More

    ಆಸ್ತಿ ಬರೆಯಿಸಿಕೊಂಡು ತಾಯಿಗೆ ಮೋಸ ಮಾಡಿದ ಮಗ !

    ಬೆಂಗಳೂರು: ‘ನೋಡಪ್ಪಾ ಡಿಸಿ, ತಿಪಟೂರು ತಾಲೂಕಿನ ಮಹಾದೇವಮ್ಮ ನನ್ನ ಬಳಿಗೆ ಬಂದಿದ್ದಾಳೆ. ಅವರಿಗೆ ತಲಾ ಒಬ್ಬರು ಹೆಣ್ಣು, ಗಂಡು ಮಕ್ಕಳಿದ್ದಾರೆ. ಮಗ ತನ್ನ ಹೆಸರಿಗೆ ಆಸ್ತಿ ಬರೆಯಿಸಿಕೊಂಡು ಮೋಸ ಮಾಡಿದ್ದಾನಂತೆ, ಆಸ್ತಿ ವಿಭಾಗದ ತಕರಾರು ಎಸಿ ಕೋರ್ಟ್ ಗೆ ಸಲ್ಲಿಸಿದ್ದಾರೆ. ಪೊಲೀಸರನ್ನು ಕಳಿಸಿ ತಾಯಿ, ಮಗನ ಮುಂದೆ ಕೂರಿಸಿಕೊಂಡು ಸಮಸ್ಯೆ ಬಗೆಹರಿಸಿ’ ತುಮಕೂರು ಜಿಲ್ಲಾಧಿಕಾರಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಸೂಚನೆಯಿದು.

    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ ಸ್ಪಂದಿಸಿದ ಬಗೆಯಿದು. ಅದೇ ರೀತಿ ರಾಮನಗರ ಜಿಲ್ಲೆಯ ಸುಗ್ಗನಹಳ್ಳಿಯ ರಾಜಮ್ಮ ತನ್ನ ಜಮೀನು ಒತ್ತುವರಿ ಮಾಡಿಕೊಂಡಿದ್ದು ಬಿಡಿಸಿಕೊಡಿ ಎಂದು ಅಳಲು ತೋಡಿಕೊಂಡರು. ರಾಮನಗರ ಜಿಲ್ಲಾಧಿಕಾರಿಗೆ ಫೋನ್ ನಲ್ಲಿ ಸಂಪರ್ಕಿಸಿದ ಸಿದ್ದರಾಮಯ್ಯ, ಸ್ಥಳ ಸಮೀಕ್ಷೆ ಮಾಡಿ ಒತ್ತುವರಿ ಸಮಸ್ಯೆ ಇತ್ಯರ್ಥಪಡಿಸಲು ತಾಕೀತು ಮಾಡಿದರು.

    ಪರಿಹಾರ ವಿತರಣೆಗೆ ಸೂಚನೆ

    ಬಳ್ಳಾರಿ ಜಿಲ್ಲೆಯ ಹೊಸಾಪುರ ತಾಲೂಕಿನಲ್ಲಿ 10 ಎಕರೆ ಜಮೀನು ಕೆಎಐಡಿಬಿಯವರು ಸ್ವಾಧೀನ ಮಾಡಿಕೊಂಡು ಇನ್ನೂ ಪರಿಹಾರ ಕೊಟ್ಟಿಲ್ಲ. ಆದರೆ ಜಿಂದಾಲ್ ನವರು ಕೆಲಸ ಆರಂಭಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಅದೇನೆಂದು ಪರಿಶೀಲಿಸಿ ಕ್ರಮವಹಿಸಿರಿ ಎಂದು ಬಳ್ಳಾರಿ ಡಿಸಿಗೆ ಸಿದ್ದರಾಮಯ್ಯ ಸೂಚಿಸಿದರು.

    ರಾಣೆಬೆನ್ನೂರಿನ ಜೀವ ಬೆಳಕು ಅಂಧ ಮಕ್ಕಳ ಶಾಲೆಗೆ ಸಿ.ಎ. ನಿವೇಶನ ಮಂಜೂರಾಗಿದ್ದು, ಇದಕ್ಕಾಗಿ 9 ಲಕ್ಷ ರೂ. ಪಾವತಿಸುವಂತೆ ಸೂಚಿಸಿದ್ದಾರೆ. ಇದನ್ನು ಪಾವತಿಸಲು ಶಕ್ತರಿಲ್ಲದ ಕಾರಣ ಹಣ ಪಾವತಿಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದರು. 

    ಆನ್ ಲೈನ್ ಮೂಲಕ ಹಾವೇರಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ಸಿಎಂ, ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts