More

    ರಾಜ್ಯದಲ್ಲಿ ಮೇ 31ರವರೆಗೂ ಇರಲಿದೆ ಮಳೆಯ ಅಬ್ಬರ

    ಬೆಂಗಳೂರು: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಹಲವೆಡೆ ಮಳೆಯಾಗುತ್ತಿದ್ದು, ಮೇ 31ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಕೊಡಗು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ೋಷಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

    ಇದನ್ನೂ ಓದಿ  ಗುಜರಾತ್‌ನಿಂದ ಬಿಹಾರಕ್ಕೆ ಹೊರಟಿದ್ದ ರೈಲು ತಲುಪಿದ್ದು ಕರ್ನಾಟಕಕ್ಕೆ!

    ಮಂಗಳವಾರ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರಿ ಮಳೆಯಾಗಿದೆ. ರಾಜಧಾನಿಯಲ್ಲಿ ಗುಡುಗು-ಮಿಂಚು ಸಹಿತ ವರ್ಷಧಾರೆಯಾಗಿದೆ. ಅಲ್ಲಲ್ಲಿ ಜೋರಾಗಿ ಗಾಳಿಯೂ ಬೀಸಿದ್ದು, ಹಲವೆಡೆ ಮರಗಳು ಧರೆಗುರುಳಿವೆ.
    ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಗವಿಮಠಕ್ಕೆ ಹೊಂದಿಕೊಂಡಿರುವ ದಾಸೋಹ ಭವನದ ಛಾವಣಿಯ ಕುಂಬಿಗೆ ಸಿಡಿಲು ಬಡಿದು ಹಾನಿಯಾಗಿದೆ.

    ಮಠದ ಒಳಗಿನ ಭಾಗ ಮತ್ತು ಅಕ್ಕಪಕ್ಕದ ಕಟ್ಟಡಗಳು, ವಿದ್ಯುತ್ ತಂತಿ, ಮೀಟರ್, ಸಿ.ಸಿ. ಕ್ಯಾಮರಾ, ಕಂಪ್ಯೂಟರ್‌ಗಳು ಹಾಗೂ ಇತರ ಸಲಕರಣೆಗಳು ಹಾನಿಗೊಳಗಾಗಿವೆ.

    ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಜೆಬಿ ಹಳ್ಳಿ ಹಾಗೂ ಪಕ್ಕುರ್ತಿ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಬೀಸಿದ ಬಿರುಗಾಳಿಗೆ ಕಟಾವಿಗೆ ಬಂದಿದ್ದ 70 ಎಕರೆಗೂ ಅಧಿಕ ಬಾಳೆ ತೋಟಗಳು ನೆಲಕ್ಕುರುಳಿವೆ. ಎರಡು ಗ್ರಾಮಗಳ 29ಕ್ಕೂ ಹೆಚ್ಚು ರೈತರು ಬೆಳೆದ ಬಾಳೆ ಇದರಲ್ಲಿದ್ದು, ಅವರೆಲ್ಲ ನಷ್ಟಕ್ಕೆ ಒಳಗಾಗಿದ್ದಾರೆ.

    ವಿಶ್ವ ಆರೋಗ್ಯ ಸಂಸ್ಥೆ ಬೇಡ ಎಂದರೂ ಭಾರತದಲ್ಲಿ ಎಚ್‌ಸಿಕ್ಯೂ ಬಳಕೆ ಮುಂದುವರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts