More

    ಚೀನಾದಿಂದ ತಮ್ಮ ನಾಗರಿಕರನ್ನು ಕರೆತರಲು ನಿರಾಕರಿಸಿದ್ದ ಪಾಕಿಸ್ತಾನಕ್ಕೂ ಬಂತು ಕೊರೊನಾ ವೈರಸ್​

    ಅಬೋಟಾಬಾದ್​: ಕೊರೊನಾ ವೈರಸ್​ ದಾಳಿಗೆ ತುತ್ತಾಗಿರುವ ಚೀನಾದಲ್ಲಿರುವ ತಮ್ಮ ನಾಗರಿಕರನ್ನು ಸ್ವದೇಶಕ್ಕೆ ಕರೆತರುವುದಿಲ್ಲ ಎಂದು ಹೇಳಿದ್ದ ಪಾಕಿಸ್ತಾನಕ್ಕೆ ಕೊರೊನಾ ವೈರಸ್​ ಕಾಲಿಟ್ಟಿದೆ. ಒಸಾಮಾ ಬಿನ್​ ಲಾಡೆನ್​ನನ್ನು ಕೊಲೆ ಮಾಡಿದ ನಗರದಲ್ಲಿಯೇ ಮೊದಲ ಕೊರೊನಾ ಇರುವುದಾಗಿ ಶಂಕಿಸಲಾಗಿದೆ.

    ಪಾಕಿಸ್ತಾನದ ಅಬೋಟಾಬಾದ್​ನಲ್ಲಿ ದೇಶದ ಮೊದಲ ಕೊರೊನಾ ವೈರಸ್​ ಇರುವುದಾಗಿ ಶಂಕಿಸಲಾಗಿದೆ. ಕೊರೊನಾ ವೈರಸ್​ ಇರುವುದಾಗಿ ಶಂಕಿಸಲಾಗಿರುವ ವ್ಯಕ್ತಿಯು ಚೀನಾದಿಂದ ಪಾಕ್​ಗೆ ಬಂದಿದ್ದ ಎನ್ನಲಾಗಿದೆ. ಈ ವ್ಯಕ್ತಿಯು ಪಿಒಕೆಯ ಗಿಲ್ಗಿಟ್-ಬಾಲ್ಟಿಸ್ತಾನ್ ಮೂಲದವನಾಗಿದ್ದು ಚೀನಾದಿಂದ ಮರಳಿದ ಈತ ಅಬೋಟಾಬಾದ್​ನಲ್ಲಿ ತಂಗಿದ್ದ ಎಂದು ಹೇಳಲಾಗಿದೆ.

    ಸದ್ಯ ಶಂಕಿತನನ್ನು ಅಬೊಟಾಬಾದ್​ನ ಆಯುಬ್​ ವೈದ್ಯಕೀಯ ಆಸ್ಪತ್ರೆಯಲ್ಲಿ ತಪಾಸಣೆಯಲ್ಲಿಡಲಾಗಿದೆ.

    ಚೀನಾದಲ್ಲಿ ಕೊರೊನಾ ವೈರಸ್​ನ ದಾಳಿ ಹೆಚ್ಚಿದ್ದು ಸುಮಾರು 68,000 ಜನರು ಈ ವೈರಸ್​ಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ವೈರಸ್​ನಿಂದ ಸತ್ತವರ ಸಂಖ್ಯೆ 1600ಕ್ಕೆ ಏರಿದೆ. ಚೀನಾದಲ್ಲಿ ವಾಸವಿರುವ 647 ಭಾರತೀಯರನ್ನು ಭಾರತ ವಿಶೇಷ ವಿಮಾನಗಳ ಮೂಲಕ ಕರೆತಂದಿದೆ. ಪಾಕಿಸ್ತಾನದ ಹಲವರು ಚೀನಾದಲ್ಲಿ ವಾಸವಿದ್ದು ತಮ್ಮನ್ನು ರಕ್ಷಿಸಿ ಎಂದು ಕೇಳಿಕೊಂಡಾಗ ಪಾಕ್​ ಅವರನ್ನು ಸ್ವದೇಶಕ್ಕೆ ಕರೆತರವುದಿಲ್ಲ ಎಂದು ಹೇಳಿತ್ತು. ಹಾಗಾಗಿ ಅವರು ಭಾರತ ಸರ್ಕಾರದಲ್ಲಿ ತಮ್ಮನ್ನು ರಕ್ಷಿಸಿ ಎಂದು ಕೇಳಿಕೊಂಡಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts