More

    ದೇಗುಲಗಳನ್ನು ತೆರೆಯಲು ಶೀಘ್ರದಲ್ಲೇ ಸಿಗಲಿದೆ ಅನುಮತಿ? ಮುಜರಾಯಿ ಸಚಿವರು ಹೀಗೆ ಹೇಳಿದ್ದಾರೆ…

    ಬೆಂಗಳೂರು: ನಿನ್ನೆ ದೇಶಾದ್ಯಂತ ಮದ್ಯದ ಅಂಗಡಿಗಳು ಬಾಗಿಲು ತೆರೆದು, ಭರ್ಜರಿ ವ್ಯಾಪಾರ ನಡೆದಿದೆ. ನಿಧಾನವಾಗಿ ಜನಜೀವನ ಸಹಜಸ್ಥಿತಿಗೆ ಬರುತ್ತಿದೆ. ಬಹುತೇಕ ಅಂಗಡಿ-ಮುಂಗಟ್ಟುಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ.

    ಈ ಮಧ್ಯೆ ಇನ್ನೊಂದು ಬೇಡಿಕೆಯನ್ನು ಜನರು ಸರ್ಕಾರದ ಎದುರು ಇಟ್ಟಿದ್ದಾರೆ. ಹಾಗೇ ಜನರ ಬೇಡಿಕೆಯನ್ನು ಪೂರೈಸಲು ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರೂ ಕೂಡ ಒಲವು ತೋರಿದ್ದಾರೆ.
    ಮದ್ಯದಂಗಡಿಗಳನ್ನೇ ಓಪನ್ ಮಾಡಲಾಗಿದೆ..ಆದರೆ ದೇವಸ್ಥಾನಗಳನ್ನು ಯಾಕೆ ತೆರೆಯುತ್ತಿಲ್ಲ ಎಂದು ನಿನ್ನೆಯಿಂದ ಅನೇಕರು ಪ್ರಶ್ನೆ ಮಾಡುತ್ತಿದ್ದರು. ಈ ಬಗ್ಗೆ ದಿಗ್ವಿಜಯ ನ್ಯೂಸ್​ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್​ ಪೂಜಾರಿಯವರ ಪ್ರತಿಕ್ರಿಯೆ ಕೇಳಿದಾಗ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

    ದೇವಸ್ಥಾನಗಳ ಬಾಗಿಲು ತೆರೆಯಿರಿ ಎಂದು ಜನರು ಬೇಡಿಕೆ ಇಡುತ್ತಿದ್ದಾರೆ. ನನಗೂ ಅನೇಕ ಕರೆಗಳು ಬಂದಿವೆ. ಒಮ್ಮೆ ಈ ಬಗ್ಗೆ ಮುಖ್ಯಮಂತ್ರಿಯವರ ಬಳಿ ಚರ್ಚಿಸಿದ್ದೇನೆ. ಇನ್ನೊಮ್ಮೆ ಪರಿಶೀಲನೆ ಮಾಡಿ ಎಂದು ಹೇಳಿದ್ದರು. ದೇವಾಲಯಗಳ ಬಾಗಿಲು ತೆರೆಯುವ ಮೊದಲು ಸಾಮಾಜಿಕ ಅಂತರ ಪಾಲನೆಗೆ ಒಂದು ಸೂತ್ರ ಮಾಡಬೇಕು. ಬೇರೆ ಅಂಗಡಿಗಳು, ಮಳಿಗೆಗಳಲ್ಲಿ ತಡೆಗಳನ್ನು ನಿರ್ಮಾಣ ಮಾಡಬಹುದು. ಆದರೆ ದೇವಾಲಯಗಳ ಗರ್ಭಗುಡಿಗಳಲ್ಲಿ ಅದನ್ನೆಲ್ಲ ಮಾಡಲು ಸಾಧ್ಯವಿಲ್ಲ.

    ಇದನ್ನೂ ಓದಿ: ಹೆರಿಗೆ ದಿನ ಸಮೀಪಿಸುತ್ತಿದ್ದರೂ ರಜೆ ಪಡೆಯುತ್ತಿಲ್ಲ ಈ ತಹಸೀಲ್ದಾರ್​..!

    ನನಗೂ ಅನೇಕರು ಕರೆ ಮಾಡುತ್ತಿದ್ದಾರೆ. ಇನ್ನೊಂದೆರಡು ದಿನಗಳಲ್ಲಿ ಮತ್ತೊಮ್ಮೆ ಪರಿಶೀಲನೆ ಮಾಡುತ್ತೇವೆ. ವಿವಿಧ ಧಾರ್ಮಿಕ ಮುಖಂಡರ ಜತೆ ಚರ್ಚಿಸುತ್ತೇವೆ. ಶೀಘ್ರದಲ್ಲೇ ತೆರೆಯಬೇಕು ಎಂಬ ಆಸೆ ಇದೆ. ಈಗಲೂ ಅಷ್ಟೇ ದೇಗುಲಗಳಲ್ಲಿ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ಇಲ್ಲ. ಆದಷ್ಟು ಬೇಗ ಪ್ರವೇಶ ನೀಡಲು ಕ್ರಮ ಕೈಗೊಳ್ಳುವ ಬಗ್ಗೆ ಯೋಚನೆ ಮಾಡಿದ್ದೇವೆ ಎಂದು ದಿಗ್ವಿಜಯ ನ್ಯೂಸ್​ಗೆ ತಿಳಿಸಿದ್ದಾರೆ.
    ಏನು ಹೇಳ್ತಾರೆ ಸಿಎಂ?

    ಇದನ್ನೂ ಓದಿ: ಸದ್ಗುರು ಕಾರ್ಯಕ್ರಮ ಕರೊನಾ ಹರಡುವ ಹಾಟ್​ಸ್ಪಾಟ್​ ಆಯಿತೇ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!​

    ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬೇರೆಯದೇ ಹೇಳಿದ್ದಾರೆ. ದೇವಸ್ಥಾನಗಳ ಬಾಗಿಲು ತೆರೆಯುವ ಪ್ರಸ್ತಾಪ ಸರ್ಕಾರದ ಎದುರು ಇಲ್ಲ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಜನಸಾಮಾನ್ಯರಿಗೆ ಸಿ.ಕೆ.ರಾಮಮೂರ್ತಿ ನೆರವಿನ ಶ್ರೀರಕ್ಷೆ: ಕರೊನಾ ಸಮಯದಲ್ಲಿ ದಂಪತಿ ಕಾರ್ಯಕ್ಕೆ ಶ್ಲಾಘನೀಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts