More

    ನಿಜವಾಗಿಯೂ ಜಾಮಿಯಾ ವಿವಿಯ ರೀಡಿಂಗ್​ ಹಾಲ್​ನಲ್ಲಿ ನಡೆದಿದ್ದೇನು? ಸಿಸಿಟಿವಿ ದೃಶ್ಯ ಬಿಡುಗಡೆ ಮಾಡಿದ ದೆಹಲಿ ಪೊಲೀಸ್​

    ನವದೆಹಲಿ: ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಡಿ.15ರಂದು ರೀಡಿಂಗ್​ ಹಾಲ್​ನಲ್ಲಿ ನಡೆದಿದ್ದೇನು ಎನ್ನುವ ಸತ್ಯಾಂಶವನ್ನು ದೆಹಲಿ ಪೊಲೀಸರು ಬಿಚ್ಚಿಟ್ಟಿದ್ದಾರೆ. ಪೊಲೀಸರು ರೀಡಿಂಗ್​ ಹಾಲ್​ಗೆ ನುಗ್ಗಿ ಲಾಠಿ ಚಾರ್ಜ್​ ಮಾಡುವುದುಕ್ಕೂ ಮೊದಲು ಅಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯವನ್ನು ದೆಹಲಿ ಪೊಲೀಸ್​ ಕ್ರೈಂ ಬ್ರ್ಯಾಂಚ್​ನ ವಿಶೇಷ ತನಿಖಾ ತಂಡ ಬಿಡುಗಡೆ ಮಾಡಿದೆ.

    ನಿನ್ನೆ (ಫೆ.16) ಜಾಮಿಯಾ ವಿವಿಯ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್​ ಮಾಡಿದ ವಿಡಿಯೋವೊಂದನ್ನು ವಿವಿಯ ಸಮನ್ವಯ ಸಮಿತಿ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಹಾಕಿತ್ತು. ಡಿಸೆಂಬರ್​ 15ರ ವಿಡಿಯೋವಾಗಿದ್ದ ಅದರಲ್ಲಿ ಪೊಲೀಸರು ರೀಡಿಂಗ್​ ಹಾಲ್​ನೊಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿದ್ದು ಸೆರೆಯಾಗಿತ್ತು. ಈ ವಿಡಿಯೋ ಸಾಕಷ್ಟು ಸುದ್ದಿ ಮಾಡಿದ್ದು ಜನರು ದೆಹಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಲಾರಂಭಿಸಿದ್ದರು. ಆದರೆ ಇದಾದ ಸ್ವಲ್ಪ ಸಮಯಕ್ಕೆ ದೆಹಲಿ ಪೊಲೀಸರು ಅದೇ ದಿನದ ಸಿಸಿಟಿವಿ ದೃಶ್ಯವೊಂದನ್ನು ಬಿಡುಗಡೆ ಮಾಡುವ ಮೂಲಕ ಸತ್ಯಾಂಶವನ್ನು ಹೊರಗೆಳೆದಿದ್ದಾರೆ.

    ರೀಡಿಂಗ್​ ಹಾಲ್​ಗೆ ಪೊಲೀಸರು ಹೋಗುವುದಕ್ಕೂ ಸ್ವಲ್ಪ ಮೊದಲು ಚಿತ್ರಿತವಾಗಿರುವ ಆ ವಿಡಿಯೋದಲ್ಲಿ ಕಾಲೇಜಿನ ಬಾಲ್ಕನಿಯಲ್ಲಿ ನಿಂತ ವಿದ್ಯಾರ್ಥಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದು ಸೆರೆಯಾಗಿದೆ. ಮೊದಲು ಒಂದಿಬ್ಬರಿದ್ದ ಗುಂಪು ನಂತರ ಹತ್ತಾರು ಜನರದ್ದಾಗಿದ್ದು ಅದರಲ್ಲಿ ಕೆಲವರು ಕಲ್ಲುಗಳನ್ನು ತಂದು ಪೊಲೀಸರ ಮೇಲೆ ಎಸೆದಿದ್ದಾರೆ.

    ಹಾಗೆಯೇ ಮಾಸ್ಕ್​ ತೊಟ್ಟ ಕೆಲ ಪ್ರತಿಭಟನಾಕಾರರು ಓಡಿ ಬಂದು ಕಾಲೇಜಿನ ಕ್ಲಾಸ್​ ರೂಂ, ರೀಡಿಂಗ್​ ಹಾಲ್​ನಲ್ಲಿ ಅಡಗಿ ಕುಳಿತಿದ್ದಾರೆ. ಇದೇ ಕಾರಣಗಳಿಂದಾಗಿ ಪೊಲೀಸರು ರೀಡಿಂಗ್​ ಹಾಲ್​ಗೆ ನುಗ್ಗಿ ಲಾಠಿ ಚಾರ್ಜ್​ ಮಾಡಿದ್ದಾರೆ.
    ಡಿಸೆಂಬರ್​ 15ರಂದು ಜಾಮಿಯಾ ವಿವಿಯ ಆವರಣವು ಸಿಎಎ ವಿರುದ್ಧದ ಹೋರಾಟದಿಂದಾಗಿ ಅಕ್ಷರಶಃ ಹಿಂಸಾತ್ಮಕ ವಾತಾವರಣಕ್ಕೆ ತಿರುಗಿತ್ತು. ಪರಿಸ್ಥಿತಿಯ ನಿಯಂತ್ರಣಕ್ಕೆ ಪೊಲೀಸರು ಲಾಠಿ ಚಾರ್ಜ್​ ಮಾಡಲೇಬೇಕಾದ ಅವಶ್ಯಕತೆ ಉಂಟಾಗಿತ್ತು ಎನ್ನಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts