More

    ಎಸ್ಸೆಸ್ಸೆಲ್ಸಿ ಕಲಿತವರಿಗೆ ರೈಲ್ವೆಯಲ್ಲಿ ಉದ್ಯೋಗ; ವಿವಿಧ ವಿಭಾಗಗಳಲ್ಲಿ ಅಪ್ರೆಂಟಿಸ್‌ಗಳ ನೇಮಕಾತಿ

    ಬೆಂಗಳೂರು: ಸೌತ್ ಈಸ್ಟರ್ನ್ ರೈಲ್ವೇಸ್ ವಿಭಾಗದಲ್ಲಿ (ಆಗ್ನೇಯ ರೈಲ್ವೆ-ಎಸ್‌ಇಆರ್) ತರಬೇತಿ ಸ್ಥಾನಗಳು ಇದ್ದು, ಶೀಘ್ರವೇ ನೇಮಕಾತಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ರೈಲ್ವೆ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ಕಾರ್ಯನಿರ್ವಹಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

    ಎಸ್‌ಇಆರ್ ಹಿನ್ನೆಲೆ 
    ಭಾರತದ 19 ಪ್ರಮುಖ ರೈಲ್ವೆ ವಲಯಗಳಲ್ಲಿ ಸೌತ್ ಈಸ್ಟರ್ನ್ ರೈಲ್ವೆ ವಲಯವೂ ಒಂದು. 1955ನೇ ಇಸವಿಯ ಆ.1ರಿಂದ ಈ ವಲಯವು ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ. 

    ಹುದ್ದೆಗಳ ವಿವರ (ವಿಭಾಗ-ಹುದ್ದೆಗಳು)
    ಸಿಗ್ನಲ್ – ಟೆಲಿಕಾಂ 87 
    ಟ್ರ್ಯಾಕ್ ಮೆಷಿನ್ ವರ್ಕ್‌ಶಾಪ್ 120
    ವರ್ಕ್‌ಶಾಪ್ 360
    ಕ್ಯಾರೇಜ್ – ವ್ಯಾಗನ್ ಡಿಪ್ಪೊ 121
    ಸೀನಿಯರ್ ಡಿಇಇ 90
    ಇಂಜಿನಿಯರಿಂಗ್ ವರ್ಕ್‌ಶಾಪ್ 100
    ಎಲೆಕ್ಟ್ರಿಕ್ ಲೋಕೊ ಶೇಡ್ 72
    ಎಸ್‌ಎಸ್‌ಇ 28
    ಡೀಸೆಲ್ ಲೋಕೊ ಶೆಡ್ 50
    ಟಿಆರ್‌ಡಿ ಡಿಪ್ಪೊ 40
    ಇತರ 717

    ಅರ್ಜಿ ಹೀಗೆ ಸಲ್ಲಿಸಿ 
    ರೈಲ್ವೆ ನೇಮಕಾತಿ ನಿಯಮಾನುಸಾರ ಇಲಾಖೆಯ ವೆಬ್‌ಸೈಟ್  https://iroams.com/RRCSER23/applicationIndex ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಭರ್ತಿ ಮಾಡಿದ ಅರ್ಜಿಯನ್ನು ಇದೇ ವೆಬ್‌ಸೈಟ್‌ನಲ್ಲಿ ಸಲ್ಲಿಸಬಹುದು.

    ಅರ್ಹತೆಗಳು

    ಶೈಕ್ಷಣಿಕ ಹಿನ್ನೆಲೆ: ಹುದ್ದೆಗಳ ಅನ್ವಯ ವಿದ್ಯಾರ್ಹತೆ ಇರಬೇಕು. ಶೆ.50 ಅಂಕಗಳೊಂದಿಗೆ 10ನೇ ಹಾಗೂ 12ನೇ ತರಗತಿ ತೇರ್ಗಡೆಯಾದವರು ಸಹಿತ ಐಟಿಐ ಕಲಿತವರು ಅರ್ಜಿ ಸಲ್ಲಿಸಲು ಅರ್ಹರು.

    ವಯಸ್ಸು: 2024ರ ಜನವರಿ ವೇಳೆ ಎಲ್ಲ ಅಭ್ಯರ್ಥಿಗಳು ಕನಿಷ್ಠ 15 ವರ್ಷ ಮೇಲ್ಪಟ್ಟಿರಬೇಕು. ಗರಿಷ್ಠ 24 ವರ್ಷ ವಯೋಮತಿ ನಿಗದಿಪಡಿಸಲಾಗಿದ್ದು, ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

    ಶುಲ್ಕ ಪಾವತಿ

    ಸಾಮಾನ್ಯ ಅಭ್ಯರ್ಥಿಯು 100 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಎಸ್ಸಿ, ಎಸ್ಟಿ, ಇತರ ವರ್ಗದ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. 

    ಅಭ್ಯರ್ಥಿ ಆಯ್ಕೆ
    ಅಭ್ಯರ್ಥಿಯ ಆಯ್ಕೆಯು 10ನೇ ತರಗತಿ, ಐಟಿಐಯಲ್ಲಿ ಪಡೆದ ಅಂಕಗಳ ಆಧಾರಿಸಿ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ. ಈ ಮೂಲಕ ಅಭ್ಯರ್ಥಿಯ ಆಯ್ಕೆ ಆಗಲಿದೆ. 

    ಪ್ರಮುಖ ಮಾಹಿತಿಗಳು 

    * ಅರ್ಜಿ ಸಲ್ಲಿಕೆ ವೇಳೆ ಗುರುತಿನ ಪುರಾವೆ, ವಿದ್ಯಾರ್ಹತೆ ಪುರಾವೆ ಹಾಗೂ ಆರೋಗ್ಯ ಪ್ರಮಾಣ ಪತ್ರಗಳ ನಕಲು ಪ್ರತಿಗಳನ್ನು ಕಡ್ಡಾಯ ಸಲ್ಲಿಸಬೇಕು.
    * ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಪೆಂಡ್ ನೀಡಲಾಗುತ್ತದೆ.
    * ಆಯ್ಕೆ ಅಥವಾ ನೇಮಕಾತಿ ಕುರಿತು ಅಭ್ಯರ್ಥಿಯ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್‌ಗೆ ಸಂದೇಶವನ್ನು ಇಲಾಖೆ ರವಾನಿಸಲಿದೆ.

    ಅರ್ಜಿ ಸಲ್ಲಿಸಲು ಅಂತಿಮ ದಿನ: 28.12.2023

    ಒಟ್ಟು ಹುದ್ದೆಗಳು: 1,785
    ಹೆಚ್ಚಿನ ಮಾಹಿತಿಗಾಗಿ: rrcser.co.in   

    ನೌಕಾದಳದಿಂದ ನೇಮಕಾತಿ ಅಧಿಸೂಚನೆ ಪ್ರಕಟ;ವಿವಿಧ ತರಬೇತಿ ಸ್ಥಾನಗಳಿಗೆ ನಡೆಯಲಿದೆ ಅಭ್ಯರ್ಥಿಗಳ ಆಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts