More

    ಪ್ರಜಾಪ್ರಭುತ್ವದ ತಿಳಿವಳಿಕೆ ಅವಶ್ಯ

    ತೇರದಾಳ: ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತಾಗಿ ಭಾರತೀಯರೆಲ್ಲರಿಗೂ ಸಂಪೂರ್ಣ ತಿಳಿವಳಿಕೆ ಅವಶ್ಯವಾಗಿದ್ದು, ಮಕ್ಕಳು ತಮ್ಮ ಪೌರನೀತಿ ಅಭ್ಯಾಸಕ್ಕಾಗಿ ಸರ್ಕಾರದ ಆಯ್ಕೆ, ವಿರೋಧ ಪಕ್ಷಗಳ ಜವಾಬ್ದಾರಿ, ಆಡಳಿತ ಪಕ್ಷದವರ ಕಾರ್ಯತತ್ಪರತೆ ಕುರಿತು ಸಂಪೂರ್ಣ ಜ್ಞಾನ ಹೊಂದಿರಬೇಕು ಎಂದು ಶಿಕ್ಷಕ ವಿ.ಎಸ್. ಅಂಗಡಿ ಹೇಳಿದರು.

    ನಗರದ ಸಿದ್ಧೇಶ್ವರ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಾಲಾ ಸಂಸತ್ ಅಣುಕು ಅಧಿವೇಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಜಾ ಪ್ರತಿನಿಧಿಗಳಿಗೆ ನಾಡಿನ ಅಭಿವೃದ್ಧಿ ಗುರಿಯಾಗಿರಬೇಕು. ತಪ್ಪಿದಲ್ಲಿ ವಿರೋಧ ಪಕ್ಷದವರ ಟೀಕೆಗೆ ಗುರಿಯಾಗುತ್ತಾರೆ ಎಂಬುದನ್ನು ಮಕ್ಕಳು ಸುಂದರವಾಗಿ ಅಣುಕು ಅಧಿವೇಶನದಲ್ಲಿ ಪ್ರಸ್ತುತಪಡಿಸಿದ್ದು ಶ್ಲಾಘನೀಯ ಎಂದರು.

    ಸಂಸತ್‌ನ ಪ್ರಧಾನಮಂತ್ರಿಯಾಗಿ ಗೌತಮ ಮಹಾಲಿಂಗಪುರ, ವಿರೋಧ ಪಕ್ಷದ ನಾಯಕರಾಗಿ ಸಂಜು ಮುದಕಣ್ಣವರ, ಸಚಿವರಾಗಿ ಯಶಸ್ವಿನಿ ಹರವಿ, ಆಕಾಶ ನಿರ್ವಾಣಿ, ಸಮ್ಮೇದ ಮಡಿವಾಳ, ವಿದ್ಯಾ ಮಾಳಿ, ಸ್ನೇಹಾ ಹುದ್ದಾರ, ಈಶ್ವರಿ ಮುಕುಂದ, ಭವ್ಯಾ ಉಳಗೊಂಡ, ವಿಕಾಸ ನಡುವಿನಕೇರಿ, ರೇಣುಕಾ ಮಾಲಗಾಂವಿ, ಕೀರ್ತಿ ಮಾಳೇದ, ಕಾರ್ತಿಕ ಕುರುಪೆ ಕಾರ್ಯನಿರ್ವಹಿಸಿದರು.

    ಆಡಳಿತ ಪಕ್ಷದವರು ವಿವಿಧ ಪ್ರಶ್ನೆಗಳನ್ನು ಎತ್ತುವ ಮೂಲಕ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ವಿರೋಧ ಪಕ್ಷದಲ್ಲಿ ಮೃತ್ಯುಂಜಯ ಒಂಟಗುಡಿ, ಶ್ರದ್ಧಾ ಹರವಿ, ಸಪ್ನಾ ಚವಡಿ, ಸಂಜೋತಾ ತೆಗ್ಗಿನಮನಿ ಗಮನ ಸೆಳೆದರು. ಸಭಾಪತಿಯಾಗಿ ಭುವನೇಶ್ವರಿ ಲೋಕಾಪುರ ಕಾರ್ಯನಿರ್ವಹಿಸಿದರು. ಮುಖ್ಯಶಿಕ್ಷಕಿ ಬಿ.ಜಿ. ಮುದಕಣ್ಣವರ, ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts