More

    ಸಿಬ್ಬಂದಿಗೆ ಒಂದಂಕಿ ಸಂಬಳ ಕೊಟ್ಟ ತೆಲಂಗಾಣ ಸಾರಿಗೆ ಸಂಸ್ಥೆ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ…!

    ಹೈದರಾಬಾದ್​: ಲಾಕ್​ಡೌನ್​ ಅವಧಿಯಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸಂಬಳ ಕಡಿತ ಈಗಲೂ ಮುಂದುವರಿದಿದೆ. ಸನ್ಣಪುಟ್ಟ ಉದ್ಯಮಗಳನ್ನು ನಡೆಸುತ್ತಿದ್ದವರು ಅದನ್ನು ಪುನಾರಂಭಿಸದ ಸ್ಥಿತಿಯಲ್ಲಿದ್ದಾರೆ.

    ಈ ಸಂಕಷ್ಟಕ್ಕೆ ಸರ್ಕಾರಿ ನೌಕರರು ಹೊರತೇನಲ್ಲ. ಅದರಲ್ಲೂ ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಪಡೆದ ಸಂಬಳ ಕೇಳಿದ್ರೆ ಅಚ್ಚರಿಯಾಗದೇ ಇರದು. ಲಾಕ್​​ಡೌನ್​ ಸಮಯದಲ್ಲಿ ಬಸ್​ ಸಂಚಾರ ಸ್ಥಗಿತಗೊಂಡಿದ್ದರಿಂದ ಸಿಬ್ಬಂದಿಯ ವೇತನ ಕಡಿತಕ್ಕೆ ಆದೇಶಿಸಲಾಗಿತ್ತು.

    ಇದನ್ನೂ ಓದಿ; ಮಹಾಕ್ರಾಂತಿಗೆ ಸಜ್ಜಾಗಿದೆ ರಿಲಯನ್ಸ್​ ರಿಟೇಲ್​; ಅಮೆಜಾನ್​, ವಾಲ್​ಮಾರ್ಟ್​ ದೈತ್ಯರಿಗೆ ಶುರುವಾಯ್ತು ಭೀತಿ

    ಇತ್ತೀಚೆಗಷ್ಟೇ ಅವರ ಅವರ ಖಾತೆಗೆ ಸಂಬಳ ಪಾವತಿಸಿದ ಬಗ್ಗೆ ಮೆಸೇಜ್​ಗಳು ಬಂದಾಗ ಸಿಬ್ಬಂದಿಗೆ ನೆಲವೇ ಕುಸಿದಂತಾಗಿದೆ. ಏಕೆಂದರೆ, ಒಬ್ಬರ ಖಾತೆಗೆ 7 ರೂ., ಮತ್ತೊಬ್ಬರಿಗೆ 57 ರೂ. ಪಾವತಿಸಲಾಗಿದೆ. 30,000ದಿಂದ 40,000 ರೂ.ವರೆಗೆ ಸಂಬಳ ಪಡೆಯುತ್ತಿದ್ದವರಲ್ಲಿ 1ಸಾವಿರದಿಂದ 4 ಸಾವಿರ ರೂ.ವರೆಗೆ ಪಾವತಿ ಮಾಡಲಾಗಿದೆ.

    ಲಾಕ್​ಡೌನ್​ ಅವಧಿಯಲ್ಲಿ ಸಹಜವಾಗಿಯೇ ಬಸ್​ ಸಂಚಾರವಿರಲಿಲ್ಲ. ಹೀಗಾಗಿ ಸಿಬ್ಬಂದಿಗೆ ಡಿಪೋಗೆ ಬಂದು ಸಹಿ ಹಾಕಲು ಸಾಧ್ಯವಾಗಿರಲಿಲ್ಲ. ಜತೆಗೆ, ವಾಹನ ಸಂಚಾರಕ್ಕೂ ನಿರ್ಬಂಧವಿತ್ತು. ಇದನ್ನು ರಜೆ ಎಂದೇ ಸಂಸ್ಥೆ ಪರಿಗಣಿಸಿದೆ. ಕೆಲವರ ರಜೆಗಳು ಖಾಲಿಯಾಗಿದ್ದರಿಂದ ಸಂಬಳ ಕಡಿತಮಾಡಲಾಗಿದೆ ಎಂಬುದು ಸಂಸ್ಥೆಯ ಅಧಿಕಾರಿಗಳ ವಾದ. ಮನೆಯಿಂದ ಹೊರಗೆ ಬರಲೇಬೇಡಿ ಎಂದಾಗ ಡಿಪೋಗೆ ಬಂದು ಸಹಿ ಹಾಕೋಕಾಗುತ್ತಾ ಎಂಬುದು ಸಿಬ್ಬಂದಿ ವಾದ.

    ಇದನ್ನೂ ಓದಿ; ಮಳೆ ನೀರಿಗೆ ಕೊಚ್ಚಿ ಹೋಯ್ತು 264 ಕೋಟಿ ರೂ…!; ಉದ್ಘಾಟನೆಗೊಂಡು ತಿಂಗಳು ಕಳೆದಿರಲಿಲ್ಲ

    ಕ್ವಾರಂಟೈನ್​ನಲ್ಲಿದ್ದವರು, ಅನಾರೋಗ್ಯ ಪೀಡಿತರಾಗಿದ್ದವರು ಡಿಪೋಗೆ ಹೋಗಿಲ್ಲ. ಅದನ್ನು ಪರಿಗಣಿಸದೆ ಸಂಬಳ ಕಡಿತ ಮಾಡಲಾಗಿದೆ ಎಂದು ನೌಕರರ ಒಕ್ಕೂಟ ಆರೋಪಿಸಿದೆ. ಸಾಲ ಮಾಡಿಕೊಂಡು ದಿನ ಕಳೆದಿದ್ದ ಸಿಬ್ಬಂದಿಗೆ ಈಗೇನಪ್ಪಾ ಮಾಡೋದು ಎಂಬ ಚಿಂತೆ ಎದುರಾಗಿದೆ.

    ಯಾವುದೇ ಕ್ಷಣದಲ್ಲಿ ಹೊರಬೀಳಬಹುದು ಆಕ್ಸ್​ಫರ್ಡ್​ ಕರೊನಾ ಲಸಿಕೆಯ ಶುಭಸುದ್ದಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts