯುವ ಉತ್ಸವವನ್ನು ಕೇರಳ ರಾಜ್ಯದ ಕಾಳೇಘಾಟ್ ಸ್ಥಳದ ಪ್ರಸಿದ್ಧ ತಂತ್ರಿ ಸಂದೀಪ್ ಗಣಪತಿ ಹೋಮ ಮತ್ತು ದೈವಿಕ ವಿಧಾನ ನಡೆಸಿದರು. ಬಳಿಕ ದೇವಿ ಮತ್ತು ಶಾಸ್ತ್ತಾವು, ಮಂದ್ ಅಜ್ಜಪ್ಪ ದೇವರಿಗೆ ವಿಶೇಷ ಅಲಂಕಾರ ಪೂಜೆ, ಮಹಾಪೂಜೆ ಸಲ್ಲಿಸಲಾಯಿತು. ಮೊದಲ ದಿನ ತೆರೆ, ನುಚ್ಚುಟ್ಟೆ ತೆರೆಗಳು ಮುಂಜಾನೆಯವರೆಗೂ ನಡೆದು ಮರು ದಿನ ಚೌಂಡಿ ತೆರೆ, ಕುಳಿಯ ತೆರೆ, ತೌಡು ತೆರೆ, ಶಾಸ್ತಾವು ತೆರೆ ಮತ್ತು ಕೊನೆಯಲ್ಲಿ ಅಜ್ಜಪ್ಪ ತೆರೆಗಳು ಸಾಂಪ್ರದಾಯಿಕವಾಗಿ ನಡೆದವು. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.

    ಮೂರೀರ ಕುಟುಂಬ ಪಟ್ಟೇದಾರರಾದ ಕುಶಾಲಪ್ಪ, ದೈವ ನರ್ತಕರಾದ ಮಿಟ್ಟು ಚಿಟ್ಟಿಯಪ್ಪ ಮತ್ತು ಕುಟುಂಬಸ್ಥರು, ನೆರೆಯ ಗ್ರಾಮದ ಗ್ರಾಮಸ್ಥರು ದೈವಗಳ ಆರ್ಶೀವಾದ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts