More

    ಅಡುಗೆ ಮನೆಯಲ್ಲಿ ಕೇಳಿಬಂತು ವಿಚಿತ್ರ ಶಬ್ದ: ಫೋಟೋ ಕ್ಲಿಕ್ಕಿಸಿ ನೋಡಿದವ ಮನೆ ಬಿಟ್ಟು ಪರಾರಿ!

    ನ್ಯೂಯಾರ್ಕ್​: ರಾತ್ರಿ ಮನೆಯ ಅಡುಗೆ ಕೋಣೆಯಿಂದ ಕೇಳಿಬಂದ ವಿಚಿತ್ರ ಶಬ್ದದಿಂದ ಎಚ್ಚರಗೊಂಡ ವ್ಯಕ್ತಿಯೊಬ್ಬ ತನ್ನ ಖಾಲಿ ಅಡುಗೆ ಕೋಣೆಯ ಫೋಟೋ ಕ್ಲಿಕ್ಕಿಸಿ ನೋಡಿದಾಗ ಅದರಲ್ಲಿದ್ದ ವಿಚಿತ್ರ ಆಕಾರ ನೋಡಿ ತುಂಬಾ ಭಯಭೀತನಾಗಿ ಇದೀಗ ಮನೆಯನ್ನೇ ಖಾಲಿ ಮಾಡಿದ್ದಾನೆ.

    ಈ ಮೊದಲು ತನಗಾದ ಭಯಾನಕ ಅನುಭವನ್ನು ಹೆಸರೇಳಲು ಇಚ್ಛಿಸಿದ ಅಮೆರಿಕ ವ್ಯಕ್ತಿ ರೆಡಿಟ್​ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಅಲ್ಲದೆ, ತಾನು ಸೆರೆಹಿಡಿದ ಫೋಟೋವನ್ನು ಸಹ ಪೋಸ್ಟ್​ ಮಾಡಿ, “ಅಡುಗೆ ಕೋಣೆಯಲ್ಲಿ ವಿಚಿತ್ರ ಶಬ್ದ ಕೇಳಿ ಎಚ್ಚರಗೊಂಡು ಫೋಟೋ ತೆಗೆದು ನೋಡಿದಾಗ” ಎಂದು ಫೋಟೋಗೆ ಅಡಿಬರಹವನ್ನು ನೀಡಿದ್ದ. ತುಂಬಾ ಭಯವಾಗಿರುವುದಾಗಿ ಹೇಳಿದ್ದ ಆತ ಇದೀಗ ಮನೆಯನ್ನೇ ಖಾಲಿ ಮಾಡಿದ್ದಾನೆ.

    ಅಡುಗೆ ಮನೆಯಲ್ಲಿ ಬಟ್ಟೆಯನ್ನು ಎಸೆದಾಡುವುದು ಮತ್ತು ಓಡಾಡುವ ಶಬ್ದವನ್ನು ಕೇಳಿ ಎಚ್ಚರಗೊಂಡೆ ಆ ವೇಳೆ ನಾನೊಬ್ಬನೆ ಮನೆಯಲ್ಲಿದ್ದೆ. ಅಡುಗೆ ಮನೆಯ ಬಾಗಿಲು ತೆರೆದು ಫೋಟೋವನ್ನು ಕ್ಲಿಕ್ಕಿಸಿದಾಗ ತನ್ನತ್ತ ನೋಡುತ್ತಿರುವ ಮುಖದ ಆಕಾರವೊಂದು ಫೋಟೋದಲ್ಲಿತ್ತು. ಇದರಿಂದ ನಾನು ತುಂಬಾ ಭಯಗೊಂಡೆ ಎಂದು ಅಮೆರಿಕ ವ್ಯಕ್ತಿ ಹೇಳಿಕೊಂಡಿದ್ದಾನೆ.

    ಇದನ್ನೂ ಓದಿ: ಗ್ರಾ.ಪಂ ಚುನಾವಣೆಯಿಂದ ಇಕ್ಕಟ್ಟಿಗೆ ಸಿಲುಕಿದ್ರಾ ಸಂಸದೆ ಸುಮಲತಾ? ಮಂಡ್ಯದಲ್ಲಿ ನಡಿತಿದೆ ಬಿಸಿ ಬಿಸಿ ಚರ್ಚೆ

    ಅಡುಗೆ ಮನೆಯಲ್ಲಿ ಕೇಳಿಬಂತು ವಿಚಿತ್ರ ಶಬ್ದ: ಫೋಟೋ ಕ್ಲಿಕ್ಕಿಸಿ ನೋಡಿದವ ಮನೆ ಬಿಟ್ಟು ಪರಾರಿ!

    ಇನ್ನು ಮಂದ ಬೆಳಕಿನಲ್ಲಿ ತೆಗೆದಿರುವ ಫೋಟೋವನ್ನು ಆರಂಭದಲ್ಲಿ ನೋಡಿದಾಗ ಅದರಲ್ಲಿ ಏನೂ ಇಲ್ಲ ಎಂಬಂತೆ ಕಾಣುತ್ತದೆ. ಆದರೆ, ಸೂಕ್ಷ್ಮವಾಗಿ ಗಮನಿಸಿದಾಗ ಕೌಂಟರ್​ಟಾಪ್​ನಲ್ಲಿ ಕೆಲವು ಪ್ರತ್ಯೇಕಿಸಲಾಗದ ವಸ್ತುಗಳು ಇಟ್ಟಿರುವಂತೆ ಕಾಣುತ್ತದೆ. ಜೂಮ್​ ಮಾಡಿದಾಗ ಬಾಗಿಲ ಹಿಂಬದಿ ಯಾರೋ ತಲೆ ಇಟ್ಟು ಬಗ್ಗಿ ನೋಡುತ್ತಿರುವಂತೆ ಭಾಸವಾಗುತ್ತದೆ. ನೆಟ್ಟಿಗರು ಸಹ ಜೂಮ್​ ಮಾಡಿ ನೋಡುವವರೆಗೂ ಫೋಟೋದಲ್ಲಿ ಏನೂ ಇಲ್ಲ ಅಂದುಕೊಂಡಿದ್ದೆವು ಎಂದು ತಿಳಿಸಿದ್ದರು.

    ಅನೇಕ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಈಗಲೂ ಸಹ ಏನಿದೆ ಎಂದು ಗುರುತಿಸಲು ಆಗಿಲ್ಲ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಬಾಗಿಲ ಮೇಲೆ ಪಾರದರ್ಶಕ ಮುಖ ಕಾಣುತ್ತದೆ ಎಂದಿದ್ದಾರೆ. ಇದೇನಾದರೂ ಸುಳ್ಳಾಗಿರದಿದ್ದರೆ ನಿಜಕ್ಕೂ ಅಲ್ಲಿ ದೆವ್ವವಿದೆ. ಆದರೆ, ಅದು ದೆವ್ವ ಆಗಿರಬಾರದು ಎಂದು ನಾನು ಬಯಸುತ್ತೇನೆ ಎಂದು ನೆಟ್ಟಿಗನೊಬ್ಬ ಕಮೆಂಟಿಸಿದ್ದಾನೆ. ಕೆಲವರು ಮಾಸ್ಕ್​ ಇರಬಹುದು ಎಂದು ವಾದ ಮಾಡಿದ್ದಾರೆ. ಕೆಲವರು ಇದು ಎಡಿಟ್​ ಮಾಡಿರುವ ಚಿತ್ರ ಇಬಹುದು ಎಂದಿದ್ದು, ಫೋಟೋದಲ್ಲಿ ಸ್ಪಷ್ಟತೆ ಇಲ್ಲ ಎಂದಿದ್ದಾರೆ.

    ಇದನ್ನೂ ಓದಿ: PHOTOS| ಬಿಕಿನಿ ಬ್ಯೂಟಿ ಯಾರೆಂದು ಗುರುತಿಸುವಿರಾ? ಕನ್ನಡಗರಿಗೂ ಚಿರಪರಿಚಿತ ಈ ಮಾದಕ ನಟಿ!

    ಫೋಟೋ ಭಾರಿ ವೈರಲ್​ ಆಗಿದ್ದು, 1000ಕ್ಕೂ ಹೆಚ್ಚು ಕಮೆಂಟ್ಸ್​ಗಳು ಹರಿದುಬಂದಿದೆ. ಇನ್ನು ಫೋಟೋ ಸನ್ನಿವೇಶದ ಬಗ್ಗೆ ವಿವರಣೆ ನೀಡಿರುವ ಅಮೆರಿಕ ವ್ಯಕ್ತಿ, ನನಗೆ ಇದು ಗೊಂದಲವಾಗಿದೆ. ನಾನು ಮೂವರು ಸ್ನೇಹಿತರೊಂದಿಗೆ ಇದ್ದೇನೆ. ಫೋಟೋ ತೆಗೆಯುವ ಸಮಯದಲ್ಲಿ ಮನೆಯಲ್ಲಿ ನಾನೊಬ್ಬನೆ ಇದ್ದೆ. ಫೋಟೋ ತೆಗೆದು ನೋಡಿದ ಬಳಿಕ ಅಡುಗೆ ಮನೆಯನ್ನು ಪರಿಶೀಲಿಸಿದೆ. ಆದರೆ, ಯಾರು ಇರಲಿಲ್ಲ. ಮನೆಯ ಮುಖ್ಯ ದ್ವಾರ ಮುಚ್ಚಲಾಗಿತ್ತು. ಕಿಟಕಿಗಳು ಕೂಡ ತೆರೆದಿರಲಿಲ್ಲ. ಆದರೆ, ಏನು ನಡೆದಿದೆ ಎಂಬುದರ ಬಗ್ಗೆ ಐಡಿಯಾ ಇಲ್ಲ ಎಂದಿದ್ದ. ಇದೀಗ ತುಂಬಾನ ಭಯಗೊಂಡು ಮನೆಯನ್ನೆ ತೊರೆದಿದ್ದಾನೆ. (ಏಜೆನ್ಸೀಸ್​)

    ಅಡುಗೆ ಮನೆಯಿಂದ ಕೇಳಿಬಂದ ವಿಚಿತ್ರ ಶಬ್ದದ ಬೆನ್ನಲ್ಲೇ ಫೋಟೋ ಕ್ಲಿಕ್ಕಿಸಿ ನೋಡಿದವನಿಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts