More

    ನೀರಾವರಿ ವಿಚಾರಕ್ಕೆ ಕೈಚೆಲ್ಲಿದ ಸರ್ಕಾರ; ಮಾಜಿ ಸಿಎಂ ಕುಮಾರಸ್ವಾಮಿ ಆರೋಪ 

    ತಿಪಟೂರು: ನೀರಾವರಿಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸಿಕೊಂಡು ನಮ್ಮ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಚೆಲ್ಲಿವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಶುಕ್ರವಾರ ಕೆ.ಟಿ.ಶಾಂತಕುಮಾರ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೊಂದು ಅವಕಾಶ ಕೊಟ್ಟರೆ ಅಪ್ಪರ್ ಭದ್ರಾ, ಅಪ್ಪರ್ ಕೃಷ್ಣಾ, ಮೇಕೆದಾಟು ಮತ್ತು ಎತ್ತಿನಹೊಳೆ ನೀರು ಬಳಸಿಕೊಂಡು, ರಾಜ್ಯದ 51 ಉಪ ನದಿಗಳ ನೀರಿನಿಂದ 31 ಜಿಲ್ಲೆಗಳ ಎಲ್ಲರಿಗೂ ಜನತಾ ಜಲಧಾರೆ ಯೋಜನೆ ರೂಪಿಸಲಾಗುವುದು ಎಂದರು.

    ನಮ್ಮ ಕುಟುಂಬ ಯಾವತ್ತೂ ಜಿಲ್ಲೆಯ ಜನತೆಗೆ ದ್ರೋಹ ಮಾಡಿಲ್ಲ. ದೇವೇಗೌಡರು ಮತ್ತು ಎಚ್.ಡಿ. ರೇವಣ್ಣ ಜಿಲ್ಲೆ ನೀರಾವರಿಗೆ ಅಡ್ಡಗಾಲು ಹಾಕಿದದರು ಎಂಬುದು ಸುಳ್ಳು. ಟ್ರಿಬ್ಯೂನಲ್‌ನಲ್ಲಿ ಹಂಚಿಕೆಯಾದಂತೆ ಜಿಲ್ಲೆಯ ಪಾಲಿನ 25 ಟಿಎಂಸಿ ನೀರು ಸಮರ್ಪಕವಾಗಿ ಹರಿದಿದೆ. ನನ್ನ 14 ತಿಂಗಳ ಅಧಿಕಾರಾವಧಿಯಲ್ಲಿ ಒಮ್ಮೆ ಹೇಮಾವತಿ ನಾಲೆಯಲ್ಲಿ ಗಿಡ-ಗಂಟಿ ಬೆಳೆದು ನೀರು ಸರಾಗವಾಗಿ ಹರಿಯದ ವಿಷಯ ತಿಳಿದ ತಕ್ಷಣ ಹಣ ಬಿಡುಗಡೆ ಮಾಡಿ, ನಾಲೆ ಪುನಶ್ಚೇತನಗೊಳಿದ್ದೇನೆ ಎಂದರು.

    ಈ ಹಿಂದೆ ಕಾಂಗ್ರೆಸ್‌ನವರು ನಾಲ್ಕೂ ಕಾಲು ಮುರಿದ ಕುದುರೆ ಕೊಟ್ಟು ಹೋಗು ಎಂದರು. ಆದರೂ 14 ತಿಂಗಳ ಅಧಿಕಾರಾವಧಿಯಲ್ಲಿ ಅವರೆಲ್ಲಾ ಬೇಡಿಕೆ ಈಡೇರಿಸಿದ್ದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ, ಮುಂದಿನ 5 ವರ್ಷಗಳಲ್ಲಿ 2.50 ಲಕ್ಷ ಕೋಟಿ ಯೋಜನೆಯಲ್ಲಿ ಇಡೀ ರಾಜ್ಯದ ಬಡಜನತೆಯ ಸಂಕಷ್ಟಗಳನ್ನು ನಿವಾರಿಸಲಾಗುವುದು. ಇದಕ್ಕಾಗಿ ಜನರ ಮೇಲೆ ಸಾಲದ ಹೊರೆ ಹೊರಿಸಲ್ಲ ಎಂದು ಭರವಸೆ ನೀಡಿದರು.

    ನಾಗೇಶ್‌ಗೆ ಮೋದಿ ಚಿಂತೆ, ಜೆಡಿಎಸ್‌ಗೆ ರೈತರ ಚಿಂತೆ
    ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ಗೆ ತೆಂಗು ಮತ್ತು ದರ ಇಳಿಕೆಯ ಪರಿಕಲ್ಪನೆ ಇಲ್ಲ. ಸದಾ ಅವರಿಗೆ ಮೋದಿ ಚಿಂತೆ, ಜೆಡಿಎಸ್‌ಗೆ ರೈತರ ಚಿಂತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

    ಇಂದಿನ ಆರ್‌ಎಸ್‌ಎಸ್‌ನವರಲ್ಲಿ ಕಂಡವರ ಹಣ ಹೊಡೆಯುವ ಚಾಳಿ ಬಂದಿದೆ. 12 ಮಂತ್ರಿಗಳು ಸಿ.ಡಿ.ಹಗರಣದಲ್ಲಿ ಸ್ಟೇ ತಂದಿದ್ದಾರೆ. ಆರ್.ಎಸ್.ಎಸ್‌ನವರಿಗೆ ನಿಜಕ್ಕೂ ನೈತಿಕತೆ ಇದ್ದರೆ ಅವರನ್ನು ಹೊರ ಹಾಕಲಿ ಅಥವಾ ಬಿ.ಸಿ.ನಾಗೇಶ್ ಹೊರಬರಲಿ. ಬ್ರಾಹ್ಮಣರಲ್ಲೇ ಎರಡು ಪಂಗಡ ಸೃಷ್ಟಿಸಿ ದ್ವೇಷ ರಾಜಕಾರಣ ಮಾಡಲಾಗುತ್ತಿದೆ. 7 ಕೋಟಿ ಜನತೆಯ ಸಂಸ್ಕೃತಿ, ನೆಲ, ಜಲಕ್ಕೆ ನಿಮ್ಮ ಕೊಡುಗೆ ಏನು? ನಿಮ್ಮ ಸಾಧನೆ ಶೇ.40 ಕಮಿಷನ್, ಕಾಂಗ್ರೆಸ್‌ನವರದ್ದು ಶೇ.20 ಅಷ್ಟೇ. ಚುನಾವಣೆ ಸಮಯದಲ್ಲಿ ಹೆಚ್ಚಿನ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಅಭಿವೃದ್ಧಿಗಾಗಿ ಅಲ್ಲ. ಹಣ ಮಾಡಲು
    ಎಂದು ಟೀಕಿಸಿದರು.

    ಕೈಗೊಂಡ ನಿರ್ಣಯ ವಿಧಿಯಾಟ: ಲೋಕಸಭೆ ಚುನಾವಣೆಯಲ್ಲಿ ನಾವು ಕೈಗೊಂಡ ನಿರ್ಣಯ ವಿಧಿಯಾಟ, ಅಂದು ನಡೆದ ರಾಜಕೀಯ ಬೆಳವಣಿಗೆಗಳು ದೇವೇಗೌಡರ ಅನಾರೋಗ್ಯಕ್ಕೆ ಕಾರಣವಾದವು. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ರಾಜ್ಯದ ಇನ್ನೂ ಕೆಲವೆಡೆ ಸಂಡಾಸಿಲ್ಲ. ಇನ್ನು ಉಚಿತವಾಗಿ ಕೊಡುವ ಅಕ್ಕಿ ಬೇಯಿಸಿ ಸಾರು ಮಾಡಲಾಗದ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಜಾತಿ ವ್ಯಾಮೋಹದಿಂದ ಬದುಕು ಸರಿಯಾಗಲ್ಲ. ಲಿಂಗಾಯತ ಸಮಾಜ ಎಂದು ಬಿ.ಎಸ್.ವೈ ನೋಡಿಕೊಂಡು ಮತ ಹಾಕಿದಿರಿ. ರಾಜ್ಯದಲ್ಲಿ ವೀರಶೈವ ಸಮಾಜದ ಪಕ್ಷ ಎಂದೋ ಮುಗಿದು ಹೋಗಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.

    ಶಾಂತಕುಮಾರ್ ಪಕ್ಷದ ಅಭ್ಯರ್ಥಿ: ಯಾರು ಬೇಕಾದರೂ ರಸ್ತೆ, ಕಟ್ಟಡ ನಿರ್ಮಿಸಬಹುದು. ಆದರೆ ರೈತರ ಸಂಕಷ್ಟ ನಿವಾರಿಸುವ ನೈಜ ಕಾಳಜಿ ಇರಬೇಕು ಎಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸೋತರೂ ಕ್ಷೇತ್ರ ಬಿಡದೆ ಸಮಾಜಸೇವೆಯಲ್ಲಿ ತೊಡಗಿ ಹಲವಾರು ಹೋರಾಟಗಳ ಮೂಲಕ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಿರುವ ಕೆ.ಟಿ.ಶಾಂತಕುಮಾರ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ೋಷಿಸಿದರು. ಬಿಎಸ್‌ವೈಗಾಗಿ ವೋಟ್ ಹಾಕಿದ ಸ್ಥಿತಿ ಈಗಿಲ್ಲ. ಈಗಿರುವುದು ಮೋದಿ ಮತ್ತು ಅಮಿತ್ ಷಾ ಪಕ್ಷ. ಆದರೆ ಜೆಡಿಎಸ್‌ನಲ್ಲಿ ಜನ ತೀರ್ಮಾನಿಸುತ್ತಾರೆ ಎಂದರು.

    ನನ್ನ ಅಧಿಕಾರಾವಧಿಯಲ್ಲಿ ತಾಲೂಕನ್ನು ಕಾಡುತ್ತಿದ್ದ ನುಸಿ ರೋಗಕ್ಕೆ ಪರಿಹಾರಕ್ಕೆ 180 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೆ. ಪಕ್ಕದ ಚನ್ನರಾಯಪಟ್ಟಣ ಮತ್ತು ಅರಸೀಕೆರೆ ತಾಲೂಕಿನವರು 54 ಕೋಟಿ ಪ್ರಯೋಜನ ಪಡೆದರೆ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಮತ್ತು ತಿಪಟೂರು ತಾಲೂಕಿನ ರೈತರು ಪಡೆದಿದ್ದು ಕೇವಲ 17 ಕೋಟಿ ರೂಪಾಯಿ ಮಾತ್ರ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಆಶೀರ್ವದಿಸಿ. ಮುಂದಿನ 5 ವರ್ಷಗಳಲ್ಲಿ ನಾವು ಕೊಟ್ಟ ಮಾತು ತಪ್ಪಿದರೆ ಮುಂದೆಂದೂ ನಿಮ್ಮ ಬಳಿ ಮತಯಾಚಿಸಲ್ಲ.
    |ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

    ಜಯಪ್ರಕಾಶ್ ನಾರಾಯಣ ಅವರ ಆದರ್ಶ ನನ್ನ ರಾಜಕೀಯಕ್ಕೆ ಪ್ರೇರಣೆ, ತಾಲೂಕಿನ ಜನತೆ ಕಳೆದ 20 ವರ್ಷಗಳಿಂದ ಹಲವಾರು ಸಮಸ್ಯೆಗಳಿಂದ ಹೊರಬರಲಾಗದೆ ಪರಿತಪಿಸುತ್ತಿದ್ದಾರೆ. ಶಾಶ್ವತ ನೀರಾವರಿ ಯೋಜನೆ ಮತ್ತು ಬಡ ಜನತೆಯ ಸಂಕಷ್ಟ ನಿವಾರಿಸಲು ದೇವೇಗೌಡರ ಕುಟುಂಬದಿಂದ ಸಾಧ್ಯ. ಪಕ್ಷ ಹಾಲಿ, ಮಾಜಿ ಶಾಸಕರು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿ.
    |ಕೆ.ಟಿ.ಶಾಂತಕುಮಾರ್, ಜೆಡಿಎಸ್ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts