More

    ಮೈದುಂಬಿದ ವರದೆ -ನಿಟ್ಟುಸಿರು ಬಿಟ್ಟ ರೈತರು

    ಅಕ್ಕಿಆಲೂರ: ವರದಾ ನದಿಯಲ್ಲಿ ನೀರು ಹಾನಗಲ್ಲ ತಾಲೂಕಿಗೆ ಪ್ರವೇಶಿಸಿದ್ದು, ಜನರಲ್ಲಿ ಸಮಾಧಾನ ಮೂಡಿಸಿದೆ.

    ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಿಂದ ಹಾನಗಲ್ಲ ತಾಲೂಕಿನ ಹೊಂಕಣದಿಂದ ಆರೇಲಕ್ಮಾಪುರ, ಮಲಗುಂದ ಮಾರ್ಗವಾಗಿ ಹಿರೇಹುಲ್ಲಾಳ ಮೂಲಕ ಸಾಗಿ ಹಾವೇರಿ ತಾಲೂಕು ಪ್ರವೇಶಿಸಲಿದೆ. ವರದಾ ನದಿಯು ಹಾನಗಲ್ಲ ತಾಲೂಕಿನಲ್ಲಿ ಸುಮಾರು 30 ಕಿಲೋ ಮೀಟರನಷ್ಟು ಹರಿಯುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೆ ಉತ್ತಮ ಮಳೆಯ ಪರಿಣಾಮ ನದಿ ತುಂಬಿ ಹರಿಯುತ್ತಿದೆ. ಕಳೆದ 4-5 ತಿಂಗಳಿಂದ ವರದಾ ನದಿ ಬರಿದಾಗಿತ್ತು.

    ನೀರಾವರಿಗೆ ಜೀವಕಳೆ: ನದಿ ಪಾತ್ರದಲ್ಲಿನ ರೈತರ ಬೋರ್‌ವೆಲ್‌ಗಳಿಗೆ ಜೀವ ಬಂದಂತಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಅಡಕೆ, ಬಾಳೆ ಮತ್ತು ಭತ್ತ ಬೆಳೆದಿರುವ ರೈತರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ, ಬೋರ್‌ಗಳಲ್ಲಿ ನೀರು ಕಡಿಮೆಯಾಗಿ ಸಂಕಷ್ಟ ಅನುಭವಿಸುತ್ತಿದ್ದರು. ಆದರೆ, ಕಳೆದ ಮೂರು ದಿನಗಳಿಂದ ವರದಾ ನದಿಯಲ್ಲಿ ನೀರು ಹರಿಯುತ್ತಿದ್ದಂತೆ ಬೋರ್‌ವೆಲ್‌ಗಳಿಗೆ ಜೀವ ಬಂದಂತಾಗಿದೆ. ಅಲ್ಲದೆ. ವರದಾ ನದಿಯಿಂದ ಕೆರೆ-ಕಟ್ಟೆ ತುಂಬಿಸುವ ತಿಳವಳ್ಳಿ ಹಾಗೂ ಬಾಳಂಬೀಡ ಏತ ನೀರಾವರಿಗೆ ಅನುಕೂಲವಾಗಿದೆ. ಅಕ್ಕಿಆಲೂರ ಮತ್ತು ತಿಳವಳ್ಳಿ ಭಾಗದಲ್ಲಿ ಹೆಚ್ಚು ನೀರಾವರಿ ಸೌಲಭ್ಯಕ್ಕೂ ವದಿಯಿಂದ ಸಹಾಯಕವಾಗಿದೆ ಎನ್ನುತ್ತಾರೆ ರೈತರು.

    ಮಳೆಯಿಲ್ಲದೆ ಶೆ. 80ರಷ್ಟು ಬೋರ್‌ಗಳಲ್ಲಿ ನೀರು ಬರುತ್ತಿರಲಿಲ್ಲ. ನದಿ ಎಷ್ಟು ಹರಿಯುತ್ತದೆಯೋ ಅಷ್ಟು ನಮ್ಮ ತಾಲೂಕಿನ ವಿವಿಧ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಮುಂಡಗೋಡ ತಾಲೂಕಿನ ಮಳಗಿ ಗ್ರಾಮದಲ್ಲಿರುವ ಧರ್ಮಾ ಜಲಾಶಯ ಭರ್ತಿಯಾದರೆ ಹಾನಗಲ್ಲ ತಾಲೂಕಿನಲ್ಲಿ 90ಕ್ಕೂ ಅಧಿಕ ಕೆರೆಗಳು ತುಂಬಲಿವೆ. ಧರ್ಮಾ ಜಲಾಶಯ ತುಂಬುವುದನ್ನು ನಿರೀಕ್ಷಿಸುತ್ತಿದ್ದೇವೆ.

    ಮಹೇಶ ವಿರುಪಣ್ಣನವರ, ರೈತ ಸಂಘದ ತಾಲೂಕು ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts