More

    ತಗ್ಗರ್ಸೆ ಕಂಬಳೋತ್ಸವ, ಕೆಸರುಗದ್ದೆ ಸ್ಪರ್ಧೆ

    ಬೈಂದೂರು: ನೂರಾರು ವರ್ಷಗಳ ಇತಿಹಾಸವಿರುವ ತಗ್ಗರ್ಸೆ ಕಂಬಳ ಬುಧವಾರ ತಗ್ಗರ್ಸೆ ಕಂಠದಮನೆ ಕುಟುಂಬಸ್ಥರ ಕಂಬಳಗದ್ದೆಯಲ್ಲಿ ವೈಭವದಿಂದ ನಡೆಯಿತು. ಬೆಳಗ್ಗೆ ಕಂಬಳ ಗದ್ದೆಗೆ ಖುರ್ಜು ನಿಲ್ಲಿಸಿ ತೋರಣಗಳಿಂದ ಅಲಂಕಾರಗೊಳಿಸಿ ನಂತರ ಪೂಜಾ ವಿಧಾನಗಳು ನೆರವೇರಿತು. ಅಪರಾಹ್ನದ ಬಳಿಕ ಓಟದ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಂಡು ಸಂಪ್ರದಾಯದಂತೆ ಕಂಬಳಕ್ಕೆ ಚಾಲನೆ ನೀಡಲಾಯಿತು.

    ಸಾಯಂಕಾಲ ಕಂಬಳೋತ್ಸವದ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ತಗ್ಗರ್ಸೆ ಕಂಠದಮನೆಯ ಟಿ. ನಾರಾಯಣ ಹೆಗ್ಡೆ ತಗ್ಗರ್ಸೆ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಬಾಬು ಶೆಟ್ಟಿ ತಗ್ಗರ್ಸೆ, ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು, ಬೈಂದೂರು ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ನಿರ್ಣಾಯಕ ರಾಜು ಮಾಸ್ಟರ್ ತಗ್ಗರ್ಸೆ, ಉದಯ ಹೆಗ್ಡೆ ತಗ್ಗರ್ಸೆ ಹಾಜರಿದ್ದರು. ಬೈಂದೂರು ಭಾಗದ 70ಕ್ಕೂ ಅಧಿಕ ಜೋಡಿ ಕೋಣಗಳು ಕಂಬಳೋತ್ಸವದಲ್ಲಿ ಭಾಗವಹಿಸಿದ್ದವು. ಬಳಿಕ ಯುವಕರಿಗೆ ಕೆಸರುಗದ್ದೆ ಓಟ ಸ್ಪರ್ಧೆ ನಡೆಯಿತು.

    ಸಾಂಪ್ರದಾಯಿಕ ಕೃಷಿ ಕಾರ್ಯ: ಕಂಠದಮನೆಯ ಎದುರು 5.14 ಎಕರೆ ವಿಸ್ತೀರ್ಣವಾದ ಕಂಬಳಗದ್ದೆಯಿದೆ. ವೀರಗಲ್ಲು, ಶಿಲಾಶಾಸನ ಇಲ್ಲಿದ್ದು, ಇದನ್ನು ದೇವರಗದ್ದೆ ಎಂದೂ ಕರೆಯಲಾಗುತ್ತದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ನಾಟಿ ಕಾರ್ಯಕ್ಕೆ ತಯಾರಿ ನಡೆಯುತ್ತದೆ. ಇಡೀ ಗದ್ದೆಯನ್ನು ಒಂದೇ ದಿನದಲ್ಲಿ ನಾಟಿ ಮಾಡಬೇಕು ಎಂಬ ಸಂಪ್ರದಾಯವಿದ್ದು, ಟ್ರಾೃಕ್ಟರ್ ಬಳಸಿ ಉಳುಮೆ ಮಾಡಲಾಗುತ್ತದೆ. ನೂರಾರು ಕೃಷಿ ಆಳುಗಳು ಒಂದೇ ದಿನದಲ್ಲಿ ಗದ್ದೆ ನಾಟಿ ಮಾಡಿ ಮುಗಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts