More

    ಕೊರೊನಾ ವೈರಸ್​ ದಾಳಿಗೆ ಒಂದೇ ದಿನದಲ್ಲಿ 64 ಜನರ ಸಾವು: 20 ಸಾವಿರದತ್ತ ಸೋಂಕಿತರ ಸಂಖ್ಯೆ

    ಬೀಜಿಂಗ್​: ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಬೆಳಗ್ಗೆಯ ವರದಿಯ ಪ್ರಕಾರ ಚೀನಾದಲ್ಲಿ 425 ಜನರು ಈ ವೈರಸ್​ನಿಂದಾಗಿ ಮೃತರಾಗಿರುವುದಾಗಿ ತಿಳಿದುಬಂದಿದೆ. ಒಟ್ಟು 19,550 ಜನರನ್ನು ಸೋಂಕಿತರು ಎಂದು ಗುರುತಿಸಲಾಗಿದೆ.

    ನಿನ್ನೆಯ ವರದಿಯಲ್ಲಿ 361 ಜನರು ಮೃತಪಟ್ಟಿರುವುದಾಗಿ ತಿಳಿಸಲಾಗಿತ್ತು. ಕಳೆದ 24 ಗಂಟೆಗಳಲ್ಲಿ ಈ ಸಂಖ್ಯೆಯಲ್ಲಿ 64 ಹೆಚ್ಚಳಿಕೆ ಕಂಡುಬಂದಿದೆ. ಸೋಂಕಿತರ ಸಂಖ್ಯೆಯಲ್ಲಿಯು ಸಹ ನಿನ್ನೆಗಿಂತ ಇಂದು 2,345 ಹೆಚ್ಚಳಿಕೆ ಕಂಡಿದೆ.

    ಚೀನಾ ಮಾತ್ರವಲ್ಲದೆ ಒಟ್ಟು 20 ದೇಶಗಳಲ್ಲಿ ಕೊರೊನಾ ವೈರಸ್​ ಪತ್ತೆಯಾಗಿದೆ. ಚೀನಾ ಹೊರೆತು ಪಡಿಸಿ ಫಿಲಿಫೈನ್ಸ್​ನಲ್ಲಿ ಈ ವೈರಸ್​ನಿಂದಾಗಿ ಒಂದು ಸಾವು ಸಂಭವಿಸಿದೆ. ಭಾರತದ ಕೇರಳದಲ್ಲಿ ಒಟ್ಟು ಮೂರು ಸೋಂಕಿತರು ಪತ್ತೆಯಾಗಿದ್ದು ಅವರೆಲ್ಲರು ಚೀನಾದ ವುಹಾನ್​ನಿಂದ ಭಾರತಕ್ಕೆ ಬಂದಿಳಿದವರು ಎನ್ನಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts