More

    ಆಯುಕ್ತರ ಮನವೊಲಿಕೆಗೆ ಉಪವಾಸ ಅಂತ್ಯ


    ಚಾಮರಾಜನಗರ : ನಗರಸಭೆ ವ್ಯಾಪ್ತಿಯ ಬಹುತೇಕ ಆಸ್ತಿಗಳಿಗೆ ಇ-ಸ್ವತ್ತು ದಾಖಲೆ ನೀಡುವ ಪ್ರಕ್ರಿಯೆಗೆ ತೊಡಕಾಗಿರುವ 5 ವರ್ಷದ ಹಿಂದಿನ ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ ರದ್ದುಪಡಿಸಬೇಕೆಂದು ಆಗ್ರಹಿಸಿ ಸೋಮವಾರ ಕೊಳ್ಳೇಗಾಲ ನಗರಸಭೆ ಮುಂಭಾಗ ನಗರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಮಧುಚಂದ್ರ ಕೈಗೊಂಡಿದ್ದ ಅಮರಣಾಂತ ಉಪವಾಸ ಉಪವಿಭಾಗಾಧಿಕಾರಿಗಳೂ ಆದ ನಗರಸಭೆ ಪ್ರಭಾರ ಆಯುಕ್ತ ಬಿ.ಆರ್.ಮಹೇಶರ ಮನವೊಲಿಕೆಯಿಂದ ಒಂದೇ ದಿನಕ್ಕೆ ಅಂತ್ಯಗೊಂಡಿದೆ.


    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಧುಚಂದ್ರ, ಪೌರಾಡಳಿತ ನಿರ್ದೇಶನಾಲಯ ಹೊರಡಿಸಿರುವ ಸುತ್ತೋಲೆ ಅವೈಜ್ಞಾನಿಕವಾಗಿದೆ. ಇದ್ದರಿಂದ ನಗರಸಭೆ ವ್ಯಾಪ್ತಿಯ ಬಹುತೇಕ ಆಸ್ತಿಗಳು ಹಾಗೂ ನಿವೇಶನಗಳಿಗೆ ಇ-ಸ್ವತ್ತು ನೀಡಲು ಸಾಧ್ಯವಾಗುತ್ತಿಲ್ಲ. 2017ರ ಹಿಂದೆ ಸಾರ್ವಜನಿಕರು ಬಹಳ ಸರಳವಾಗಿ ಇ-ಸ್ವತ್ತು ಪಡೆಯುತ್ತಿದ್ದರು. ಆದರೆ, 2018ರ ಸುತ್ತೋಲೆಯಿಂದ ಜನರಿಗೆ ಕಷ್ಟವಾಗುತ್ತಿದೆ. ಇದು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಜನರಿಗೆ ಸಮಸ್ಯೆ ಆಗಿದೆ. ಆದ್ದರಿಂದ ಸರ್ಕಾರ 2018ರ ಸುತ್ತೋಲೆ ರದ್ದು ಪಡಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗವ ರೀತಿ ಸುತ್ತೋಲೆ ಹೊರಡಿಸಬೇಕಿದೆ ಎಂದರು.


    ಮಧುಚಂದ್ರ ಹೋರಾಟಕ್ಕೆ ಕೆಲವು ಬಿಜೆಪಿ ಬೆಂಬಲಿತ ನಗರಸಭಾ ಸದಸ್ಯರು, ವಿವಿಧ ಸಂಘ ಸಂಸ್ಥೆಯ ಮುಖಂಡರು ಮತ್ತು ಸಾರ್ವಜನಿಕರು ಬೆಂಬಲ ನೀಡಿದರು. ನಗರಸಭೆ ಸದಸ್ಯರಾದ ಪ್ರಕಾಶ್ ಶಂಕನಪುರ, ಕವಿತಾ, ಮಾಜಿ ಸದಸ್ಯ ಕೆ.ಕೆ.ಮೂರ್ತಿ, ಮುಖಂಡರಾದ ಜಗದೀಶ್, ಚಂದು, ಪ್ರಭುಸ್ವಾಮಿ, ರಮೇಶ್, ರಾಜಶೇಖರ್, ನಾಗಣ್ಣ, ಸಿದ್ದಪ್ಪಾಜಿ, ಕಿರಣ್, ಶಿವಕುಮಾರ್ ಬೂದಿತಿಟ್ಟು, ಆಗಸ್ಟೀನ್, ಮುಳ್ಳೂರು ಪ್ರಭು, ಜಯ ಕರ್ನಾಟಕ ತಾಲೂಕು ಅಧ್ಯಕ್ಷ ಪ್ರಭುಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts