More

    ಅಭಿವೃದ್ಧಿಯಲ್ಲಿ ದೇಶ 45 ವರ್ಷ ಹಿಂದಕ್ಕೆ

    ಮೂಡಿಗೆರೆ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಹತ್ತು ವರ್ಷದಲ್ಲಿ ದೇಶದ ಜನರ ಜೀವನಮಟ್ಟ 45 ವರ್ಷ ಹಿಂದಕ್ಕೆ ಸರಿದಿದೆ ಎಂದು ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹೇಳಿದರು.
    ಬುಧವಾರ ಎಸ್‌ಡಿಪಿಐ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜನರಿಂದ ದಿನನಿತ್ಯ ಬಳಕೆಯ ಸಾಮಗ್ರಿಯಿಂದ ದೇಶದ ಶೇ.67 ಹಾಗೂ ವಾಣಿಜ್ಯ ತೆರಿಗೆ, ಜಿಎಸ್‌ಟಿ ಸೇರಿದಂತೆ ವಿವಿಧ ರೂಪದಲ್ಲಿ ಶೇ.33ರಷ್ಟು ತೆರಿಗೆ ಸಂಗ್ರಹಿಸುವ ಕೇಂದ್ರ ಸರ್ಕಾರ ನಿಗದಿಪಡಿಸಿದ ಅನುದಾನವನ್ನು ರಾಜ್ಯಗಳಿಗೆ ನೀಡುತ್ತಿಲ್ಲ. ಇದರಿಂದ ವಿವಿಧ ರಾಜ್ಯ ಸರ್ಕಾರಗಳು ಕೇಂದ್ರದ ವಿರುದ್ಧ ಪ್ರತಿನಿತ್ಯ ಕಿಡಿ ಕಾರುತ್ತಿವೆ. 10ವರ್ಷದಲ್ಲಿ ಜನರಿಗಾಗಿ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿಲ್ಲ. ನರೇಂದ್ರ ಮೋದಿ ಆಡಳಿತದಲ್ಲಿ 118 ಲಕ್ಷ ಕೋಟಿ ರೂ.ಸಾಲ ಮಾಡಲಾಗಿದೆ ಎಂದು ದೂರಿದರು.
    ದೇಶದಲ್ಲಿ 41 ಕೋಟಿ ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. 22 ಕೋಟಿ ಜನರಿಗೆ ನಿತ್ಯ ಊಟ ಸಿಗುತ್ತಿಲ್ಲ. ಯುವಕರಿಗೆ ಉದ್ಯೋಗ ನೀಡದೆ ಅವರ ಕೈಗೆ ಮೊಬೈಲ್ ನೀಡಿ ನಿರ್ಗತಿಕರನ್ನಾಗಿ ಮಾಡುವ ಹುನ್ನಾರ ನಡೆದಿದೆ. ಭ್ರಷ್ಟಾಚಾರ ಕಾನೂನು ಬದ್ಧಗೊಳಿಸಲು ಜನರಲ್ಲಿ ಇನ್ನೊಂದು ಅವಕಾಶ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts