More

    ಹುಲಿವಾನದಲ್ಲಿ ದೇವಸ್ಥಾನ ಪ್ರತಿಷ್ಠಾಪನೆ: ಅಪಾರ ಸಂಖ್ಯೆಯ ಭಕ್ತರು ಭಾಗಿ

    ಮಂಡ್ಯ: ತಾಲೂಕಿನ ಹುಲಿವಾನ ಗ್ರಾಮದಲ್ಲಿರುವ ಸೋಮನಹಳ್ಳಿ ಅಮ್ಮ ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಸೋಮನಹಳ್ಳಿ ಅಮ್ಮ ಮತ್ತು ಕೋಟೆ ಮಾರಮ್ಮ ದೇವಸ್ಥಾನ ಪ್ರತಿಷ್ಠಾನ ಮಹೋತ್ಸವ ಅಪಾರ ಭಕ್ತರ ನಡುವೆ ಯಶಸ್ವಿಯಾಗಿ ನಡೆಯಿತು.
    ದೇವಾಲಯದಲ್ಲಿ ಬೆಳಗ್ಗಿನಿಂದಲೇ ಸೋಮನಹಳ್ಳಿ ಅಮ್ಮ ಮತ್ತು ಕೋಟೆ ಮಾರಮ್ಮ ದೇವರ ಪ್ರಾಣ ಪ್ರತಿಷ್ಠಾಪನೆ, ಚಂಡಿಕಾ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ದೇವಿ ಮೂರ್ತಿಗೆ ವಿವಿಧ ಪುಷ್ಪಾಲಂಕಾರ ಮಾಡಲಾಗಿತ್ತು. ಗೃಹಿಣಿಯರು ತಂಬಿಟ್ಟಿನ ಆರತಿ ಸೇವೆ ನೀಡಿದರು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿದ್ದರು.
    ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಮೂಲತಃ ಚೀಣ್ಯದಲ್ಲಿ ನೆಲೆಸಿದಂತಹ ಸೋಮನಹಳ್ಳಿ ಅಮ್ಮನವರು ಗ್ರಾಮದಲ್ಲಿ ನೆಲೆಸಿ ಭಕ್ತರ ಕಷ್ಟ ತೀರಿಸುತ್ತಿದ್ದಾರೆ. 25 ಗ್ರಾಮಕ್ಕೂ ಹೆಚ್ಚು ದೇವಿಯ ಭಕ್ತರಿದ್ದಾರೆ. 80 ಲಕ್ಷ ರೂ. ಖರ್ಚು ಮಾಡಿ ಮರುನಿರ್ಮಾಣ ಮಾಡಲಾಗಿದೆ. ಹುಲಿವಾನ, ಬೋರಾಪುರ, ತೊರೆಚಾಕನಹಳ್ಳಿ, ಗೆಂಡೆಹೊಸಹಳ್ಳಿ, ಬಿ.ಹೊಸೂರು, ಜೀಗುಂಡಿಪಟ್ಟಣ, ಲಕ್ಕೋಜನಹಳ್ಳಿ, ಅನಸೋಸಲು, ಚಿಕ್ಕಬಳ್ಳಿ, ಅಂಕಣದೊಡ್ಡಿ, ಹೊಡಾಘಟ್ಟ, ಉಮ್ಮಡಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು.
    ಟ್ರಸ್ಟ್ ಅಧ್ಯಕ್ಷ ಎಸ್.ನಂಜಯ್ಯ, ಉಪಾಧ್ಯಕ್ಷ ಜಯರಾಂ, ಕಾರ್ಯದರ್ಶಿ ಕಾಳೇಗೌಡ, ಲಿಂಗೇಗೌಡ, ಯಜಮಾನ್ ಶಿವಪ್ರಕಾಶ್, ಎಲ್ಐಸಿ ಕೃಷ್ಣ, ಅಂಬಿ, ರಮೇಶ್, ಮಂಜು, ವಿಜಯಕುಮಾರ್, ದೇವಾಲಯದ ಅರ್ಚಕ ಆರ್.ಸುಧೀಂದ್ರಚಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts