More

    ಬಿಜೆಪಿ ಪ್ರಶ್ನೆಗೆ ಮತದಾರರಿಂದಲೇ ಉತ್ತರ

    ಬ್ಯಾಡಗಿ: ಜನರಲ್ಲಿ ಕೋಮುದ್ವೇಷ ಬಿತ್ತಿ ಅಧಿಕಾರಕ್ಕೇರಲು ಯತ್ನಿಸುತ್ತಿರುವ ಬಿಜೆಪಿ ಧಿಕ್ಕರಿಸಿ, ಎಲ್ಲರ ಹಿತ ಕಾಯುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬೆಂಬಲಿಸಲು ಮತದಾರರು ನಿರ್ಧರಿಸಿದ್ದಾರೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

    ತಾಲೂಕಿನ ಕಾಗಿನೆಲೆ, ಕುಮ್ಮೂರು, ಹಿರೇಹಳ್ಳಿ, ಚಿಕ್ಕಬಾಸೂರು, ಸೂಡಂಬಿ,ಹೊಂಬರಡಿ, ಕುರುಬಗೊಂಡ, ಕಬ್ಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಾವೇರಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಮಂಗಳವಾರ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
    ಕಾಂಗ್ರೆಸ್ ಏನು ಮಾಡಿದೆ ಎನ್ನುವ ಬಿಜೆಪಿಗೆ ನಾವು ಹೇಳುವುದಕ್ಕಿಂತ ಮತದಾರರೇ ಮೇ 7ರಂದು ಉತ್ತರಿಸಲಿದ್ದಾರೆ. ಆರು ದಶಕ ಕಾಲ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದ್ದು, ನೀರಾವರಿ, ಶಿಕ್ಷಣ, ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಮಾಡಿದೆ. ದೇಶಾದ್ಯಂತ ಕಾಂಗ್ರೆಸ್ ಅಲೆ ಎದ್ದಿದ್ದು, ಹೆಚ್ಚು ಸಂಸದರು ಆಯ್ಕೆಯಾಗುವರು ಎಂದರು.

    ಬಿಜೆಪಿಯವರು ಏನೇ ಕಸರತ್ತು ನಡೆಸಿದರೂ, ಬಡವರ ಮನಸು ಬದಲಿಸಲು ಸಾಧ್ಯವಿಲ್ಲ. ಎಲ್ಲಿ ನೋಡಿದರೂ ಕಾಂಗ್ರೆಸ್ ಗಾಳಿ ಬೀಸಿದ್ದು, ಬಿಜೆಪಿ ಸುಳ್ಳು ಸುದ್ದಿ ಹರಡಿಸುವ ಮೂಲಕ ಜನರ ದಿಕ್ಕುತಪ್ಪಿಸುವ, ಹೊಸ ಹೊಸ ತಂತ್ರಗಾರಿಕೆಗಳಿಗೆ ಮುಂದಾಗಿದೆ. ಮತದಾರರಿಗೆ ದೂರದ ಬೆಟ್ಟ ತೋರಿಸಲು ಹೋದರೆ ಮೆಚ್ಚುವುದಿಲ್ಲ, ಸತ್ಯವನ್ನು ನಂಬುವ ಜನರು ಕಾಂಗ್ರೆಸ್ ಕೈಹಿಡಿಯಲಿದ್ದಾರೆ ಎಂದರು.

    ಹಾವೇರಿ ಲೋಕಸಭೆ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಎರಡು ದಶಕ ಕಾಲ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಸ್ಥಳೀಯ ಎಲ್ಲ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರ ವಿಶ್ವಾಸ ಗಳಿಸಿದ್ದೇನೆ. ನನ್ನ ಗೆಲುವಿಗೆ ಎಲ್ಲರೂ ಪಣ ತೊಟ್ಟಿದ್ದಾರೆ. ಸ್ಥಳೀಯ ಮತದಾರರು ಮೂರು ಬಾರಿಯೂ ಬಿಜೆಪಿಗೆ ಅವಕಾಶ ಕಲ್ಪಿಸಿ ಬೇಸತ್ತಿದ್ದು, ಕಾಂಗ್ರೆಸ್ ಸರ್ಕಾರದ ಉತ್ತಮ ಸೇವೆ, ಕಾರ್ಯಕ್ರಮ ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದರು.

    ತಾಲೂಕು ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ವೀರನಗೌಡ್ರ ಪೋಲಿಸಗೌಡ್ರ, ಮಂಜನಗೌಡ್ರ ಲಿಂಗನಗೌಡ್ರ, ಚನ್ನಬಸಪ್ಪ ಹುಲ್ಲತ್ತಿ, ರುದ್ರಪ್ಪ ಹೊಂಕಣ, ಬೀರಪ್ಪ ಬಣಕಾರ, ಶಿವನಗೌಡ ಪಾಟೀಲ, ವೀರೇಶ ಮತ್ಚಿಹಳ್ಳಿ, ಬಸವರಾಜ ಬಳ್ಳಾರಿ, ಪರಮೇಶ ಚಿಕ್ಕಳ್ಳಿ, ಸುರೇಶ ಮೆಣಸಿನಹಾಳ, ಮಹದೇವಪ್ಪ ಓಲೇಕಾರ, ಲಿಂಗರಾಜ ಕುಮ್ಮೂರು, ಪ್ರಭುಗೌಡ್ರ ಪಾಟೀಲ, ಮಹೇಶಗೌಡ್ರ ಪಾಟೀಲ, ಮಾರುತಿ ಅಚ್ಚಿಗೇರಿ, ಮಲ್ಲಪ್ಪ ದೇಸಾಯಿ, ರವಿ ಪೂಜಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts