More

    ಸ್ವರಶ್ರೀ ತೃತೀಯ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ

    ಬೆಂಗಳೂರು: ವಿಧುಷಿ ಸ್ನೇಹಾ ಹಂಪಿಹೊಳಿ ನೇತೃತ್ವದಲ್ಲಿ ನಡೆಯುತ್ತಿರುವ ಸ್ವರಶ್ರೀ ಸಂಗೀತ ಸಂಸ್ಥೆಯ ತೃತೀಯ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಶನಿವಾರ ನಡೆಯಲಿದೆ.
    ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಮೊದಲಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ನಂತರ ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ದಿನೇಶ್ ಗುರೂಜಿ ವಹಿಸಲಿದ್ದು, ‘ಸ್ವರ ಸಂಕಲನ’ ಕೃತಿಯನ್ನು ಬಾಗೂರು ಮಾರ್ಕಂಡೇಯ ಬಿಡುಗಡೆ ಮಾಡಲಿದ್ದಾರೆ. ವಿಧುಷಿ ಡಾ. ಲಕ್ಷ್ಮೀ ಬಿ.ರಾವ್ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
    ಸಪ್ತ ಸ್ವರಗಳ ಸಂಕೇತವಾಗಿ ಸಂಗೀತ ಕ್ಷೇತ್ರದ ಏಳು ಸಾಧಕರಿಗೆ ಸ್ವರಶ್ರೀ ಪ್ರಶಸ್ತಿ ಪ್ರದಾನ ನಡೆಯಲಿದೆ. ವಿದುಷಿ ಶಾರದಾ ಆದಿಶೇಷ, ಪದ್ಮಾ ಶ್ರೀಧರ, ನಾಗಲಕ್ಷ್ಮೀ ಭಾಸ್ಕರ, ವಿದುಷಿ ಭಾರತಿ ರಾಜಶೇಖರ, ಮನೋರಮಾ ಹೆಗಡೆ, ಬಾಲಸುಬ್ರಹ್ಮಣ್ಯಂ ಗ್ರಂಧಿ ಮತ್ತು ನಿನಾದ ಸಂಸ್ಕೃತಿ ಕಲಾಕೇಂದ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts