More

    ಜನರಿಲ್ಲದೆ ಭಣಗುಡುತ್ತಿರುವ ಕಚೇರಿಗಳು

    ತೇರದಾಳ: ಕರೊನಾ ವೈರಸ್ ಸೋಂಕು ಹಿನ್ನೆಲೆ ಹಲವು ದಿನನಿತ್ಯ ಜನರಿಂದ ಗಿಜಿಗುಡುತ್ತಿದ್ದ ಪಟ್ಟಣದ ವಿಶೇಷ ತಹಸೀಲ್ದಾರ್, ನೋಂದಣಿ ಕಚೇರಿಗಳಲ್ಲಿ ಸೋಮವಾರ ಅಧಿಕಾರಿಗಳನ್ನು ಹೊರತುಪಡಿಸಿದರೆ ಬೇರೊಬ್ಬರು ಕಾಣಲಿಲ್ಲ.

    ಸರ್ಕಾರಿ ಆದೇಶದ ಪ್ರಕಾರ ಕಂದಾಯ ಇಲಾಖೆಯ ಅಟಲಜೀ ಜನಸ್ನೇಹಿ ಕೇಂದ್ರ, ಸ್ಪಂದನ ಕೇಂದ್ರ, ಆಧಾರ್ ಕೇಂದ್ರಗಳು ಸೇರಿ ವಿವಿಧ ಇಲಾಖೆಗಳ ಹಲವು ಸೇವೆಗಳು ಬಂದ್ ಆಗಿರುವುದರಿಂದ ಕಚೇರಿ ಆವರಣಗಳು ಜನರಿಲ್ಲದೇ ಭಣಗುಡುತ್ತಿದ್ದವು. ಇನ್ನೂ ಕೃಷಿ ಇಲಾಖೆಯಲ್ಲಿ ಆನ್‌ಲೈನ್ ಆಧಾರಿತ ಸೇವೆಗಳಿದ್ದು, ಯಾವುದೇ ಸೇವೆ ಸ್ಥಗಿತಗೊಂಡಿಲ್ಲ ಎಂಬ ಮಾತುಗಳು ಕೇಳಿಬಂದವು. ಕರೊನಾ ಹಿನ್ನೆಲೆ ರೈತರು ಗುಂಪುಗುಂಪಾಗಿ ಬರಬಾರದೆಂಬ ನಿರ್ದೇಶನ ಇದೆ ಎಂದು ರೈತ ಸಂಪರ್ಕ ಕೇಂದ್ರ ಅಧಿಕಾರಿ ಎಸ್.ಎಂ. ಬಿರಾದಾರ ತಿಳಿಸಿದರು. ಪಟ್ಟಣದ ಹೋಟೆಲ್, ತಂಪು ಪಾನೀಯ ಸೇರಿ ಹಲವು ಅಂಗಡಿಗಳನ್ನು ಅಧಿಕಾರಿಗಳು ಬಂದ್ ಮಾಡಿಸಿದರು.

    ಇತ್ತೀಚಿನ ದಿನಗಳಲ್ಲಿ ಕಾಗದ ಪತ್ರ ಝರಾಕ್ಸ್ ಸೇರಿ ಆನ್‌ಲೈನ್ ಸಂಬಂಧಿತ ಸೇವೆ ಪಡೆಯುವ ಗ್ರಾಹಕರು ಕಡಿಮೆಯಾಗಿದ್ದಾರೆ. ಸಾರ್ವಜನಿಕರಿಗೆ ಉಪಯೋಗವಾಗುವ ಹಲವು ಆನ್‌ಲೈನ್ ಸೈಟ್‌ಗಳು ಕೂಡ ಬಂದ್ ಆಗಿವೆ. ವ್ಯಾಪಾರದಲ್ಲಿ ಸಾಕಷ್ಟು ಇಳಿಕೆಯಾಗಿದೆ.
    – ಮಂಜು ಯಬರಟ್ಟಿ ತೇರದಾಳ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts