More

    ಕೈಗೆ ಅಧಿಕಾರ ಸಿಕ್ಕ ತಕ್ಷಣ ಬಿಜೆಪಿಗರು ಜೈಲಿಗೆ

    ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಸರ್ಕಾರದ ಹಗರಣಗಳ ತನಿಖೆ ನಡೆಸಿ, ತಪ್ಪಿತಸ್ಥರನ್ನು ಜೈಲಿಗೆ ಕಳಿಸುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

    ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದ ಅವಧಿ ಭ್ರಷ್ಟಾಚಾರವಿತ್ತು ಎಂದು ಹೇಳುತ್ತಿರುವ ಬಿಜೆಪಿಯವರು ಪ್ರತಿಪಕ್ಷದಲ್ಲಿದ್ದಾಗ ಯಾಕೆ ಹೇಳಲಿಲ್ಲ? ಶೇ.40 ಕಮಿಷನ್ ಸರ್ಕಾರ ಎಂದು ನಾವು ಹೇಳಲು ಆರಂಭಿಸಿದ್ದರಿಂದ ದಾಖಲೆ ಕೇಳುತ್ತಿದ್ದಾರೆ. ಧಮ್ ಇದ್ದರೆ ನಮ್ಮ ಹಾಗೂ ಅವರ ಸರ್ಕಾರಗಳ ಅವಧಿ ಆಗಿರುವ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ವಹಿಸಲಿ ಎಂದು ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದರು.

    ಚುನಾವಣೆ ಇನ್ನು ಮೂರು ತಿಂಗಳಿರುವಾಗ ನಾವು ಯಾವುದೇ ಟೆಂಡರ್ ಕರೆಯುತ್ತಿರಲಿಲ್ಲ. ಆದರೆ, ಬಿಜೆಪಿ ಸರ್ಕಾರ ಮನಸ್ಸಿಗೆ ಬಂದಂತೆ ಜನರ ತೆರಿಗೆ ಹಣ ಲೂಟಿ ಹೊಡೆಯುತ್ತಿದೆ. ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಇದೆಲ್ಲ ಆರಂಭವಾಗಿದೆ. ಭ್ರಷ್ಟಾಚಾರದ ದಾಖಲೆ ಇದ್ದರೆ ಬಿಡುಗಡೆ ಮಾಡುವಂತೆ ಬೊಮ್ಮಾಯಿ ಹೇಳುತ್ತಾರೆ. ಅವರದ್ದೇ ಪಕ್ಷದ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಸರ್ಕಾರಕ್ಕೆ ಬರೆದಿರುವುದು ದಾಖಲೆ ಆಗುವುದಿಲ್ಲವೇ ಎಂದು ಪ್ರಶ್ನೀಸಿದರು.

    ತರಾತುರಿಯಲ್ಲಿ ಕೋಟ್ಯಂತರ ಮೊತ್ತಕ್ಕೆ ಶಾರ್ಟ್ ಟೈಂ ಟೆಂಡರ್ ಕರೆದು ಬಿಜೆಪಿ ಪಾರ್ಟಿ ಫಂಡ್ ಸಂಗ್ರಹಿಸುತ್ತಿದೆ. ಅಂದಾಜು 20 ಸಾವಿರ ಕೋಟಿ ರೂ. ಪೆಂಡಿಂಗ್ ಬಿಲ್ ಇದೆ. ದುಡ್ಡು ಕೊಟ್ಟವರಿಗೆ ಬಿಲ್ ಪಾಸು ಮಾಡಲಾಗುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ತರಾತುರಿಯಲ್ಲಿ ಕರೆದಿರುವ ಟೆಂಡರ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ನಾಯಕರು ತಲೆ ತಿರುಕರೆಂಬ ಯಡಿಯೂರಪ್ಪ ಹೇಳಿಕೆಗೆ, ಅವರಿಗೆ ವಯಸ್ಸಾಗಿದೆ, ಅರಳು-ಮರಳು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts