More

    ಬಡವರ ಪಾಲಿಗೆ ಸರ್ಕಾರ ಸತ್ತಂತಿದೆ

    ಚಿತ್ರದುರ್ಗ: ಅನ್ನದಾತರ, ಬಡವರ ಪಾಲಿಗೆ ರಾಜ್ಯ ಸರ್ಕಾರ ಸತ್ತಂತಾಗಿದೆ. ಭೀಕರ ಬರಗಾಲವಿದ್ದು, ಅದನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

    ಗುರುವಾಗ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ 850 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಕೈ ನಾಯಕರನ್ನು ಪ್ರಶ್ನಿಸಿದ ಅವರು, 1 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲ ಮಾಡಿ ಕರುನಾಡಿನ ಜನರ ಮೇಲೆ ಸಾಲದ ಹೊರೆ ಹೊರಿಸಿದ್ದಾರೆ ಎಂದು ಕಿಡಿಕಾರಿದರು.

    ಕಾಂಗ್ರೆಸ್ ಗ್ಯಾರಂಟಿ ಭ್ರಮೆಯಲ್ಲಿದೆ. 9 ತಿಂಗಳಿಂದಲೂ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕೇಂದ್ರದಿಂದ ಬಂದಿರುವ ಅನುದಾನದ ಕುರಿತು ಶೀಘ್ರದಲ್ಲೇ ಅಂಕಿ-ಅಂಶ ಸಮೇತ ಮಾಹಿತಿ ಬಿಡುಗಡೆಗೊಳಿಸುವ ಮೂಲಕ ಗೂಬೆ ಕೂರಿಸಲು ಪ್ರಯತ್ನಿಸುತ್ತಿರುವ ಕೈ ನಾಯಕರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದರು.

    ಕೈ ನಾಯಕರು ಶ್ರೀರಾಮನ ವಿರೋಧಿಗಳು: ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದ ಕುರಿತು ಅಪಸ್ವರ ಎತ್ತಿದ್ದು, ಕೈ ನಾಯಕರು ಎಂದು ಎಂಎಲ್ಸಿ ಎನ್.ರವಿಕುಮಾರ್ ಟೀಕಿಸಿದರು.

    ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಕಾರಣ. ಆದರೆ, ಲೋಕಾರ್ಪಣೆಗೆ ಆಹ್ವಾನಿಸಿದರೂ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಇಬ್ಬರೂ ಹೋಗಲಿಲ್ಲ. ಶ್ರೀರಾಮ, ವಾಲ್ಮೀಕಿ, ಮದಕರಿನಾಯಕ, ವೀರವನಿತೆ ಒನಕೆ ಓಬವ್ವನ ವಿರೋಧಿಗಳು ಎಂದು ಆರೋಪಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts