More

    ದೇಗುಲಗಳಲ್ಲಿ ಪೂಜಾ ಕೈಂಕರ್ಯ ನಿರಂತರವಾಗಿರಲಿ: ಪುರುಷೋತ್ತವಾನಂದನಾಥ ಸ್ವಾಮೀಜಿ ಸಲಹೆ

    ಮಂಡ್ಯ: ದೇವಸ್ಥಾನಗಳನ್ನು ಕಟ್ಟುವುದು ದೊಡ್ಡದಲ್ಲ. ಬದಲಿಗೆ ಅಲ್ಲಿ ವರ್ಷಪೂರ್ತಿ ಪೂಜಾ ಕಾರ್ಯಗಳು ನಡೆಯಬೇಕು ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತವಾನಂದನಾಥ ಸ್ವಾಮೀಜಿ ತಿಳಿಸಿದರು.
    ತಾಲೂಕಿನ ಪುರದಕೊಪ್ಪಲು ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಶ್ರೀ ವೀರಾಂಜನೇಯಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ದೇವಸ್ಥಾನದಲ್ಲಿ ವಷರ್ದ 365 ದಿನಗಳು ಪೂಜಾ ಕಾರ್ಯಕ್ರಮಗಳು, ಹಾಗೂ ಸೇವಾ ಕಾರ್ಯಗಳು ನಡೆಯಬೇಕು. ಶ್ರೀರಾಮನವಮಿ ಹಾಗೂ ಹನುಮ ಜಯಂತಿ ಕಾರ್ಯಕ್ರಮಗಳು ದೊಡ್ಡಮಟ್ಟದಲ್ಲಿ ನಡೆಯಬೇಕು ಎಂದರು.
    ದೇಶದ ಎಲ್ಲ ಕಡೆ ಶ್ರೀ ರಾಮನ ಭಕ್ತನಾದ ಆಂಜನೇಸ್ವಾಮಿ, ವಾರಮ್ಮ, ಭೈರವೇಶ್ವರ ದೇವಾಲಯಗಳನ್ನು ಕಾಣಬಹುದು. ದೇವರ ಪ್ರೀತಿ ಗಳಿಸಬೇಕಾದರೆ ಭಕ್ತಿಯಿಂದ ಪೂಜೆ ವಾಡಬೇಕು. ಭಕ್ತಿಯಿಂದ ಆಂಜನೇಯ ಸ್ವಾಮಿ ಪೂಜೆ ವಾಡಿದರೆ ಪ್ರತಿಯೊಬ್ಬರಿಗೂ ಒಲಿಯುತ್ತಾನೆ. ಆಂಜನೇಯನ ಸದ್ಗುಣಗಳು ನಿಮಗೆ ಬರಲಿ. ದೇಶದ ಎಲ್ಲ ಭಾಗಗಳಲ್ಲೂ ಆದಿಚುಂಚನಗಿರಿ ಶಾಖಾ ಮಠಗಳು ಮತ್ತು ಶಾಲಾ ಕಾಲೇಜುಗಳಿದ್ದು, ಬಡ ಮಕ್ಕಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
    ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ವಾತನಾಡಿ, ವಾಜಿ ಮುಖ್ಯಮಂತ್ರಿ ಎಚ್.ಡಿ.ಕುವಾರಸ್ವಾಮಿ ಅವರು ದುದ್ದ ಹೋಬಳಿಯ ಈ ಭಾಗಕ್ಕೆ ಅನೇಕ ಅಭಿವದ್ಧಿ ಕಾಮಗಾರಿಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಪುರದಕೊಪ್ಪಲಿನ ಶಿವಲಿಂಗೇಶ್ವರ ದೇವಸ್ಥಾನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮಂಗಳೂರು ಕ್ಷೇತ್ರದಲ್ಲಿರುವ ದೇವಸ್ಥಾನದ ವಾದರಿಯಲ್ಲಿ ನಿರ್ಮಿಸುತ್ತಿದ್ದು, ಎಲ್ಲರೂ ಜವಾಬ್ದಾರಿ ತೆಗೆದುಕೊಂಡು ಬರುವ ಶಿವರಾತ್ರಿ ಹಬ್ಬದ ವೇಳೆಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
    ಮುದಗಂದೂರು ಗ್ರಾಪಂ ಅಧ್ಯಕ್ಷ ಶಂಕರೇಗೌಡ, ಗುತ್ತಿಗೆದಾರರಾದ ಬೆಟ್ಟೇಗೌಡ, ಬಾಲರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts