More

    ಕಳ್ಳತನ ಮಾಡಿದ್ದ ವಸ್ತು ಫೈನಾನ್ಸ್ ಕಂಪನಿಗಳಲ್ಲಿ ಅಡವಿಟ್ಟಿದ್ದ!

    ಶಿವಮೊಗ್ಗ: ಆರ್‌ಎಂಎಲ್ ನಗರದಲ್ಲಿ ಮನೆ ಕಳ್ಳತನ ಪ್ರಕರಣವೊಂದರ ಆರೋಪಿಯನ್ನು ಬಂಧಿಸಿರುವ ದೊಡ್ಡಪೇಟೆ ಪೊಲೀಸರು ಒಟ್ಟು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ಅಲಂಕಾರಿಕ ವಸ್ತುಗಳು, ಬೆಲೆಬಾಳುವ ವಾಚ್‌ಗಳು, 500 ರಿಯಾಲ್ ಮುಖಬೆಲೆಯ ಸೌದಿ ಅರೇಬಿಯಾದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ತಿಮ್ಮಾ ನಗರದ ಸಲೀಂ (44) ಎಂಬಾತನನ್ನು ಬಂಧಿಸಲಾಗಿದೆ.

    ಆರ್‌ಎಂಎಲ್ ನಗರದ ಸಲ್ಮಾಖಾನಂ 2022ರ ಮೇ 25ರಂದು ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಅಲ್ಲಿ ಪತಿಯೊಂದಿಗೆ ವಾಸವಿದ್ದ ಅವರು, 2023ರ ಜೂನ್ 6ರಂದು ಮನೆಗೆ ಮರಳಿದ್ದರು. ಈ ವೇಳೆ ಮನೆಯ ಬೀಗ ಮುರಿದು ಬೀರುವಿನಲ್ಲಿದ್ದ ಚಿನ್ನಾಭರಣ, ಬೆಳ್ಳಿ ಆಭರಣ, ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿರುವುದು ಅವರ ಗಮನಕ್ಕೆ ಬಂದಿತ್ತು. ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.
    ಚಿನ್ನಾಭರಣ ಅಡವಿಟ್ಟಿದ್ದ!: ಬಂಧಿತ ಸಲೀಂ ವೃತ್ತಿಯಲ್ಲಿ ಫ್ಯಾಬ್ರಿಕೇಷನ್ ಮಾಡುವವನು. ಆತ ಸಲ್ಮಾಖಾನಂ ಮನೆಯಲ್ಲಿ ಕಳ್ಳತನ ಮಾಡಿದ್ದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಎರಡು ಫೈನಾನ್ಸ್ ಕಂಪನಿಗಳಲ್ಲಿ ಅಡವಿಟ್ಟಿದ್ದ. ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕ ಚಿನ್ನಾಭರಣ ಇರಿಸಿದ್ದ ಫೈನಾನ್ಸ್ ಕಂಪನಿಯ ಮಾಹಿತಿ ನೀಡಿದ್ದ.
    ಈತ ಶಿವಮೊಗ್ಗದಲ್ಲಿ ಇನ್ನೂ ಕೆಲವು ಮನೆ ಕಳ್ಳತನದಲ್ಲಿ ಭಾಗಿಯಾಗಿರುವ ಶಂಕೆ ಪೊಲೀಸರದ್ದು. ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಈತ ಕೃತ್ಯ ಎಸಗಿರುವ ಶಂಕೆಯಿದೆ. ಹೀಗಾಗಿ ಈತನನ್ನು ಇನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದ್ದಾರೆ.
    ವಶಕ್ಕೆ ಪಡೆದ ವಸ್ತುಗಳು:
    155 ಗ್ರಾಂ ಚಿನ್ನಾಭರಣ-8.28 ಲಕ್ಷ ರೂ.ಮೌಲ್ಯ.
    109 ಗ್ರಾಂ ಬೆಳ್ಳಿ ವಸ್ತುಗಳು-8,350 ರೂ.
    ಬೆಲೆಬಾಳುವ ವಾಚ್‌ಗಳು-21,400 ರೂ.
    ಅಲಂಕಾರಿಕ ವಸ್ತುಗಳು-69 ಸಾವಿರ ರೂ.
    500 ರಿಯಾಲ್ ಮುಖಬೆಲೆಯ ಸೌದಿ ನೋಟುಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts