More

    ತೆಲಂಗಾಣ ಗೃಹ ಸಚಿವರಿಗೆ ಕೊವಿಡ್​-19 ಸೋಂಕು; ಆಸ್ಪತ್ರೆಗೆ ದಾಖಲು

    ಹೈದರಾಬಾದ್​: ಕರೊನಾ ಸೋಂಕು ಹಲವು ಜನಪ್ರತಿನಿಧಿಗಳಿಗೆ ಒಕ್ಕರಿಸುತ್ತಿದೆ. ಇದೀಗ ತೆಲಂಗಾಣ ಗೃಹ ಸಚಿವ ಮೊಹಮ್ಮದ್​ ಮಹಮೂದ್​ ಅಲಿ ಅವರಿಗೂ ಈ ಮಹಾಮಾರಿ ಸೋಂಕು ತಗುಲಿದೆ. ಭಾನುವಾರ ಸಂಜೆ ಸಚಿವರಲ್ಲಿ ಕರೊನಾ ದೃಢಪಟ್ಟಿದ್ದು, ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ.

    ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಹೈದರಾಬಾದ್​ನ ಜ್ಯುಬ್ಲೀ ಹಿಲ್​ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾದರು. ಇದೀಗ ಅಲ್ಲೇ ಅಡ್ಮಿಟ್​ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಚಿವರು ಕೆಮ್ಮು, ಜ್ವರ, ಶೀತದಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ಕೆಲವು ದಿನಗಳ ಹಿಂದೆ ಅವರ ಐವರು ಗನ್​ಮೆನ್​ಗಳಲ್ಲಿ ಕರೊನಾ ದೃಢಪಟ್ಟಿತ್ತು. ಆಗಲೇ ಅವರೂ ತಪಾಸಣೆಗೆ ಒಳಗಾಗಬೇಕಿತ್ತು. ಆದರೆ ಸಚಿವರು ಈ ಮಧ್ಯೆ ಕೆಲವು ಸರ್ಕಾರಿ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದಾರೆ. (ಏಜೆನ್ಸೀಸ್​)

    ನಮ್ಮ ಬೆಂಬಲ ಬಿಜೆಪಿಗೆ ಎಂದ್ರು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ; ಕಾಂಗ್ರೆಸ್​ ವಿರುದ್ಧ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts