More

    ರಾಜ್ಯದಲ್ಲಿ 6 ಮತ್ತು 7ನೇ ತರಗತಿ ಮಕ್ಕಳಿಗೂ ಆನ್​ಲೈನ್​​ ಕ್ಲಾಸ್​ ರದ್ದು?

    ಬೆಂಗಳೂರು: ರಾಜ್ಯದಲ್ಲಿ 1ರಿಂದ 7ನೇ ತರಗತಿವರೆಗೂ ಆನ್​ಲೈನ್​ ಕ್ಲಾಸ್​ ರದ್ದು ಮಾಡಲು ಸಚಿವ ಸಂಪುಟ ಸಭೆಯಲ್ಲಿ ಚಿರ್ಚಿಸಲಾಗಿದೆ.

    ರಾಜ್ಯದ ಖಾಸಗಿ ಶಾಲೆಗಳು ಶುಲ್ಕದ ಆಸೆಗೆ ಬಿದ್ದು ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ವಿದ್ಯಾಥಿರ್ಗಳ ಮೇಲೆ ಹೊರಿಸಿದ್ದ ಆನ್​ಲೈನ್​ ಪಾಠದ ಹೊರೆಯನ್ನು ಈಗಾಗಲೇ ಸರ್ಕಾರ ಇಳಿಸಿದೆ. ಇದರ ಮುಂದುವರಿದ ಭಾಗವಾಗಿ 6 ಮತ್ತು 7ನೇ ತರಗತಿಯ ಮಕ್ಕಳಿಗೂ ಆನ್​ಲೈನ್​ ಗುಮ್ಮದಿಂದ ಮುಕ್ತಿ ನೀಡುವ ಸಂಬಂಧ ಇಂದಿನ(ಗುರುವಾರ) ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ.

    ಇದನ್ನೂ ಓದಿರಿ ಪಿಯುಸಿವರೆಗೂ ಆನ್‌ಲೈನ್ ಶಿಕ್ಷಣ ರದ್ದಾಗುತ್ತಾ? ಸರ್ಕಾರಕ್ಕೆ ಸಿದ್ದು ಸಲಹೆ ಇಲ್ಲಿದೆ…

    ಈಗಾಗಲೇ ಎಲ್​ಕೆಜಿಯಿಂದ 5ನೇ ತರಗತಿವರೆಗೆ ಎಲ್ಲ ಪಠ್ಯಕ್ರಮದ (ರಾಜ್ಯ, ಸಿಬಿಎಸ್​ಇ, ಐಸಿಎಸ್​ಇ) ಶಾಲೆಗಳಿಗೂ ಅನ್ವಯಿಸುವಂತೆ ಆನ್​ಲೈನ್​ ಶಿಕ್ಷಣವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ.

    ಈ ಸಂಬಂಧ ಬುಧವಾರ ಮಾತನಾಡಿದ್ದ ಸಚಿವ ಸುರೇಶ್ ಕುಮಾರ್, ಖಾಸಗಿ ಶಿಕ್ಷಣ ಸಂಸ್ಥೆಗಳು ಪೂರ್ವ ಪ್ರಾಥಮಿಕ ಶಾಲಾ ವಿದ್ಯಾಥಿರ್ಗಳಿಗೆ ವಿವೇಚನಾ ರಹಿತವಾಗಿ ಆನ್​ಲೈನ್​ನಲ್ಲಿ ಬೋಧನೆ ಮಾಡುತ್ತಿರುವುದಾಗಿ ಪಾಲಕರಿಂದ ದೂರುಗಳು ಬಂದಿವೆ. ಎಷ್ಟೋ ಪಾಲಕರ ಬಳಿ ಸ್ಮಾರ್ಟ್​ ಫೋನ್​ ಹಾಗೂ ಲ್ಯಾಪ್​ಟಾಪ್​ ಇಲ್ಲ. ಇದೂ ಒಂದು ರೀತಿಯಲ್ಲಿ ಹಿಂಸೆ ಆಗಿದೆ. ಹೀಗಾಗಿ ಈ ಕೂಡಲೇ ಆನ್​ಲೈನ್​ ತರಗತಿಗಳನ್ನು ರದ್ದು ಮಾಡಬೇಕು. ಆನ್​ಲೈನ್​ ಕಲಿಕೆ ಹೆಸರಲ್ಲಿ ಶುಲ್ಕವನ್ನೂ ಸಂಗ್ರಹಿಸಬಾರದು ಎಂದು ಎಚ್ಚರಿಕೆ ನೀಡಿದ್ದರು.

    ಇದನ್ನೂ ಓದಿರಿ ರಾತ್ರೋರಾತ್ರಿ ಕುಸಿದ ದೇವಾಲಯ ಗೋಪುರ! ಇದು ಅಪಾಯದ ಮುನ್ಸೂಚನೆಯೇ..?

    ಈ ನಡುವೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಿಯುಸಿವರೆಗೂ ಆನ್‌ಲೈನ್ ಶಿಕ್ಷಣ ರದ್ದಾಗಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಕರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಸದ್ಯ ಶಾಲೆಯಲ್ಲಿ ನೇರ ತರಗತಿಗಳು ಆರಂಭವಾಗಿಲ್ಲ. ಆದರೂ ಖಾಸಗಿ ಶಾಲೆಗಳು ಶುಲ್ಕದ ಆಸೆಗೆ ಬಿದ್ದು ಪುಟ್ಟ ಮಕ್ಕಳ ಮೇಲೂ ಆನ್​ಲೈನ್​ ಪಾಠದ ಹೊರೆ ಹಾಕಿದ್ದವು. ಸದ್ಯ ಆನ್​ಲೈನ್ ​ಗುಮ್ಮ ದೂರವಾಗಿ ಈ ಮಕ್ಕಳೀಗ ನಿಟ್ಟುಸಿರು ಬಿಡುವಂತಾಗಿದೆ.

    ಇದನ್ನೂ ಓದಿರಿ ಬೇಡಮ್ಮ ಆನ್​ಲೈನ್ ಗುಮ್ಮ: ತಜ್ಞರು, ವೈದ್ಯರು, ನಟರ ಆಕ್ರೋಶ, ಇಲಾಖೆಯಲ್ಲೇ ಆಕ್ಷೇಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts