More

    ಬೆಂಕಿಯಿಂದ ರಕ್ಷಿಸಲು ಇಲಾಖೆ ಸಜ್ಜು

    ಗುಂಡ್ಲುಪೇಟೆ: ಬಂಡೀಪುರವನ್ನು ಆಕಸ್ಮಿಕ ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಸಂಪೂರ್ಣ ಸಜ್ಜಾಗಿದೆ.
    ಕಳೆದ ತಿಂಗಳು ಅರಣ್ಯ ಪ್ರದೇಶದ ಒಳಗೆ ನಿಗದಿತ ಪ್ರದೇಶಗಳಲ್ಲಿ ಫೈರ್ ಲೈನ್ ಹಾಗೂ ರಸ್ತೆ ಬದಿಗಳಲ್ಲಿ ವ್ಯೆ ಲೈನ್ ಕಾಮಗಾರಿ ಆರಂಭಿಸಿ ಸದ್ಯ ರಸ್ತೆ ಬದಿಗಳಲ್ಲಿ ಹುಲ್ಲು ಸುಡುವ ಕಾರ್ಯ ಆರಂಭಿಸಿದೆ.

    ಬಂಡೀಪುರ ಹುಲಿ ಯೋಜನೆಯ ಅರಣ್ಯ ಪ್ರದೇಶದಲ್ಲಿ ಹಾದುಹೋಗಿರುವ ತಮಿಳುನಾಡು ಹಾಗೂ ಕೇರಳವನ್ನು ಸಂಪರ್ಕಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿದಿನವೂ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಪ್ರಯಾಣಿಕರ ನಿರ್ಲಕ್ಷೃದಿಂದ ಅರಣ್ಯಕ್ಕೆ ಬೆಂಕಿ ಬೀಳುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸದ್ಯ ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ ಒಣಹುಲ್ಲು ಸುಡುವ ಕಾರ್ಯಕೈಗೊಂಡಿದೆ. ತಮಿಳುನಾಡು ರಸ್ತೆಯ ಮೇಲುಕಾಮನಹಳ್ಳಿಯಿಂದ ಕೆಕ್ಕನಹಳ್ಳ, ಸುಲ್ತಾನ್‌ಬತ್ತೇರಿ ರಸ್ತೆಯ ಮದ್ದೂರಿನಿಂದ ಮೂಲೆಹೊಳೆವರೆಗೆ ರಸ್ತೆ ಬದಿಗಳಲ್ಲಿ ಅರಣ್ಯ ಸಿಬ್ಬಂದಿ ಹುಲ್ಲು ಸುಡುವ ಕಾರ್ಯ ಆರಂಭಿಸಿದೆ. ಇವರೊಂದಿಗೆ ಸ್ಪ್ರೇಯರ್ ಮೂಲಕ ಬೆಂಕಿ ಅತ್ತಿತ್ತ ಹರಡದಂತೆ ನೀರು ಸಿಂಪಡಿಸಿ ನಿಯಂತ್ರಿಸಲಾಗುತ್ತಿದೆ.

    ಫೈರ್ ಲೈನ್ ನಿರ್ಮಾಣ: ಅರಣ್ಯ ಇಲಾಖೆ ಈ ಬಾರಿಯೂ ಬಂಡೀಪುರಕ್ಕೆ ಬೆಂಕಿ ಬೀಳದಂತೆ ಮಾಡಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ. ಈಗಾಗಲೇ 13 ವಲಯಗಳಲ್ಲಿ 2750 ಕಿಮೀ ಉದ್ದಕ್ಕೂ ಲಂಟಾನ ಮುಂತಾದ ಕಳೆಗಳನ್ನು ತೆಗೆದು ಫೈರ್ ಲೈನ್ ನಿರ್ಮಾಣ ಮಾಡಲಾಗಿದೆ. ಈ ಹಿಂದಿನಂತೆಯೇ ಜನವರಿ ಆರಂಭದಿಂದಲೇ ಫೈರ್ ವಾಚರ್ ನೇಮಕ ಮಾಡಿಕೊಳ್ಳಲಾಗಿದ್ದರೂ ಹುಲ್ಲು ಒಣಗದ ಕಾರಣ ಸುಡುವ ಕಾರ್ಯ ವಿಳಂಬವಾಗಿತ್ತು.
    ಉಪಗ್ರಹ, ವಾಯುಪಡೆ ಬಳಕೆ: 2018ರಲ್ಲಿ ಬಂಡೀಪುರಕ್ಕೆ ಬೆಂಕಿ ಬಿದ್ದು ಭಾರೀ ಅನಾಹುತ ಸಂಭವಿಸಿದ ನಂತರ ಸ್ಯಾಟಲೈಟ್ ನೆರವಿನಿಂದ ಅರಣ್ಯಪ್ರದೇಶವನ್ನು ಗಮನಿಸಲಾಗುತ್ತಿದೆ. ಯಾವುದೇ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೆ ಕಂಟ್ರೋಲ್ ರೂಂ ಗೆ ಎಚ್ಚರಿಕೆ ಕರೆ ಬರುವಂತೆ ಮುನ್ನೆಚ್ಚರಿಕೆ ಕೈಗೊಂಡಿದೆ. ಕಾಡಂಚಿನಲ್ಲಿ ಡ್ರೋನ್ ಕ್ಯಾಮರಾಗಳನ್ನು ಹಾರಿಸಿ ಕಣ್ಗಾವಲು ಇಡಲಾಗಿದೆ. ಬಿಸಿಲು ಹೆಚ್ಚಿದಂತೆ ಹಗಲು-ರಾತ್ರಿ ಗಸ್ತು ನಡೆಸಲಾಗುವುದು. ತುರ್ತುಸಹಾಯಕ್ಕೆ ಅಕ್ಕಪಕ್ಕದ ರೆಸಾರ್ಟ್ ಹಾಗೂ ಇನ್ನಿತರ ಕಡೆಗಳಿಂದ ವಾಹನ ಹಾಗೂ ಸಿಬ್ಬಂದಿ ಸಹಾಯ ಪಡೆದುಕೊಳ್ಳಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

    ಈಗಾಗಲೇ ಎಲ್ಲ ವಲಯಗಳು ಹಾಗೂ ಉಪ ವಿಭಾಗ ಮಟ್ಟದಲ್ಲಿ ಅಧಿಕಾರಿಗಳ ವರ್ಕ್‌ಶಾಪ್ ಹಾಗೂ ಸಭೆ ನಡೆಸಿ ಸಿಬ್ಬಂದಿಗೆ ತರಬೇತಿ ನೀಡಿ ವಲಯವಾರು ಬೆಂಕಿ ನಂದಿಸುವ ಉಪಕರಣಗಳನ್ನು ಸಜ್ಜಾಗಿರಿಸಲಾಗಿದೆ.
    ಡಾ.ರಮೇಶ್ ಕುಮಾ ರ್ಹು ಲಿ ಯೋಜನೆಯ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts