More

    ಎಲ್ಲ ವರ್ಗದವರನ್ನೂ ತಲುಪುತ್ತಿದೆ ಗ್ಯಾರಂಟಿ ಯೋಜನೆ

    ಅರಕಲಗೂಡು: ಸರ್ಕಾರದ ಗ್ಯಾರಂಟಿ ಯೋಜನೆಯ ಲಾಭಗಳು ಎಲ್ಲ ವರ್ಗದ ಜನರಿಗೂ ತಲುಪುತ್ತಿವೆ ಎಂದು ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್‌ಗೌಡ ಹೇಳಿದರು.

    ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದು ವರ್ಗವನ್ನಷ್ಟೇ ಓಲೈಸದೆ ಎಲ್ಲ ಸಮುದಾಯದ ಜನರ ಏಳಿಗೆಗೆ ಶ್ರಮಿಸುತ್ತಿದ್ದು, ನುಡಿದಂತೆ ನಡೆಯುತ್ತಿದೆ. ಸರ್ಕಾರದ ಯೋಜನೆಗಳಿಂದ ಬಡವರು, ದೀನ ದಲಿತರ ಉದ್ಧಾರವಾಗುತ್ತಿದೆ ಎಂದರು.

    ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಿ.ಆರ್.ಅಬ್ದುಲ್ ಹಾದಿ ಮಾತನಾಡಿ, ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದರೆ ಜನರ ನಡುವೆ ಒಡುಕು ಮೂಡಿಸಿ ಒಡೆದು ಆಳುವ ನೀತಿ ಅನುಸರಿಸುತ್ತವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರಲ್ಲಿ ಮೂಡಿದ್ದ ಭಯದ ವಾತಾವರಣ ಹೋಗಲಾಡಿಸುವ ಮೂಲಕ ಎಲ್ಲರಿಗೂ ಸಮಾನ ನ್ಯಾಯ ದೊರಕಿಸಲಾಗುತ್ತಿದೆ. ಪಕ್ಷದ ಸಂಘಟನಾತ್ಮಕ ಬೆಳವಣಿಗೆಗೆ ಅಲ್ಪಸಂಖ್ಯಾತರು ಭದ್ರ ಬುನಾದಿಯಾಗಬೇಕು ಎಂದು ಹೇಳಿದರು.

    ಅಲ್ಪಸಂಖ್ಯಾತರ ರಾಜ್ಯ ಘಟಕದ ಸದಸ್ಯ ಶಫಿ ಅಹಮದ್, ಸಂಘಟನಾ ಕಾರ್ಯದರ್ಶಿ ಜಾಕೀರ್, ಜಿಲ್ಲಾ ಘಟಕದ ಉಪಾಧ್ಯಕ್ಷ ಸೂಫಿ ಇಬ್ರಾಹಿಂ, ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಎಸ್.ಎಲ್.ಗಣಪತಿ, ಜಿಪಂ ಮಾಜಿ ಸದಸ್ಯ ಎಚ್.ಎಸ್. ಶಂಕರ್, ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ನಾಗರಾಜು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪುಟ್ಟಯ್ಯ, ಕಾರ್ಯದರ್ಶಿ ಪುಷ್ಪಕುಮಾರ್, ಉಪಾಧ್ಯಕ್ಷ ಮಲ್ಲೇಶ್, ಕಟ್ಟೇಪುರ ಗ್ರಾಪಂ ಮಾಜಿ ಅಧ್ಯಕ್ಷ ಚಾಂದ್ ಪಾಷ, ಕೊಣನೂರು ಗ್ರಾಪಂ ಸದಸ್ಯ ಇರ್ಷದ್, ಮುಖಂಡರಾದ ಅಹಮದ್, ಕಾಂತರಾಜು, ದಶರಥ, ಹೊಳಲಗೋಡು ಮುಕ್ತಾರ್ ಖಾನ್, ಖಲೀಲ್ ಅಹಮದ್, ಶಾಭಾಜ್ ಪಾಷ, ಸೋಮಶೇಖರ ಕಬ್ಬಳಿಗೆರೆ ಇತರರಿದ್ದರು.

    ಅಧಿಕಾರ ಸ್ವೀಕಾರ: ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿ ಸಲೀಂ, ಅರಕಲಗೂಡು ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಪಪಂ ಸದಸ್ಯ ಸುಭಾನ್ ಶರೀಫ್, ಹಳ್ಳಿಮೈಸೂರು ಬ್ಲಾಕ್ ಅಧ್ಯಕ್ಷರಾಗಿ ತನ್ವೀರ್ ಖಾನ್, ಅರಕಲಗೂಡು ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್, ಅರಕಲಗೂಡು ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಮುಸಾವೀರ್ ಪಾಷ, ಅರಕಲಗೂಡು ಬ್ಲಾಕ್ ಅಧ್ಯಕ್ಷರಾಗಿ ರಂಗನಾಥ್ ಅಧಿಕಾರ ಸ್ವೀಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts