More

    ಜೈನಮುನಿಗಳ ಹತ್ಯೆ ಅಮಾನವೀಯ

    ಸಾಗರ: ತಾಲೂಕು ದಿಗಂಬರ ಜೈನ ಸಮಾಜ, ಪದ್ಮಶ್ರೀ ಮಹಿಳಾ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

    ಜೈನಮುನಿಗಳನ್ನು ತುಂಡು ತುಂಡಾಗಿ ಕತ್ತರಿಸಿ ಅಮಾನವೀಯವಾಗಿ ಹತ್ಯೆ ಮಾಡಿರುವ ಘಟನೆ ಖಂಡನೀಯ. ಇಂತಹ ಅಹಿತರಕ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಇಂತಹ ನೀಚಕೃತ್ಯದಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅಧ್ಯಾತ್ಮ ಪ್ರವರ್ತಕರು, ಶಾಂತಿಪ್ರಿಯರೂ ಹಾಗೂ ಅಹಿಂಸಾ ಪ್ರತಿಪಾದಕರೂ ಆಗಿರುವ ಆಚಾರ್ಯ ಶ್ರೀಗಳು, ಜೈನಮುನಿಗಳು, ಸಾಧು-ಸಂತರು, ಧರ್ಮ ಪ್ರವರ್ತಕರಿಗೆ ಸರ್ಕಾರ ಸೂಕ್ತ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದರು.
    ಸಮಾಜದ ಪ್ರಮುಖರಾದ ಎಂ.ಬಿ.ಲೋಕರಾಜ್, ಮಂಜಯ್ಯ ಸಂಸೆ, ಶ್ರುತಿ ನೇಮಯ್ಯ, ರಾಜಕುಮಾರ್, ನವೀನ್, ಚಗನ್ ಲಾಲ್ ಬನ್ಸಾಲಿ, ದೇವರಾಜ್, ನಾಗರಾಜ್ ಬೊಬ್ಬಿಗೆ, ಯಶೋದರ ಇಂದ್ರ, ಅಶೋಕ ಇಂದ್ರ ಇತರರಿದ್ದರು.
    ಬಿಜೆಪಿ ಪ್ರತಿಭಟನೆ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಿದರು. ಬಿ.ವೈ.ರಾಘವೇಂದ್ರ ಮಾತನಾಡಿ, ಹತ್ಯೆ ನಡೆದು ಮೂರು ದಿನವಾದರೂ ಸರ್ಕಾರ ಇದರ ಬಗ್ಗೆ ಗಂಭೀರ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಚಿಕ್ಕೋಡಿ ಜೈನಮುನಿಗಳ ಹತ್ಯೆ ಅತ್ಯಂತ ಅಮಾನವೀಯ. ಸರ್ವಸಂಗ ಪರಿತ್ಯಾಗಿಗಳಾಗಿರುವ ಶ್ರೀಗಳನ್ನು ಹತ್ಯೆ ಮಾಡಿರುವ ಕ್ರಮ ಖಂಡನೀಯ. ಟಿ.ನರಸೀಪುರದಲ್ಲಿ ಹಿಂದು ಯುವಕನನ್ನು ಹತ್ಯೆ ಮಾಡಲಾಗಿದೆ. ಸರ್ಕಾರ ಇಂತಹ ಹತ್ಯೆಯನ್ನು ತಡೆಗಟ್ಟದೆ ಹೋದಲ್ಲಿ ಬಿಜೆಪಿ ಬೀದಿಗಳಿದು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಗ್ರಾಮಾಂತರ ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ನಗರ ಅಧ್ಯಕ್ಷ ಗಣೇಶಪ್ರಸಾದ್, ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ರತ್ನಾಕರ ಹೊನಗೋಡು, ಮಧುರಾ ಶಿವಾನಂದ್, ಕೆ.ವಿ.ಪ್ರವೀಣ್, ಭರ್ಮಪ್ಪ, ನಾಗರಾಜ ಬೊಬ್ಬಿಗೆ, ಪ್ರಸನ್ನ ಕೆರೆಕೈ, ಸಂತೋಷ್ ಶೇಟ್, ಕೆ.ಸತೀಶ್, ವಿ.ಮಹೇಶ್, ಆರ್.ಶ್ರೀನಿವಾಸ್, ಶ್ರೀರಾಮ್, ಮೈತ್ರಿ ಪಾಟೀಲ್, ಸವಿತಾ ವಾಸು, ಭಾವನಾ ಸಂತೋಷ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts