More

    ಹುಡುಗಿ ಕಡೆಯವ್ರು ನನ್ನ ಮನೆಗೆ ಬರ್ತಿದ್ದಾರೆ ಎಂದು ಪತ್ರ ಬರೆದ ಪೊಲೀಸ್ ಕಾನ್ಸ್​ಟೇಬಲ್‌ಗೆ ಸಿಕ್ತು ವಾರದ ರಜೆ!

    ದಾವಣಗೆರೆ: ಪೊಲೀಸರು ಸದಾ ಒತ್ತಡದಲ್ಲಿ ಮತ್ತು ಪ್ರತಿದಿನ 14-16ಗಂಟೆಗಳಷ್ಟು ಕೆಲಸ ಮಾಡುತ್ತಾರೆ. ಬಂದೋಬಸ್ತ್​, ಗಣ್ಯರ ಭೇಟಿ, ತನಿಖೆ ಮುಂತಾದ ಸಂದರ್ಭದಲ್ಲಿ ದಿನಪೂರ್ತಿ ಕೆಲಸ ಮಾಡಬೇಕಾದಂತಹ ಒತ್ತಡವೂ ಇರುತ್ತದೆ. ಅಲ್ಲದೆ ಸಿಬ್ಬಂದಿ ಕೊರೆತೆಯಂತಹ ಸಮಸ್ಯೆ ಎದುರಾದಾಗ ಹೆಚ್ಚುವರಿಕೆ ಕೆಲಸ ಎದುರಾಗುತ್ತದೆ. ಈ ಸಂದರ್ಭದಲ್ಲಿ ಪೊಲೀಸರಿಗೆ ಕನಿಷ್ಠ ವಾರದ ರಜೆಯೂ ಲಭ್ಯವಾಗುವುದು ಕಷ್ಟ. ಇದರಿಂದ ಒತ್ತಡ ಏರ್ಪಟ್ಟು, ಮನೆಮಂದಿಯ ಜತೆಗೂ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ.

    ಇದೀಗ ದಾವಣಗೆರೆಯ ಪೊಲೀಸರೊಬ್ಬರು ರಜೆಯಿಲ್ಲದೆ ಚಿಂತೆಗೀಡಾಗಿದ್ದಾರೆ. ಜಿಲ್ಲೆಯ ಹನುಮಂತಪ್ಪ ನೀಲಗುಂದ ಎಂಬ ಪೊಲೀಸ್​ ಕಾನ್ಸ್​ಟೇಬಲ್ ಒಬ್ಬರಿಗೆ ಮನೆಯಲ್ಲಿ ಮದುವೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಹುಡುಗಿ ಮನೆಯವರು, ಹುಡುಗನ ಮನೆಗೆ ಬರಲು ನಿರ್ಧರಿಸಿದ್ದಾರೆ. ಈ ವೇಳೆ ಕಾನ್ಸ್​ಟೇಬಲ್​ಗೆ ಊರಿಗೆ ತೆರಳಬೇಕಾಗಿದೆ. ಆದರೆ ಕಾನ್ಸ್​ಟೇಬಲ್ ಹನುಮಂತಪ್ಪಗೆ ಕನಿಷ್ಠ ವಾರದ ರಜೆಯೂ ಲಭ್ಯವಾಗಿಲ್ಲ. ಇದರಿಂದ ಕಂಗೆಟ್ಟ ಹನುಮಂತಪ್ಪ ನೇರವಾಗಿ ಜಿಲ್ಲಾ ಪೊಲೀಸ್ ನಿರೀಕ್ಷಕರಿಗೆ ಪತ್ರ ಬರೆದಿದ್ದಾನೆ.

    ಪತ್ರದಲ್ಲೇನಿದೆ?

    ಮಾನ್ಯರೇ, ನನಗೆ ಒಂದು ದಿನದ ವಾರದ ರಜೆ ಕೋರಿ ಮನವಿ ಪತ್ರವನ್ನು ಬರೆಯುತ್ತಿದ್ದೇನೆ. ನನ್ನ ಮದುವೆಯಾಗಲು ಇಚ್ಚಿಸುವ ಹುಡುಗಿ ಮನೆಯವರು ನನ್ನ ಮನೆಗೆ ಬರುವ ಕಾರ್ಯಕ್ರಮ ನಿಗದಿಯಾಗಿದೆ. ಹೀಗಾಗಿ ತಾವುಗಳು 13-11-22ರಂದು ಒಂದು ದಿನದ ವಾರದ ರಜೆಯನ್ನು ಮಂಜೂರು ಮಾಡಬೇಕೆಂದು ಕೋರುತ್ತಿದ್ದೇನೆ ಎಂದು ಹನುಮಂತಪ್ಪ ನೀಲಗುಂದ ಪತ್ರ ಬರೆದಿದ್ದಾರೆ.

    ದಾವಣಗೆರೆ ಪೊಲೀಸ್ ನಿರೀಕ್ಷಕರಿಗೆ ಈ ಪತ್ರ ತಲುಪುತ್ತಿದ್ದಂತೆ ರಜೆ ನೀಡಿದ್ದಾರೆ. ಇದಲ್ಲದೆ, ನೀವು ಮದುವೆಯಾಗಲು ಇಚ್ಛಿಸಿರುವ ಹುಡುಗಿ ಒಪ್ಪಿಕೊಂಡು, ಶೀಘ್ರದಲ್ಲಿ ನಿಮ್ಮನ್ನು ಮದುವೆ ಆಗಲಿ ಎಂದು ಪೊಲೀಸ್ ನಿರೀಕ್ಷಕ ಸಿ.ಬಿ.ರಿಷ್ಯಂತ್ ಐಪಿಎಸ್​ ಶುಭಹಾರೈಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts