More

    ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ತೇಜಸ್ವಿ ವಿಪಕ್ಷ ನಾಯಕನಾಗಬಾರದು- ಜೆಡಿಯು ಆಗ್ರಹ

    ಪಟನಾ: ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ನಾಯಕ ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರದ ಆರೋಪ ಮತ್ತು ಸಾಕಷ್ಟು ಕ್ರಿಮಿನಲ್ ಕೇಸ್​ಗಳಿವೆ. ಆದ್ದರಿಂದ ಅವರು ವಿಪಕ್ಷ ನಾಯಕರಾಗಬಾರದು ಎಂದು ಜೆಡಿಯು ರಾಜ್ಯ ಅಧ್ಯಕ್ಷ ವಸಿಷ್ಠ ನಾರಾಯಣ ಸಿಂಗ್ ಮತ್ತು ಕಾರ್ಯಾಧ್ಯಕ್ಷ ಅಶೋಕ್ ಚೌಧರಿ, ವಕ್ತಾರರಾದ ಸಂಜಯ್ ಸಿಂಗ್​, ನೀರಜ್ ಕುಮಾರ್​, ಅಜಯ್ ಅಲೋಕ್ ಆಗ್ರಹಿಸಿದ್ದಾರೆ.

    ಎನ್​ಡಿಎ ಸಚಿವ ಸಂಪುಟದಿಂದ ಜೆಡಿಯು ನಾಯಕ ಮೇವಾ ಲಾಲ್ ಚೌಧರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆರ್​ಜೆಡಿ ಒತ್ತಡ ಹೇರಿತ್ತು. ಚೌಧರಿ ವಿರುದ್ಧ ಭ್ರಷ್ಟಾಚಾರ ಕೇಸ್​ಗಳಿವೆ. ಅವರು ಶಿಕ್ಷಣ ಸಚಿವ ಸ್ಥಾನದಲ್ಲಿ ಮುಂದುವರಿಯುವುದು ಸರಿಯಲ್ಲ ಎಂದು ಕಿಚ್ಚೆಬ್ಬಿಸಿತ್ತು. ಪರಿಣಾಮ, ಚೌಧರಿ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಇದರ ಬೆನ್ನಿಗೆ, ಆರ್​ಜೆಡಿ ನಾಯಕನ ವಿರುದ್ಧವೇ ಜೆಡಿಯು ನಾಯಕರು ತೊಡೆ ತಟ್ಟಿದ್ದು, ವಿಪಕ್ಷ ನಾಯಕ ಸ್ಥಾನದಲ್ಲಿ ತೇಜಸ್ವಿ ಕೂರಬಾರದು ಎಂದು ಆಗ್ರಹಿಸಿ ಗಮನಸೆಳದಿದೆ.

    ಇದನ್ನೂ ಓದಿ: ತಾಯಿಯೇ ಹಂತಕಿಯಾದಾಗ…: ಡಾ.ಡಿ.ವಿ.ಗುರುಪ್ರಸಾದ್ ಅವರ ಆ ಕ್ಷಣ.. ಅಂಕಣ

    ಚೌಧರಿ ಪರ ಬ್ಯಾಟಿಂಗ್ ಆರಂಭಿಸಿದ ಜೆಡಿಯು ನಾಯಕರು, ನೇರವಾಗಿ ಚೌಧರಿಯವರನ್ನು ಬೆಂಬಲಿಸಿಲ್ಲ. ಕಳಂಕಿತರನ್ನು ಪಕ್ಷ ಬೆಂಬಲಿಸುವುದಿಲ್ಲ. ಆಡಳಿತಾರೂಢ ಪಕ್ಷದ ಶಾಸಕರ ವಿರುದ್ಧ ಕೇಸ್ ದಾಖಲಾದಾಗಲೂ ಕಾನೂನು ಕ್ರಮ ಜರುಗಿಸುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಅಪರಾಧ, ಭ್ರಷ್ಟಾಚಾರ ಮತ್ತು ಕೋಮು ವಿಚಾರವನ್ನು ಮುಖ್ಯಮಂತ್ರಿ ಸಹಿಸುವುದಿಲ್ಲ. ಅವರದ್ದು ಸ್ವಚ್ಛ ಇಮೇಜ್ ಇದೆ. ಆದರೆ, ಆರ್​ಜೆಡಿ ನಾಯಕರ ಸ್ಥಿತಿ ಅದಲ್ಲವಲ್ಲ. ಯಾದವ್ ವಿರುದ್ಧವೇ ಸಾಕಷ್ಟು ಕೇಸ್​ಗಳಿವೆ. ಎಸ್​ಸಿ/ಎಸ್​ಟಿ ಕಾಯ್ದೆ ಪ್ರಕಾರದ ಕೇಸ್​ಗಳೂ ಇವೆ. ಚುನಾವಣಾ ಆಯುಕ್ತರಿಗೆ ಸಲ್ಲಿಸಿದ ಅಫಿಡವಿಟ್​ನಲ್ಲೂ ಎಲ್ಲ ಕೇಸ್​ಗಳನ್ನು ನಮೂದಿಸಿಲ್ಲ ಅವರು. ಹೀಗಾಗಿ ಅವರು ವಿಪಕ್ಷ ನಾಯಕ ಸ್ಥಾನಕ್ಕೇರಲು ಅನರ್ಹರಾಗಿದ್ದಾರೆ ಎಂದು ಜೆಡಿಯು ನಾಯಕರು ಹೇಳಿದ್ದಾರೆ. (ಏಜೆನ್ಸೀಸ್)

    ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಮಂಡಳಿ – ನಾಳೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts