More

    ದೇವಾಲಯ ಸಂಸ್ಕಾರ ಬೆಳೆಸುವ ಕೇಂದ್ರವಾಗಲಿ: ಮೈಸೂರಿನ ಸೋಮನಾಥ ಸ್ವಾಮೀಜಿ ಕಿವಿಮಾತು

    ಮಂಡ್ಯ: ದೇವಾಲಯಗಳನ್ನು ನಿರ್ಮಿಸುವುದರ ಜತೆಗೆ ಅವುಗಳನ್ನು ಸಂಸ್ಕಾರ ಕೇಂದ್ರವಾಗಿಯೂ ಬದಲಾವಣೆ ಮಾಡಿಕೊಳ್ಳಬೇಕು ಎಂದು ಆದಿಚುಂಚನಗಿರಿಯ ಮೈಸೂರು ಶಾಖಾಮಠದ ಮುಖ್ಯಸ್ಥ ಸೋಮನಾಥ ಸ್ವಾಮೀಜಿ ಹೇಳಿದರು.
    ತಾಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕಾಲಭೈರವೇಶ್ವರಸ್ವಾಮಿ ಪ್ರತಿಷ್ಠಾಪನೆ ಹಾಗೂ ಮಾರಮ್ಮ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
    ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಬೆಳೆಸಬೇಕು. ಇದರಿಂದ ಭವಿಷ್ಯದಲ್ಲಿಯೂ ಸರಿಯಾದ ಮಾರ್ಗ ಅನುಸರಿಸುತ್ತಾರೆ. ಮಾತ್ರವಲ್ಲದೆ, ಪಾಲಕರು, ಗುರು, ಬಂಧು ಬಾಂಧವರನ್ನು ಹಾಗೂ ಸಮಾಜವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ದೇವಸ್ಥಾನ ಸಹ ಸಂಸ್ಕಾರ ಕೊಡುವ ಪವಿತ್ರ ಸ್ಥಳವಾಗಿದೆ. ಭಗವಂತನ ನಾಮಸ್ಮರಣೆ ಮಾಡಿದರೆ ಸಮಸ್ಯೆಗಳು ದೂರವಾಗಿ ಎಲ್ಲವೂ ಲಭ್ಯವಾಗುತ್ತವೆ ಎಂದು ತಿಳಿಸಿದರು.
    ಭೂಮಿ ತಾಯಿಯನ್ನು ನಂಬಿರುವ ರೈತರು ದಿನಕ್ಕೆ ಒಮ್ಮೆಯಾದರೂ ಭಗವಂತನ ಕಡೆ ಮುಖ ಮಾಡಿದರೆ ಮನಸ್ಸು ಶಾಂತವಾಗಿರುತ್ತದೆ. ಅದೇ ರೀತಿ ಭಗವಂತನ ಕಡೆ ಮುಖ ಮಾಡಿ ಜನರು ದಿನಕ್ಕೊಮ್ಮೆ ನೋಡಿದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದರು.
    ಕಾರ್ಯಕ್ರಮವನ್ನು ಶಾಸಕ ಎಂ.ಶ್ರೀನಿವಾಸ್ ಉದ್ಘಾಟಿಸಿದರು. ಬಿ.ಗೌಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಜೆ.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಕೀಲಾರ ರಾಧಾಕೃಷ್ಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಅಶೋಕ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ವಿ.ಶ್ರೀಧರ್, ಮುಖಂಡರಾದ ವಿ.ತಮ್ಮಣ್ಣ, ನಾಗರಾಜು, ಮಹೇಂದ್ರ, ಜಿ.ಕೆ.ಶಶಿಕುಮಾರ್, ಕೌಶಿಕ್, ಅಜಯ್‌ಕುಮಾರ್, ಜಯಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts