More

    ದತ್ತಪೀಠ ಹಿಂದು ಕ್ಷೇತ್ರವೆಂದು ಘೊಷಿಸಿ

    ಶಿಕಾರಿಪುರ: ಚಿಕ್ಕಮಗಳೂರು ದತ್ತಪೀಠ ಪ್ರಕರಣವನ್ನು ಕೂಡಲೇ ಇತ್ಯರ್ಥಗೊಳಿಸಿ, ಅದನ್ನು ಹಿಂದು ಧಾರ್ವಿುಕ ಕ್ಷೇತ್ರವೆಂದು ಘೊಷಿಸುವಂತೆ ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ಸದಸ್ಯರು ಮಂಗಳವಾರ ತಹಸೀಲ್ದಾರ್ ಕವಿರಾಜ್ ಅವರಿಗೆ ಮನವಿ ಸಲ್ಲಿಸಿದರು.

    ಸಮಿತಿ ಸದಸ್ಯ ಪರಶುರಾಮ್ ಮಾತನಾಡಿ, ಚಿಕ್ಕಮಗಳೂರಿನ ದತ್ತಪೀಠ ಕೋಟ್ಯಂತರ ಹಿಂದುಗಳ ಶ್ರದ್ಧಾಕೇಂದ್ರ. ಡೆಕ್ಸ್ ಆಫ್ ಲ್ಯಾಂಡ್ಸ್, ರೆಕಾರ್ಡ್ ಆಫ್ ರಾಯಿಟ್ಸ್, ಖಾತಾವಾರು ಸವೇೕ ಸೆಟ್ಲ್​ಮೆಂಟ್ ದಾಖಲೆಯಲ್ಲಿ ಇನಾಂ ದತ್ತಾತ್ರೇಯ ಪೀಠ ಗ್ರಾಮದ ಸ.ನಂ. 195ರಲ್ಲಿ ದತ್ತಪೀಠ ಎಂದು ನಮೂದಿಸಲಾಗಿದೆ. ಆದರೆ ಕಾಲಾಂತರದಲ್ಲಿ ಅಕ್ರಮವಾಗಿ ಅನ್ಯ ಕೋಮಿನವರು ಈ ಸ್ಥಳವನ್ನು ಅತಿಕ್ರಮಿಸಿದ್ದಾರೆ ಎಂದು ದೂರಿದರು.

    ಇತ್ತೀಚೆಗೆ ಅಲ್ಲಿ ಘೊರಿಗಳನ್ನು ನಿರ್ವಿುಸಲಾಗಿದೆ ಎಂಬ ಕಾರಣಕ್ಕೆ ದತ್ತಪೀಠವನ್ನು ದತ್ತಿ ಇಲಾಖೆಗೆ ವರ್ಗಾಯಿಸಲಾಗಿದೆ. ಈ ನಡುವೆ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣವನ್ನು ರಾಜ್ಯ ಸರ್ಕಾರವೇ ಬಗೆಹರಿಸಬೇಕೆಂದು ಕೋರ್ಟ್ ಹೇಳಿತ್ತು. ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಅನ್ಯ ಕೋಮಿನ ಮುಜಾವರ್​ನನ್ನು ನೇಮಿಸಿ ಹಿಂದುಗಳಿಗೆ ಅನ್ಯಾಯವೆಸಗಿದೆ ಎಂದು ಆರೋಪಿಸಿದರು.

    ಮುಜರಾಯಿ ಇಲಾಖೆ ಆಯುಕ್ತರು ಸೂಚಿಸಿದಂತೆ ದತ್ತಪೀಠದಲ್ಲಿ ಹಿಂದು ಅರ್ಚಕರನ್ನೂ ಕೂಡಲೇ ನೇಮಿಸಬೇಕು. ತ್ರಿಕಾಲ ಪೂಜೆ ನಡೆಯಲು ಅವಕಾಶ ನೀಡಬೇಕು ಹಾಗೂ ಕಾಂಗ್ರೆಸ್ ಕಾಲಾವಧಿಯಲ್ಲಿ ನೇಮಕವಾದ ಮುಜಾವರ್ ನೇಮಕ ರದ್ದು ಮಾಡಬೇಕೆಂದು ಆಗ್ರಹಿಸಿದರು.

    ಹಿಂದು ಜನಜಾಗೃತಿ ಸಮಿತಿಯ ಪ್ರಕಾಶ್ ಜನ್ನು, ಪ್ರಕಾಶ್, ಈರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts