More

    ಅಕ್ಟೋಬರ್​ವರೆಗೂ ಬದಲಾಗೋಲ್ಲ ಪಾಕಿಸ್ತಾನದ ಬಣ್ಣ…

    ಜಾಗತಿಕ ಭಯೋತ್ಪಾದಕ ಹಣಕಾಸು ವ್ಯವಸ್ಥೆಯ ಮೇಲಿನ ಕಾವಲು ಸಂಸ್ಥೆಯಾಗಿರುವ ಎಫ್ಎಟಿಎಫ್ ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಖಡಕ್ ನಿರ್ಧಾರ ತೆಗೆದುಕೊಂಡಿದೆ.

    ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹಮ್ಮದ್ ಸೇರಿ ಹಲವು ಪ್ರಮುಖ ಉಗ್ರ ಸಂಘಟನೆಗಳು..ಅದರ ಮುಖಂಡರಿಗೆ ಪಾಕಿಸ್ತಾನದಲ್ಲಿ ಕೆಲವು ಪ್ರಮುಖರೇ ಆರ್ಥಿಕ ಸಹಕಾರ ನೀಡುತ್ತಾರೆಂಬುದು ಈಗಾಗಲೇ ಹಲವು ಬಾರಿ ಜಗಜ್ಜಾಹೀರಾಗಿದೆ. ಇದನ್ನು ತಡೆಯುವಂತೆ ಪಾಕಿಸ್ತಾನಕ್ಕೆ ಎಫ್ಎಟಿಎಫ್ ಅನೇಕ ಬಾರಿ ಎಚ್ಚರಿಕೆ ನೀಡುತ್ತಲೇ ಬಂದಿದೆ. ಆದರೆ ಉಗ್ರರಿಗೆ ಅಕ್ರಮ ಹಣ ವರ್ಗಾವಣೆ ಮಾಡುವವರನ್ನು ಪತ್ತೆ ಹಚ್ಚಿ, ಅದನ್ನು ನಿಯಂತ್ರಿಸುವಲ್ಲಿ ಪಾಕಿಸ್ತಾನ ವಿಫಲವಾಗಿದ್ದರಿಂದ ಆ ದೇಶವನ್ನು ಬೂದು ಪಟ್ಟಿ ( ಗ್ರೇ ಲಿಸ್ಟ್)ಗೆ ಈ ಹಿಂದೆಯೇ ಸೇರಿಸಿದೆ.

    ಕಳೆದ ಅಕ್ಟೋಬರ್ ನಲ್ಲಿ ಪ್ಯಾರಿಸ್ ನಲ್ಲಿ ನಡೆದ ಎಫ್ಎಟಿಎಫ್ ಸಭೆಯಲ್ಲಿ ಕೂಡ ಪಾಕ್ ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿತ್ತು. 2020 ರ ಫೆಬ್ರವರಿಯವರೆಗೆ ಸಮಯ ಕೊಡುತ್ತೇವೆ. ಅಷ್ಟರಲ್ಲಿ ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುವ ಜಾಲವನ್ನು ಪತ್ತೆಹಚ್ಚಬೇಕು. ಸಂಪೂರ್ಣವಾಗಿ ನಿಯಂತ್ರಿಸಬೇಕು. ಅಲ್ಲಿಯವರೆಗೂ ಬೂದು ಪಟ್ಟಿಯಲ್ಲೇ ಉಳಿಯಬೇಕಾಗುವುದು ಎಂದು ಹೇಳಿತ್ತು.

    ಕೊವಿಡ್ 19 ನಿಂದಾಗಿ ಎಫ್ಎಟಿಎಫ್ ಸಭೆ ಮುಂದೂಡಲ್ಪಟ್ಟಿತ್ತು. ಬುಧವಾರ ಅಧ್ಯಕ್ಷ ಕ್ಸಿಯಾಂಗ್ ಮಿನ್ ಲಿಯು ಅವರ ನೇತೃತ್ವದಲ್ಲಿ ನಡೆದ ವರ್ಚ್ಯುವಲ್ ಸಭೆಯಲ್ಲಿ ಪಾಕಿಸ್ತಾನವನ್ನು ಮುಂದಿನ ಅಕ್ಟೊಬರ್ ವರೆಗೂ ಬೂದು ಪಟ್ಟಿಯಲ್ಲಿಯೇ ಉಳಿಸಲು ಹಣಕಾಸು ಕ್ರಿಯಾ ಪಡೆ ತೀರ್ಮಾನಿಸಿದೆ.
    ಪ್ರಮುಖ ಉಗ್ರ ಸಂಘಟನೆಗಳಿಗೆ ಇನ್ನೂ ಹಣಕಾಸಿನ ನೆರವು ಸಿಗುತ್ತಿದೆ. ಈ ಜಾಲವನ್ನು ಪತ್ತೆಹಚ್ಚಿ, ನಿಷೇಧಿಸಲು ಪಾಕಿಸ್ತಾನ ವಿಫಲವಾಗಿದ್ದರಿಂದ ಅದನ್ನು ಮುಂದಿನ ಸಭೆ ಅಂದರೆ ಅಕ್ಟೋಬರ್ ವರೆಗೂ ಗ್ರೇ ಲಿಸ್ಟ್ ಲಿ ಇಡಲಾಗುವುದು ಎಂದು ಎಫ್ಎಟಿಎಫ್ ತಿಳಿಸಿದೆ. ( ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts