More

    ಕರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದ ಶಿವಸೇನಾ ಎಂಎಲ್​ಸಿಗೆ ಮತ್ತೆ ಆಸ್ಪತ್ರೆ ದಾರಿ ತೋರಿದ ಹಾವು!

    ಮುಂಬೈ: ಕರೊನಾ ವೈರಸ್​ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಮರಳಿದ್ದ ಆಡಳಿತಾರೂಢ ಶಿವಸೇನಾ ಪಕ್ಷದ ಎಂಎಲ್​ಸಿ ಹಾವು ಕಡಿತಕ್ಕೊಳಗಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿರುವ ಪ್ರಸಂಗ ಜರುಗಿದೆ.

    ಡಿಸ್ಚಾರ್ಜ್​ ಆಗಿ ಥಾನೆ ಯೂರ್​ ಹಿಲ್ಸ್​ನಲ್ಲಿರುವ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ರಾತ್ರಿ ಹಾವು ಕಡಿದಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪಕ್ಷದ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಸೌದೆ ತರಲು ಹೋಗಿದ್ದ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ವಿಡಿಯೋ ವೈರಲ್​ ಮಾಡಿದ ಕಾಮುಕರು

    ಮೇ 9ರಂದು ಶಿವಸೇನಾ ಎಂಎಲ್​ಸಿಗೆ ಕೋವಿಡ್​-19 ಪಾಸಿಟಿವ್​ ವರದಿಯಾಗಿತ್ತು. ಬಳಿಕ ಮುಲಂದ್​ನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ಅವರು ದಾಖಲಾಗಿದ್ದರು. ಶಾಸಕರ ಪತ್ನಿಗೂ ಮೇ ಮೊದಲ ವಾರದಲ್ಲಿ ಕರೊನಾ ಪಾಸಿಟಿವ್​ ಬಂದಿತ್ತು. ಶಾಸಕರು ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದರು. ಆದರೂ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಹೀಗಾಗಿ ಪಾರ್ಟಿ ಕಾರ್ಯಕರ್ತರಿಂದ ಅಂತರ ಕಾಯ್ದುಕೊಳ್ಳುವ ಸಲುವಾಗಿ ಸಂಜಯ್​ ಗಾಂಧಿ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಯೂರ್​ ಹಿಲ್ಸ್​ ಏರಿಯಾದಲ್ಲಿರುವ ನಿವಾಸದಲ್ಲಿ ವಾಸವಿದ್ದರು.

    ಇದನ್ನೂ ಓದಿ: ಪತ್ನಿ, ಮಗ ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿ ಶವವಾಗಿ ಬಿದ್ದಿದ್ದ ಡಿಎಸ್​ಪಿ: ಅಷ್ಟಕ್ಕೂ ನಡೆದಿದ್ದಾರೂ ಏನು?

    ಆದರೆ, ಶನಿವಾರ ಸಂಜೆ ಮನೆಯ ಮುಂದಿನ ಹುಲ್ಲು ಹಾಸಿನ ಮೇಲೆ ಕುಳಿತಿದ್ದಂತಹ ಸಂದರ್ಭದಲ್ಲಿ ವಿಷಕಾರಿ ಹಾವೊಂದು ಕಚ್ಚಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.

    ಯಾವುದೇ ಪ್ರಕರಣಗಳು ಇಲ್ಲದಿರುವುದರಿಂದ ಯೂರ್​ ಏರಿಯಾವನ್ನು ಕೋವಿಡ್​ 19 ಹಸಿರು ವಲಯ ಎಂದು ಘೋಷಿಸಲಾಗಿದೆ. (ಏಜೆನ್ಸೀಸ್​)

    ಇದನ್ನೂ ಓದಿ: ಗಂಡಿನ ವೀರ್ಯದಲ್ಲಿ ಕರೊನಾ: ಒಂದು ತಿಂಗಳು ಸೆಕ್ಸ್​ ಮಾಡ್ದಿದ್ರೆ ಒಳಿತು, ಇಲ್ಲದಿದ್ರೆ…!

    VIDEO| ಕರೊನಾ ಲಾಕ್​ಡೌನ್​ ಬಿಕ್ಕಟ್ಟಿನ ಸಮಯದಲ್ಲೂ ಗಂಗಾವತಿ ಪೊಲೀಸರ ಲಂಚ ದಾಹ ಬಟಾಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts