More

    ಕಸದ ಡಂಪಿಂಗ್ ಯಾರ್ಡ್ ನಿರ್ಮಾಣಕ್ಕೆ ಉಪಾಧ್ಯಕ್ಷರಿಂದಲೇ ವಿರೋಧ

    ಚಿಕ್ಕಮಗಳೂರು: ಕಸದ ಡಂಪಿಂಗ್ ಯಾರ್ಡ್ ವಿಷಯಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಈ ನಡುವೆ ನಗರಸಭೆ ಅಧ್ಯಕ್ಷರ ಮೇಲೆ ಮೂವರು ಹಲ್ಲೆಗೆ ಮುಂದಾಗಿರುವ ಬಗ್ಗೆ ಚಿಕ್ಕಮಗಳೂರು ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ನಗರದ ನೆಹರು ನಗರದ ಸಹರಾ ಶಾದಿ ಮಹಲ್ ಪಕ್ಕ ಕಸದ ಡಂಪಿಂಗ್ ಯಾರ್ಡ್ ನಿರ್ಮಾಣ ಮಾಡಲಾಗುತ್ತಿದೆ. ನಗರದ ಮಧ್ಯ ಭಾಗದಲ್ಲಿ ಡಂಪಿಂಗ್ ಯಾರ್ಡ್ ನಿರ್ಮಾಣ ಸರಿಯಲ್ಲ ಎಂದು ಆರೋಪಿಸಿ ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ ಕಾಮಗಾರಿ ತಡೆದು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
    ಡಂಪಿಂಗ್ ಯಾರ್ಡ್ ಕಾಮಗಾರಿ ಕೆಲಸಕ್ಕೆ ಬಂದ ಜೆಸಿಬಿ ತಡೆದ ಉಪಾಧ್ಯಕ್ಷರು ಕಾಮಗಾರಿ ನಿಲ್ಲಿಸುವಂತೆ ಪಟ್ಟು ಹಿಡಿದರು. ಜತೆಗೆ ಕೆಲಸ ನಿಲ್ಲಿಸುವಲ್ಲಿಯೂ ಯಶಸ್ವಿಯಾದರು. ನಗರಸಭೆಯೇ ನಗರದೊಳಗೆ ಕಸದ ಡಂಪಿಂಗ್ ಯಾರ್ಡ್ ಆರಂಭಿಸುತ್ತಿರುವುದು ಸರಿಯಲ್ಲ . ಯಾರ್ಡ್‌ನ್ನು ನಗರದಿಂದ ಹೊರಭಾಗಕ್ಕೆ ಸ್ಥಳಾಂತರಿಸುವವರೆಗೂ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿ ಸ್ಥಳದಲ್ಲೆ ಪ್ರತಿಭಟನೆ ಆರಂಭಿಸಿದರು.
    ನೆಹರು ನಗರದ ಸಹರಾ ಶಾದಿ ಮಹಲ್ ಪಕ್ಕ ಕಸದ ಯಾರ್ಡ್ ನಿರ್ಮಾಣ ಮಾಡಲು ಕಾಮಗಾರಿ ಆರಂಭಿಸಲಾಗಿದೆ. ಆದರೆ ಎರಡು ವರ್ಷದ ಹಿಂದೆಯೇ ಈ ವಿಚಾರವಾಗಿ ವಿರೋಧ ವ್ಯಕ್ತಪಡಿಸಲಾಗಿತ್ತು. ಅಂದು ನಗರಸಭೆ ಅಧ್ಯಕ್ಷರು ಹಾಗೂ ಶಾಸಕರು ಕಸದ ಡಂಪಿಂಗ್ ಯಾರ್ಡ್‌ನ್ನು ಬೇರೆಡೆ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿದ್ದರು. ಆದರೆ ಇದೀಗ ಮತ್ತೆ ನಗರದ ಮಧ್ಯ ಭಾಗದಲ್ಲಿಯೇ ಯಾರ್ಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts