More

    ಉಗ್ರರ ಹಿಮ್ಮೆಟ್ಟಿಸಲು “ಕಮಾಂಡೋ ಪಡೆ’; ಎನ್​ಎಸ್​ಜಿ, ಎಸ್​ಪಿಜಿ ಮಾದರಿ ತರಬೇತಿ

    ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ
    ರಾಜ್ಯದಲ್ಲಿ ಭಯೋತ್ಪಾದಕರ ಚಟುವಟಿಕೆಗಳನ್ನು ತ್ವರಿತವಾಗಿ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಗೃಹ ಇಲಾಖೆ “ಕಮಾಂಡೋ ಪಡೆ’ಯನ್ನು ಸಜ್ಜುಗೊಳಿಸುತ್ತಿದೆ. ಇದಕ್ಕಾಗಿ ಎನ್​ಎಸ್​ಜಿ, ಎಸ್​ಪಿಜಿ ಮಾದರಿಯಲ್ಲಿ ಖಾಕಿ ಪಡೆಗೆ ವಿಶೇಷ ಕಠಿಣ ತರಬೇತಿ ನೀಡುತ್ತಿದೆ.
    ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಪ್ರಕರಣಗಳಿಗಿಂತ ಉಗ್ರರ ದಾಳಿಯಂಥ ಪ್ರಕರಣಗಳು ಭಿನ್ನ ಮತ್ತು ಭಯಾನಕ. ಅವುಗಳನ್ನು ಎದುರಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ನುರಿತ ಸಿಬ್ಬಂದಿಯಿಂದ ಮಾತ್ರ ಎದುರಾಳಿಗಳನ್ನು ಮಣಿಸಬಹುದು ಎಂಬುದನ್ನು ಮನಗಂಡ ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದಡಿ ಇಟ್ಟಿದೆ. ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಸಂಭವಿಸಿದರೆ ಕೂಡಲೇ ಅವುಗಳನ್ನು ಎದುರಿಸುವ ಉದ್ದೇಶದಿಂದ ಪೊಲೀಸ್​ ಇಲಾಖೆಯಲ್ಲಿ “ಸಿಟಿ ಸ್ಪೆಶಲ್​ ವೆಪನ್​ ಆ್ಯಂಡ್​ ಟ್ಯಾಕ್ಟಿಕ್ಸ್​’ (ಸಿಸ್ವಾಟ್​) ಹೆಸರಲ್ಲಿ ಕಮಾಂಡೋಗಳನ್ನು ತಯಾರು ಮಾಡುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಬೆಂಗಳೂರಿನಲ್ಲಿ “ಗರುಡ ಫೋಸ್೯​’ ಕಾರ್ಯತತ್ಪರವಾಗಿದೆ. 300ಕ್ಕೂ ಹೆಚ್ಚು ತರಬೇತಿ ಹೊಂದಿದ ಕಮಾಂಡೋಗಳು ಸನ್ನದ್ಧರಾಗಿದ್ದಾರೆ.
    ಬೆಂಗಳೂರು ನಂತರದಲ್ಲಿ ಹುಬ್ಬಳ್ಳಿ& ಧಾರವಾಡ, ಮೈಸೂರು, ಬೆಳಗಾವಿ, ಮಂಗಳೂರು, ಕಲಬುರಗಿ ಸೇರಿದಂತೆ ವಿವಿಧ ಮಹಾನಗರಗಳಿಗೂ ಈ ತಂಡವನ್ನು ವಿಸ್ತರಿಸಲಾಗುತ್ತಿದೆ. ಸ್ಥಳಿಯವಾಗಿ ಭಯೋತ್ಪಾದಕ ಕೃತ್ಯಗಳು ಸಂಭವಿಸಿದರೆ, ಈ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಿದೆ. ಭಯೋತ್ಪಾದಕರ ಹೆಡೆಮುರಿ ಕಟ್ಟಲಿದೆ. ಭವಿಷ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲೂ ಈ ತಂಡ ರಚಿಸುವ ಚಿಂತನೆ ನಡೆಸಿದೆ. ಮಿಲಿಟರಿ ಬಣ್ಣದ ಪ್ಯಾಂಟ್​, ಕಮಾಂಡೋ ಎಂದು ಬರೆದಿರುವ ಕಪು$್ಪಬಣ್ಣದ ಟಿಶರ್ಟ್​, ಶೂ, ಮತ್ತಿತರ ಉಡುಪಿನೊಂದಿಗೆ ಕಮಾಂಡೋಗಳು ಗಜಿರ್ಸಲಿದ್ದಾರೆ.
    ಹುಬ್ಬಳ್ಳಿ- ಧಾರವಾಡ ಕಮಿಷನರೇಟ್​ ವ್ಯಾಪ್ತಿಯ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್​)ನ 30 ಸಿಬ್ಬಂದಿ ಈ ತರಬೇತಿ ಪಡೆದಿದ್ದಾರೆ. ಇದರಲ್ಲಿ ಇಬ್ಬರು ಆರ್​ಎಸ್​ಐ 28 ಕಾನ್​ಸ್ಟೆಬಲ್​ಗಳಿದ್ದಾರೆ. ಸಿಎಆರ್​ ಡಿಸಿಪಿ ಮಾರ್ಗದರ್ಶನದಲ್ಲಿ ಇವರು ಕೆಲಸ ಮಾಡುತ್ತಾರೆ.
    ಬಾಕ್ಸ್​:
    ಹೇಗೆ ನಡೆಯುತ್ತೆ ಟ್ರೇನಿಂಗ್​ ?
    “ಬೆಂಗಳೂರಿನ ಸೆಂಟರ್​ ಫಾರ್​ ಕೌಂಟರ್​ ಟೆರರಿಸಂ’ ಕೇಂದ್ರದಲ್ಲಿ ಎರಡು ತಿಂಗಳ ಕಾಲ ಆಯ್ದ ಸಿಬ್ಬಂದಿಗೆ ಈ ತರಬೇತಿ ನೀಡಲಾಗುತ್ತದೆ. ಈ ಸಿಬ್ಬಂದಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಬುಲೆಟ್​ ಫ್ರೂಪ್​ ಜಾಕೆಟ್​, ಎಕೆ47, ಎಕ್ಸ್​ ಕ್ಯಾಲಿಬರ್​ ಸೇರಿದಂತೆ ವಿಶೇಷ ಕಿಟ್​ ನೀಡಲಾಗುತ್ತದೆ. ಇದರ ಬಳಕೆಯ ತರಬೇತಿಯನ್ನೂ ನೀಡಲಾಗುತ್ತದೆ. ಯೋಧರಿಗೆ ನೀಡುವ ತರಬೇತಿಯಂತೆ ಇಲ್ಲಿ ಕಠಿಣ ತರಬೇತಿ ನೀಡಲಾಗುತ್ತಿದೆ. ದೈಹಿಕ ಜತೆಗೆ ಮಾನಸಿಕವಾಗಿಯೂ ಗಟ್ಟಿಗೊಳಿಸಲಾಗುತ್ತದೆ. ತರಬೇತಿ ನಂತರವೂ ಕರ್ತವ್ಯದ ಸ್ಥಳದಲ್ಲಿ ನಿರಂತರವಾಗಿ ರಿರ್ಹರ್ಸಲ್​ ಮಾಡಿಸಲಾಗುತ್ತದೆ.
    ವಿಶೇಷ ಸಂದರ್ಭದಲ್ಲೂ ಬಳಕೆ
    ಪ್ರಧಾನಿ, ಮುಖ್ಯಮಂತ್ರಿ, ಗಣ್ಯರು ಆಗಮಿಸಿದ ಸಂದರ್ಭ, ಮಹತ್ವದ ಹಬ್ಬಗಳು, ಬೃಹತ್​ ರ್ಯಾಲಿಗಳು, ಗಲಭೆಯಂಥ ವಿಶೇಷ ಸಂದರ್ಭಗಳಲ್ಲೂ ಸ್ಥಳಿಯ ಪೊಲೀರಿಗೆ ಈ ಕಮಾಂಡೋ ಪಡೆ ಸಾಥ್​ ನೀಡಲಿದೆ.

    ಪ್ರಮುಖಾಂಶ

    • ಉಗ್ರರ ಹಿಮ್ಮೆಟ್ಟಿಸುವುದು
    • ಗರುಡ ಮಾದರಿ ಸಿಸ್ವಾಟ್​ ಸಜ್ಜು
    • ಆಯ್ದ ಸಿಬ್ಬಂದಿಗೆ ವಿಶೇಷ ತರಬೇತಿ
    • ಕಮಾಂಡೋಸ್​ಗೆ ವಿಶೇಷ ಉಡುಪು
    • ಅತ್ಯಾಧುನಿಕ ಶಸ್ತ್ರಾಸ್ತ್ರ ಟ್ರೇನಿಂಗ್​
    • ಬುಲೆಟ್​ ​ಫ್ರೂಪ್ ಜಾಕೆಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts