More

    ಜೀರ್ಣಾವಸ್ಥೆ ತಲುಪಿದ ಶಾಲಾ ಗೋಡೆ

    ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಹಂಚುಗಳು ಒಡೆದು ಗೋಡೆಯ ಮೇಲೆ ನಿರಂತರವಾಗಿ ನೀರು ಬೀಳುತ್ತಿರುವುದರಿಂದ ಗೋಡೆಗಳು ಕುಸಿದು ಬೀಳುವಂತಾಗಿವೆ.
    ಚವಡಳ್ಳಿಯಲ್ಲಿನ ಉರ್ದು ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ಮಕ್ಕಳು ಓದುತ್ತಿದ್ದಾರೆ. ಜೀರ್ಣಾವಸ್ಥೆ ತಲುಪಿರುವ ಈ ಶಾಲೆಯ ಕಟ್ಟಡವನ್ನು ಇದೂವರೆಗೂ ದುರಸ್ತಿ ಮಾಡಿಲ್ಲ. ಈ ಕುರಿತು ಶಾಲಾ ಅಭಿವೃದ್ಧಿ ಸಮಿತಿಯವರು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮೌಖಿಕ ಹಾಗೂ ಲಿಖಿತವಾಗಿ ಮನವಿ ಮಾಡಿದರೂ ಯಾವೂದೇ ಪ್ರಯೋಜನವಾಗಿಲ್ಲ. ಶಾಲೆಯ ಮೇಲ್ಛಾವಣಿಯ ಹಂಚುಗಳು ಒಡೆದಿವೆ. ಹೀಗಾಗಿ, ಮಳೆನೀರು ಮೇಲೆ ಬಿದ್ದು ಗೋಡೆಗಳು ಹಸಿಯಾಗಿ, ಆಗಲೋ ಈಗಲೋ ಬೀಳುವಂತಾಗಿವೆ. ಇದರಿಂದ ಮಕ್ಕಳು ಆತಂಕದಲ್ಲಿ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts