More

    ಗ್ರಾಪಂನಿಂದ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವಂತೆ ಎಸ್‌ಎಫ್‌ಐ ತಾಲೂಕು ಘಟಕ ಮನವಿ


    ಕನಕಗಿರಿ: ತಾಲೂಕಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಗ್ರಾಪಂ ನಿಧಿಯ ಶೇ.25 ಅನುದಾನದಲ್ಲಿ ಪಠ್ಯ ಪುಸ್ತಕ ವಿತರಿಸದಿರುವುದನ್ನು ಖಂಡಿಸಿ ಎಸ್‌ಎಫ್‌ಐ ತಾಲೂಕು ಘಟಕದಿಂದ ತಾಪಂ ನೌಕರ ಕೊಟ್ರೇಶಗೆ ಮನವಿ ಸಲ್ಲಿಸಲಾಯಿತು.

    ತಾಲೂಕು ಕಾರ್ಯದರ್ಶಿ ಶಿವಕುಮಾರ ಮಾತನಾಡಿ, ಗ್ರಾಪಂಗೆ ಸಾಕಷ್ಟು ಅನುದಾನ ಹರಿದು ಬರುತ್ತದೆ. ಅದರಲ್ಲಿ ಶೇ.25 ಎಸ್ಸಿ, ಎಸ್ಟಿ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲು ಸರ್ಕಾರ ಆದೇಶ ನೀಡಿದೆ. ಆದರೂ ಆದೇಶವನ್ನು ಪಾಲಿಸುವಲ್ಲಿ ಪಂಚಾಯಿತಿಯವರು ಹಿಂದೇಟು ಹಾಕುತ್ತಿರುವುದು ಪರಿಶಿಷ್ಟರ ವಿರೋಧಿ ನೀತಿಯಾಗಿದೆ. ಕಾಲೇಜುಗಳು ಆರಂಭವಾಗಿ ಏಳೆಂಟು ತಿಂಗಳು ಮುಗಿದಿದೆ. ಆದರೆ, ಇದುವರೆಗೂ ಗ್ರಾಪಂಗಳು ಪಠ್ಯಪುಸ್ತಕ ವಿತರಣೆಯಾಗದೇ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. ಕೂಡಲೇ ಪಿಯುಸಿ ವಿದ್ಯಾರ್ಥಿಗಳಿಗೆ 2000, ಪದವಿ ವಿದ್ಯಾರ್ಥಿಗಳಿಗೆ 3000 ರೂ. ಹಾಗೂ ವೃತ್ತಿಪರ ಹಾಗೂ ಉನ್ನತ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ 4000 ರೂ. ನೀಡಬೇಕು ಎಂದು ಆಗ್ರಹಿಸಿದರು.

    ಜಿಲ್ಲಾಧ್ಯಕ್ಷ ಸುಭಾನ್ ಸೈಯದ್ ಹುಲಿಹೈದರ ಮಾತನಾಡಿ, ಗ್ರಾಪಂನಿಂದ ವಾರ್ಡ್ ಸಭೆ, ಗ್ರಾಮ ಸಭೆ, ಕೆಡಿಪಿ ಸಭೆಗಳನ್ನು ನಡೆಸದೇ ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರು ಸೇರಿ ಕ್ರಿಯಾ ಯೋಜನೆ ಮಾಡಿ ಹಣವನ್ನು ಬೇಕಾ ಬಿಟ್ಟಿ ಪೋಲು ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಿ ಪಾರದರ್ಶಕ ಆಡಳಿತಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

    ಸಂಘಟನೆ ಮುಖಂಡರ ನಾಗರಾಜ ಲಾಯದುಣಸಿ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts