ನವದೆಹಲಿ: ಅಂಬಾನಿ ಕುಟುಂಬ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ. ದೇಶದ ನಂಬರ್ ಒನ್ ಶ್ರೀಮಂತನ ಮನೆಯಲ್ಲಿ ದುಬಾರಿ ಕಾರುಗಳಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಕೆಲವು ವರ್ಷಗಳ ಹಿಂದೆ ಅನೇಕ ಬಿಎಂಡಬ್ಲ್ಯು ಮಾದರಿ ಕಾರುಗಳನ್ನು ಕುಟುಂಬ ಕೊಂಡುಕೊಂಡಿದೆ. ಉದ್ಯಮಿ ಕುಟುಂಬ ಆಗಿರುವುದರಿಂದ ಸಹಜವಾಗಿಯೇ ಝಡ್ ಪ್ಲಸ್ ಸೆಕ್ಯುರಿಟಿಯನ್ನು ಅಂಬಾನಿ ಕುಟುಂಬಕ್ಕೆ ನೀಡಲಾಗುತ್ತಿದೆ.
ಅಂಬಾನಿ ಕುಟುಂಬದ ಬಳಿ ಎಷ್ಟು ಕಾರುಗಳಿವೆ ಎನ್ನುವುದಕ್ಕಿಂತ ಅವರಿಗೆ ನೀಡಲಾಗುತ್ತಿರುವ ಬೆಂಗಾವಲು ವಾಹನಗಳ ಬಗ್ಗೆ ತಿಳಿದರೆ ಕಂಡಿತ ಅಚ್ಚರಿಯಾಗುತ್ತದೆ.
ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್
ಅಂಬಾನಿ ಕುಟುಂಬಕ್ಕೆ ನೀಡುವ ಸೆಕ್ಯುರಿಟಿಯಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಕಾರು ಅತ್ಯಂತ ದುಬಾರಿ. ಇದೇ ರೀತಿಯ ಇನ್ನೂ ಕೆಲವು ಕಾರುಗಳಿವೆ. ಇವೆಲ್ಲವನ್ನೂ ಸಾರ್ವಜನಿಕ ರಸ್ತೆಗಳಲ್ಲಿ ಪೊಲೀಸ್ ಸ್ಟಿಕ್ಕರ್‌ಗಳು ಮತ್ತು ಸ್ಟ್ರೋಬ್ ಲೈಟ್ಗಳೊಂದಿಗೆ ಪ್ರದರ್ಶಿಸಲಾಗುತ್ತದೆ. ಈ ಸೆಕ್ಯುರಿಟಿ ಕಾರಿನ ಬೆಲೆ 2 ರಿಂದ 3.5 ಕೋಟಿ ರುಪಾಯಿ. ಮುಖೇಶ್ ಅಂಬಾನಿಯ ಬೆಂಗಾವಲಿನ ಪ್ರಮುಖ ವಾಹನ ಇದಾಗಿದೆ.
ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ಸ್
ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ಸ್ ಎಸ್ಯುವಿ ಸಹ ಅಂಬಾನಿ ಕುಟುಂಬ ಬೆಂಗಾವಲು ವಾಹನವಾಗಿ ಬಳಸಲಾಗುತ್ತದೆ. ಈ ಕಾರುಗಳು ಸಹ ಸ್ಟ್ರೋಬ್ ಲೈಟ್ ಮತ್ತು ಪೊಲೀಸ್ ಸ್ಟಿಕ್ಕರ್ಗಳನ್ನು ಹೊಂದಿರುತ್ತದೆ. ಇತರೆ ಐದು ಕಾರುಗಳು ಸಹ ಬೆಂಗಾವಲು ಪಡೆಯ ಭಾಗವಾಗಿರುತ್ತವೆ. ಅಂಬಾನಿ ಕುಟುಂಬದ ಬಿಎಂಡಬ್ಲ್ಯು ಎಕ್ಸ್ 5 ಸೆಕ್ಯುರಿಟಿ ಕಾರಿನ ವಿವರಗಳಲ್ಲಿ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ಸ್ ಮೊದಲ ಪ್ರೀಮಿಯಂ ಎಸ್ಯುವಿ ಆಗಿದೆ. ಇದು ಬರುವುದಕ್ಕೂ ಮುನ್ನ ಕುಟುಂಬ ಝಡ್ ಪ್ಲಸ್ ಸೆಕ್ಯುರಿಟಿಯನ್ನು ಹೊಂದಿತ್ತು. ಆದರೆ, ಹೆಚ್ಚಿನ ವೇಗದ ಕಾರುಗಳು ಇರಲಿಲ್ಲ. ಅಂಬಾನಿ, ಹಲವಾರು ಬಿಎಂಡಬ್ಲ್ಯು ಎಕ್ಸ್ 5 ಎಕ್ಸ್ ಡ್ರೈವರ್ 30 ಮಾದರಿಗಳನ್ನು ಖರೀದಿಸಿ ಭದ್ರತೆಗಾಗಿ ಹಂಚಿಕೆ ಮಾಡಿದ್ದಾರೆ. ಇವುಗಳು 3 ಲೀಟರ್ ಸಿಕ್ಸ್ ಸಿಲಿಂಡರ್ ಡೀಸೆಲ್ ಎಂಜಿನ್ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 258 ಬಿಹೆಚ್‌ಪಿ ಮತ್ತು 560 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಫೋರ್ಡ್ ಎಂಡೇವಿಯರ್
ಫೋರ್ಡ್ ಎಂಡೇವಿಯರ್ ಕೂಡ ಅಂಬಾನಿ ಕುಟುಂಬದ ಸೆಕ್ಯುರಿಟಿ ಕಾರುಗಳಲ್ಲಿ ಒಂದು. ಬಿಳಿ ಬಣ್ಣದಲ್ಲಿ ಹೊಳೆಯುತ್ತದೆ. ಅಂಬಾನಿ ಕುಟುಂಬ ಬೆಂಗಾವಲಿಗೆ ಸೇರುತ್ತದೆ. 3.2 ಲೀಟರ್ ಡೀಸೆಲ್ ಎಂಜಿನ್, 197 ಬಿಹೆಚ್‌ಪಿ ಮತ್ತು 470 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಮಹೀಂದ್ರಾ ಸ್ಕಾರ್ಪಿಯೋ
ಅಂಬಾನಿ ಸೆಕ್ಯುರಿಟಿಯ ಅಧಿಕೃತ ಪೊಲೀಸ್ ವಾಹನಗಳಲ್ಲಿ ಅನೇಕ ಮಹೀಂದ್ರಾ ಸ್ಕಾರ್ಪಿಯೋ ಕಾರುಗಳಿವೆ. ಈ ಕಾರುಗಳನ್ನು ಹೆಚ್ಚಾಗಿ ಸಿಆರ್ಪಿಎಫ್ ಸಿಬ್ಬಂದಿ ಚಲಾಯಿಸುತ್ತಾರೆ.
ಟೊಯೋಟಾ ಫಾರ್ಚುನರ್
ಮುಖೇಶ್ ಅಂಬಾನಿ ಕುಟುಂಬದಲ್ಲಿ ಕನಿಷ್ಠ 6 ಟೊಯೋಟಾ ಫಾರ್ಚೂನರ್ ಕಾರುಗಳನ್ನು ನೋಡಬಹುದು. ಎಲ್ಲವು ಸಹ ಹೊಸ ಪೀಳಿಗೆಯದ್ದು ಮತ್ತು ಬಿಳಿ ಬಣ್ಣದ ದುಬಾರಿ ಕಾರುಗಳಾಗಿವೆ.
ಹೋಂಡಾ ಸಿಆರ್-ವಿ
ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಪ್ರಸಿದ್ದ ಮಾಡೆಲ್ ಆಗಿದೆ. ನೀತಾ ಅಂಬಾನಿ ಬೆಂಗಾವಲಿನ ಪೈಲಟ್ ಕಾರು ಹೋಂಡಾ ಸಿಆರ್-ವಿ ಆಗಿದೆ. (ಏಜೆನ್ಸೀಸ್)