More

    ಕಾಮಗಾರಿಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿ

    ಬೇಲೂರು: ಪುರಸಭೆಯ ವಿವಿಧ ವಾರ್ಡ್‌ಗಳಲ್ಲಿ ನಗರೋತ್ಥಾನ ಯೋಜನೆಯಡಿ ನಾಲ್ಕನೇ ಹಂತದ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮಾ ಹಾಗೂ ಅಧಿಕಾರಗಳ ತಂಡ ಪಟ್ಟಣದ ಪಂಪಹೌಸ್ ಬೀದಿ, ಶಿವಜ್ಯೋತಿ ಪಣ ಬೀದಿ, ಲಕ್ಷ್ಮೀಪುರ ಬೀದಿ, ಪುರಿಬಟ್ಟಿ ಬೀದಿ ಸೇರಿದಂತೆ ಇತರ ವಾರ್ಡ್‌ಗಳಿಗೆ ಶನಿವಾರ ಭೇಟಿ ನೀಡಿ ಕಾಮಗಾರಿಗಳನ್ನು ವೀಕ್ಷಿಸಿದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಸತ್ಯಭಾಮಾ, ಪಟ್ಟಣದ ಕೆಲ ವಾರ್ಡ್‌ನಲ್ಲಿ ಸಮರ್ಪಕವಾಗಿ ಕೆಲಸ ನಡೆದಿಲ್ಲ. ಅಲ್ಲದೆ ಕಾಮಗಾರಿಯೂ ಗುಣಮಟ್ಟದಿಂದ ಕೂಡಿಲ್ಲ ಎಂಬ ದೂರುಗಳು ಕೇಳಿಬರುತ್ತಿದೆ. ಸಾರ್ವಜನಿಕರ ದೂರು ಹಾಗೂ ಆರೋಪ ಕಂಡುಬಂದರೆ ಗುತ್ತಿಗೆದಾರರ ಬಿಲ್ಲನ್ನು ತಡೆ ಹಿಡಿದು ಕಪ್ಪುಪಟ್ಟಿಗೆ ಸೇರಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ಹಲವಾರು ಯೋಜನೆಯಡಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತಿದೆ. ಅದಕ್ಕೆ ಸಮರ್ಪಕವಾಗಿ ಕೆಲಸ ನಡೆಯಬೇಕು ಎಂದು ಹೇಳಿದರು.

    ಹಾಸನ ಜಿಲ್ಲಾ ನಗರೋತ್ಥಾನ ಯೋಜನಾಧಿಕಾರಿ ಜಗದೀಶ್ ಮಾತನಾಡಿ, ನಾಲ್ಕನೇ ಹಂತದ ಕಾಮಗಾರಿ ನಡೆದಿರುವ ಬಗ್ಗೆ ಹಣ ಬಿಡುಗಡೆಗೂ ಮೊದಲು ಕಾಮಗಾರಿ ವೀಕ್ಷಿಸಿ ಅದರ ವಾಸ್ತವಂಶವನ್ನು ಸರ್ಕಾರಕ್ಕೆ ವರದಿ ಮಾಡಿದ ನಂತರ ಹಣ ಬಿಡುಗಡೆ ಮಾಡಲಾಗುತ್ತದೆ. ಅದರಂತೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಎಂದರು.

    ತಹಸೀಲ್ದಾರ್ ಎಂ.ಮಮತಾ, ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್, ಆರೋಗ್ಯಾಧಿಕಾರಿ ಲೋಹಿತ್, ಜ್ಯೋತಿ, ಕಂದಾಯಧಿಕಾರಿ ಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts