More

    ಕಾಟಾಚಾರಕ್ಕೆ ನಿಯಮ ಪಾಲನೆ

    ತೇರದಾಳ: 6 ರಿಂದ 9ನೇ ತರಗತಿ ವಿದ್ಯಾಗಮ ಹಾಗೂ ಎಸ್.ಎಲ್.ಎಸ್.ಸಿ, ಪಿಯು ದ್ವಿತೀಯ ವರ್ಗಗಳು ಶುಕ್ರವಾರ ಆರಂಭವಾದವು. ಈಗಾಗಲೇ ಶಿಕ್ಷಕರು ಕೋವಿಡ್ ಪರೀಕ್ಷೆಗೊಳಪಟ್ಟಿದ್ದು ಶಾಲೆ-ಕಾಲೇಜುಗಳಲ್ಲಿ ಪುರಸಭೆ ವತಿಯಿಂದ ಸ್ಯಾನಿಟೈಸರ್ ಮಾಡಲಾಗಿದೆ.

    ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪರಸ್ಪರ ಅಂತರ ಕಾಪಾಡಿದ್ದು ಮತ್ತೆ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಬರುವುದು, ವರ್ಗಗಳಲ್ಲಿ ಕುಳಿತುಕೊಳ್ಳುವುದು, ಮರಳಿ ಮನೆಗೆ ಹೋಗುವುದು ಕಂಡು ಬಂದಿತು.

    ಪ್ರಭುಲಿಂಗ ಪ್ರೌಢ ಮತ್ತು ಪಿಯು ಕಾಲೇಜಿಗೆ ಮಾಸ್ಕ್ ಇಲ್ಲದೆ ಬಂದಿದ್ದ ಮಕ್ಕಳನ್ನು ಮನೆಗೆ ಮರಳಿ ಕಳುಹಿಸಲಾಯಿತು. ಕೆಲವೆಡೆ ಶಿಕ್ಷಕರು ಮಾಸ್ಕ್ ಧರಿಸದೆ, ಗುಂಪು ಗುಂಪಾಗಿ ಕುಳಿತಿರುವುದು ಕಂಡು ಬಂದಿತು. ಸಿದ್ಧೇಶ್ವರ ಪ್ರೌಢಶಾಲೆ ಮಕ್ಕಳು ಮನೆಗೆ ತೆರಳುವಾಗ ಪರಸ್ಪರ ಅಂತರ, ಮಾಸ್ಕ್ ಇಲ್ಲದೆ ಗುಂಪಾಗಿ ತೆರಳುವುದು ಕಂಡುಬಂದಿತು. ಶುಕ್ರವಾರ ಹೊಸವರ್ಷದ ದಿನವಾಗಿದ್ದರಿಂದ ಶಾಲೆಗಳಲ್ಲಿ ತೆರೆಮರೆಯಲ್ಲಿಯೇ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಪ್ರಸಂಗವೂ ನಡೆಯಿತು.

    ಶುಕ್ರವಾರ ಶಾಲೆ ಪ್ರಾರಂಭದ ಮೊದಲ ದಿನವಾಗಿದ್ದರಿಂದ ಎಲ್ಲ ವರ್ಗದ ಮಕ್ಕಳಿಗೂ ಬರಲು ತಿಳಿಸಲಾಗಿತ್ತು. ಸೋಮವಾರದಿಂದ ಪ್ರತಿ ವರ್ಗಕ್ಕೂ ಒಂದೊಂದು ದಿನ ಸಮಯ ನಿಗದಿ ಪಡಿಸಿ ವೇಳಾಪಟ್ಟಿಯಂತೆ ಪಾಠ ನಡೆಸಲಾಗುವುದು. ಪ್ರಾರ್ಥನೆ ಮತ್ತು ಆಟಗಳಿಗೆ ಅವಕಾಶವಿಲ್ಲ. ಮನೆಯಿಂದಲೇ ನೀರು, ಊಟದ ಬುತ್ತಿಯನ್ನು ಮಕ್ಕಳು ತರಬೇಕು. ಮಾಸ್ಕ್ ಸೇರಿ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳವುದು ಕಡ್ಡಾಯವಾಗಿದೆ.
    ಎಸ್.ಬಿ. ಬುರ್ಲಿ, ಶಿಕ್ಷಣ ಸಂಯೋಜಕರು, ರಬಕವಿ-ಬನಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts