More

    ವಿಶ್ವದ ಗಮನ ಸೆಳೆಯುತ್ತಿರುವ ಹಿಂದುತ್ವದ ಚಿಂತನೆ

    ಶಿಕಾರಿಪುರ: ಭಾರತ ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಜಗತ್ತನ್ನೇ ಬೆಳಗುತ್ತಿದೆ. ಹಿಂದುತ್ವದ ಚಿಂತನೆಗಳು ವಿಶ್ವದ ಗಮನ ಸೆಳೆಯುತ್ತಿದೆ ಎಂದು ಚಿಕ್ಕಬಳ್ಳಾಪುರದ ಹಿಂದು ಸೇವಾ ಪ್ರತಿಷ್ಠಾನದ ಜಿಲ್ಲಾ ಸಂಯೋಜಕ ಅನಿಲ್ ಕುಮಾರ್ ಹೇಳಿದರು.
    ಮೈತ್ರಿ ಶಾಲೆಯಲ್ಲಿ ಹಿಂದು ಸೇವಾ ಪ್ರತಿಷ್ಠಾನದಿಂದ ಸೇವಾಮಿತ್ರ ಯೋಜನೆಯಡಿ ಭಾನುವಾರ ಆಯೋಜಿಸಿದ್ದ ಬಾಲಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದು ಸೇವಾ ಪ್ರತಿಷ್ಠಾನವು ಗ್ರಾಮ, ನಗರಗಳಲ್ಲಿ ದೇಶಭಕ್ತಿಯನ್ನು ಬಿತ್ತುತ್ತಿದೆ. ಮೊದಲು ದೇಶ ಮುಖ್ಯ ಎಂಬುದನ್ನು ಬಾಲ ಸಂಗಮದಂತಹ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಸಂಸ್ಕಾರ, ಸದ್ವಿಚಾರಗಳು ಹಾಗೂ ಸಹನೀಯ ಗುಣಗಳನ್ನು ತಿಳಿಸಿಕೊಡುತ್ತಿದೆ. ಪ್ರತಿ ಮನೆಯಲ್ಲೂ ರಾಷ್ಟ್ರೀಯ ಚಿಂತನೆಗಳನ್ನು ಪಸರಿಸುತ್ತಿದೆ ಎಂದರು.

    ಸಾಂಘಿಕ ಜೀವನದಿಂದ ನಾವು ಸರ್ವರಲ್ಲಿ ಒಬ್ಬರಾಗಿ ಸಾಮಾಜಿಕ ಕಳಕಳಿಯನ್ನು ಹೊಂದುತ್ತೇವೆ. ಸಹಬಾಳ್ವೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ತಿಳಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಸಂಯೋಜಕ ವಿನೋದ್‌ಕುಮಾರ್, ಅಪರ್ಣಾ ಗುರುಮೂರ್ತಿ, ವಿಜಯಲಕ್ಷ್ಮೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts